| ಪ್ರತಿದಿನ 25 ವಿವಾಹ ವಿಚ್ಛೇದನ ಪ್ರಕರಣ ದಾಖಲು! | | | ಬೆಂಗಳೂರು, ಶುಕ್ರವಾರ, 5 ಜೂನ್ 2009( 17:22 IST ) | | | |
| | |
| ಸಿಲಿಕಾನ್ ಸಿಟಿ, ಉದ್ಯಾನನಗರಿಯಲ್ಲಿ ಪ್ರತಿದಿನ 25 ವಿವಾಹ ವಿಚ್ಛೇದನದ ಪ್ರಕರಣ ದಾಖಲಾಗುತ್ತಿದ್ದು, ಕಳೆದ ಆರು ತಿಂಗಳಲ್ಲಿ 1,400 ಪ್ರಕರಣಗಳು ದಾಖಲಾಗುವ ಮೂಲಕ ದಾಖಲೆ ಸೃಷ್ಟಿಸಿದೆ!.2009 ರ ಜನವರಿಯಿಂದ ಜೂನ್ ತಿಂಗಳವರೆಗೆ ಇಷ್ಟು ಪ್ರಮಾಣದಲ್ಲಿ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಹೊಂದಾಣಿಕೆಯ ಕೊರತೆಯಿಂದಾಗಿ ನಾವು ಜೊತೆಯಾಗಿ ಬಾಳಲು ಇಷ್ಟ ಪಡಲಾರೆವು ಎಂದು 1,400 ಜೋಡಿಗಳು ನಿರ್ಧರಿಸಿದ್ದಾರೆ, ಅಲ್ಲದೇ ವಿವಾಹ ವಿಚ್ಛೇದನಕ್ಕೆ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.2008 ರಲ್ಲಿ ಒಟ್ಟು 5ಸಾವಿರ ವಿವಾಹ ವಿಚ್ಚೇದನ ಪ್ರಕರಣಗಳು ದಾಖಲಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ 1,400ಮಂದಿ ವಿವಾಹ ವಿಚ್ಛೇದನಕ್ಕೆ ಕೋರಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರುವ ಪತಿ-ಪತ್ನಿಯರ ಬಿರುಕಿನ ದಾಂಪತ್ಯ ಪ್ರಕರಣ ಹೆಚ್ಚುತ್ತಿರುವುದಕ್ಕೆ ಸಾಕ್ಷಿ ಒದಗಿಸಿದೆ.ಸಿವಿಲ್ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನ ಪ್ರಕರಣದ ತೀರ್ಪು ತುಂಬಾ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ 1984ರಲ್ಲಿ ಕುಟುಂಬ ನ್ಯಾಯಾಲಯವನ್ನು ಅಸ್ತಿತ್ವಕ್ಕೆ ತರಲಾಗಿತ್ತು, ಈಗಾಗಲೇ 800 ದೂರುಗಳು ಇತ್ಯರ್ಥಕ್ಕೆ ಬಾಕಿ ಉಳಿದಿದೆ. ಆದರೆ ಇದೀಗ ಪ್ರತಿದಿನ 25 ಪ್ರಕರಣಗಳು ದಾಖಲಾಗುತ್ತಿರುವುದಾಗಿ ಕುಟುಂಬ ನ್ಯಾಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.ಪತಿ-ಪತ್ನಿಯರ ವಿವಾಹ ವಿಚ್ಛೇದನ ಪ್ರಕರಣದ ತೀರ್ಪು ನೀಡಲು ಕನಿಷ್ಠ ಎರಡು ತಿಂಗಳ ಕಾಲಾವಕಾಶ ಬೇಕಾಗುತ್ತದೆ, ಹೀಗೆ ಅಧಿಕ ಸಂಖ್ಯೆಯಲ್ಲಿ ಪ್ರಕರಣ ದಾಖಲಾಗುತ್ತ ಹೋದರೆ ತೀರ್ಪು ವಿಳಂಬವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. |
| |
| | |
| | | |
|
| | |
|
|
| | |
|
|
| |
|  | |