ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೆರಿಗೆ ಉಳಿತಾಯಕ್ಕೆ ಬಂಡವಾಳ ಹೂಡಿಕೆಯೇ ಪರಿಹಾರ
ಆದಾಯ ತೆರಿಗೆ ಪಾವತಿಯ ಭಾರವನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕು ಎಂದು ನಮ್ಮ ಅಂತರ್ಜಾಲ ಓದುಗರು ಕೇಳಿದ ಪ್ರಶ್ಮೆಗಳು ತೆರಿಗೆ ಪಾವತಿ ಕುರಿತಂತೆ ಎದುರಾಗುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಎದುರಾಗುವ ಪ್ರಶ್ನೆಗಳಿಗೆ ಲೊಕೇಶ್ ನಾಥಾನಿ ಉತ್ತರಿಸಿದ್ದಾರೆ.

1) ಆದಾಯ ತೆರಿಗೆ ಕಾಯಿದೆಯ ಕಲಂ u/s 80C, 80D ಅಡಿಯಲ್ಲಿ ವೇತನ ಪಡೆಯುವ ವ್ಯಕ್ತಿ ಎಷ್ಟು ವಿದಗಳಲ್ಲಿ ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿ ಪಡೆಯಬಹುದು ?

ವೇತನ ಪಡೆಯುವ ವ್ಯಕ್ತಿಗಳು ಸರಿಯಾದ ರೀತಿಯಲ್ಲಿ ಯೋಜನೆ ಮಾಡಿಕೊಂಡಲ್ಲಿ ತೆರಿಗೆಯ ಭಾರವನ್ನು ಕಡಿಮೆ ಮಾಡಿಕೊಳ್ಳಬಹುದು.

ಸೆಕ್ಷನ್ 24ರ ಅಡಿಯಲ್ಲಿ ಎಪ್ರಿಲ್ 1 1999ರ ನಂತರ ಪಡೆದ ಗೃಹಸಾಲದ ಮೇಲಿನ ಬಡ್ಡಿಯು 1.50 ಲಕ್ಷ ರೂಗಳಿಗೆ ಮಿರದಂತೆ ವಿನಾಯಿತಿ ಪಡೆಯಬಹುದು. ಎಪ್ರಿಲ್ 1, 1999ರ ಮುಂಚೆ ತೆಗೆದುಕೊಂಡ ಗೃಹ ಸಾಲದ ಮೇಲೆ ಪಾವತಿ ಮಾಡಿದ ಬಡ್ಡಿಯಲ್ಲಿ 30 ಸಾವಿರ ರೂಗಳ ವಿನಾಯಿತಿ ಇದೆ.

ಸೆಕ್ಷನ್ 80C ಅಡಿಯಲ್ಲಿ ರಾಷ್ಟ್ರೀಯ ಉಳಿತಾಯ ಪತ್ರ, ಕೆಲ ಬ್ಯಾಂಕ್ ಠೇವಣಿಗಳು, ಕಾರ್ಮಿಕ ಭವಿಷ್ಯ ನಿಧಿ, ಸಾರ್ವಜನಿಕ ಭವಿಷ್ಯ ನಿಧಿ, ಮ್ಯುಚುವಲ್ ಫಂಡ್ ಕಂಪನಿ ಪ್ರಾಯೋಜಿತ ಉಳಿತಾಯ ಯೋಜನೆಗೆ ಹೊಂದಿಕೊಂಡಂತಿರುವ ಬಂಡವಾಳ ಹೂಡಿಕೆ. ಈಕ್ವಿಟಿ ಲಿಂಕಡ್ ಸೆವಿಂಗ್ಸ್ ಸ್ಕೀಮ್ (ELSS)

ಸೆಕ್ಷನ್ 80CCC ಪ್ರಕಾರ ಆದಾಯ ತೆರಿಗೆ ಕಾಯಿದೆಯ u/s 80C ನಿಯಮದಲ್ಲಿ ನಮೂದಿಸಿರುವ ಮೊತ್ತ ಮೀರದಂತೆ ವಿಮಾದಾರರ ನಿವೃತ್ತಿ ವೇತನಗಳಲ್ಲಿ ಹಣ ತೊಡಗಿಸಬಹುದು.

ಸೆಕ್ಷನ್ 80D ನಿಯಮವು ಸ್ವಂತಕ್ಕೆ. ಪತ್ನಿಗೆ ಮತ್ತು ಅವಲಂಬಿತ ಪೋಷಕರು ಮತ್ತು ಮಕ್ಕಳ ಹೆಸರಿನಲ್ಲಿ ಮಾಡಿಸಿರುವ ವೈದ್ಯಕೀಯ ವಿಮಾ ಪಾಲಿಸಿಗಳಿಗೆ ಮತ್ತು ಹಿಂದು ಅವಿಭಕ್ತ ಕುಟುಂಬಗಳು ಗರಿಷ್ಟ್ 15 ಸಾವಿರ ರೂಗಳ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದು. ಹಿರಿಯ ನಾಗರಿಕರಿಗೆ 20 ಸಾವಿರ ರೂಗಳ ತೆರಿಗೆ ವಿನಾಯಿತಿ ಇದ್ದು. ಈ ವಿನಾಯಿತಿಯು ತೆರಿಗೆಗೆ ಒಳಪಡುವ ಮೊತ್ತದಿಂದ ವಜಾಗೊಳ್ಳುತ್ತದೆ.

ಅವಲಂಬಿತ ವ್ಯಕ್ತಿಯು ಅಂಗ ವೈಕಲ್ಯ ಹೊಂದಿದ್ದು ಆ ವ್ಯಕ್ತಿಗೆ ಭರಿಸಲಾದ ವೈದ್ಯಕೀಯ ವೆಚ್ಚಗಳಲ್ಲಿ 50 ಸಾವಿರ ರೂಗಳ ವಿನಾಯಿತಿಯನ್ನು ಸೆಕ್ಷನ್ 80DD ಅಡಿಯಲ್ಲಿ ಪಡೆಯಬಹುದು. ಪ್ರತಿ ಶತ ನೂರರಷ್ಟು ಅಂಗವೈಕಲ್ಯ ಇರುವ ವ್ಯಕ್ತಿಗೆ ಭರಿಸಲಾಗಿರುವ ವೆಚ್ಚಗಳಲ್ಲಿ ರೂ 75 ಸಾವಿರ ರೂ ವಿನಾಯಿತಿ ಪಡೆಯಬಹುದು.

ಸೆಕ್ಷನ್ 80E ಅಡಿಯಲ್ಲಿ ಉನ್ನತ ಶಿಕ್ಷಣಕ್ಕೆ ಪಡೆದ ಸಾಲಕ್ಕೆ ಪಾವತಿ ಮಾಡಲಾಗಿರುವ ಬಡ್ಡಿಯು ತೆರಿಗೆ ವಿನಾಯಿತಿಗೆ ಒಳಪಡುತ್ತದೆ,

ಸೆಕ್ಷನ್ 80G ಅಡಿಯಲ್ಲಿ ಕೆಲ ಸಮಾಜ ಸೇವಾ ಸಂಸ್ಥೆಗಳಿಗೆ ನೀಡಲಾಗಿರುವ ದೇಣಿಗೆಯು ತೆರಿಗೆ ವಿನಾಯಿತಿಗೆ ಒಳಪಡುತ್ತದೆ. ಈ ಮಿತಿಯು ಶೇ 50 ರಿಂದ ಶೇ 100 ರವರೆಗೆ ತೆರಿಗೆ ವಿನಾಯಿತಿಗೆ ಒಳಪಡುತ್ತದೆ. ಆದರೆ ನೀಡಿರುವ ದೇಣಿಗೆಯು ಒಟ್ಟು ಆದಾಯದ ಶೇ 10ರಷ್ಟನ್ನು ಮೀರಕೂಡದು.

2) ತೆರಿಗೆ ಉಳಿತಾಯಕ್ಕೆ ಯಾವ ಈಕ್ವಿಟಿ ಲಿಂಕಡ್ ಸೆವಿಂಗ್ಸ್ ಸ್ಕೀಮ್ (ELSS) ಸೂಕ್ತ ?

ಪ್ರತಿದಿನ ಈಕ್ವಿಟಿ ಲಿಂಕಡ್ ಸೆವಿಂಗ್ಸ್ ಸ್ಕೀಮ್ (ELSS)ಗಳ ಶ್ರೇಯಾಂಕವು ಶೇರು ಮಾರುಕಟ್ಟೆಗೆ ತಕ್ಕಂತೆ ಬದಲಾಗುತ್ತಿರುವುದರಿಂದ ಅತ್ಯುತ್ತಮ ಯೋಜನೆ ಯಾವುದು ಎಂದು ನಿರ್ಧರಿಸುವುದು ಕಷ್ಟ. ಸಾಮಾನ್ಯವಾಗಿ ಎಸ್‌ಬಿಐ, ಫಿಡೆಲಿಟಿ, ಎಚ್‌ಡಿಎಫ್‌ಸಿ ಮತ್ತು ಕೊಟಕ್ ಮ್ಯುಚುವಲ್ ಫಂಡಗಳು ಇತ್ತೀಚಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡಿವೆ.

3) ಇಎಲ್ಎಸ್ಎಸ್ ಯೋಜನೆಯಡಿಯಲ್ಲಿ ಗಳಿಕೆ ಮಾಡಿರುವ ಹಣವನ್ನು ಮುಂಬರುವ ವರ್ಷಗಳಲ್ಲಿ ಹೂಡಿಕೆಯ ರೂಪದಲ್ಲಿ ಆದಾಯ ತೆರಿಗೆಗೆ ರಿಟರ್ನ್ ಸಲ್ಲಿಸಬಹುದೆ ?

ಗಳಿಕೆಯಾಗಿರುವ ಮೊತ್ತವನ್ನು ಯಾವುದೇ ಕಾರಣಕ್ಕೂ ಹೆಚ್ಚಿನ ಬಂಡವಾಳ ಎಂದು ತೋರಿಸಲಿಕ್ಕೆ ಬರುವುದಿಲ್ಲ. ಒಂದು ವೇಳೆ ನೀವು ಪುನರ್ ನಿವೇಶನ ಯೋಜನೆಯಡಿಯಲ್ಲಿ ಬಂಡವಾಳ ತೊಡಗಿಸಿದ್ದರೆ. ಯುನಿಟ್‌ಗಳ ಲೆಕ್ಕದಲ್ಲಿ ನಿಮಗೆ ಲಾಭಾಂಶ ಸಂದಾಯವಾಗುತ್ತದೆ. ಈ ರೀತಿ ಪುನರ್ ನಿವೇಶನವನ್ನು ಬಂಡವಾಳ ಎಂದು ಪರಿಗಣಿಸಬಹುದು.
ಸೌಜನ್ಯ: personalfinancewindow.com
ಮತ್ತಷ್ಟು
ಚುನಾವಣೆಯಲ್ಲಿ ಬಜೆಟ್ ಪರಿಣಾಮ
ವಾರದ ಸುದ್ದಿ ಸಾರ
ಮಾರ್ಚ್ 30 ಬೆಂಗಳೂರು ವಿಮಾನ ನಿಲ್ದಾಣ ಕಾರ್ಯಾರಂಭ
ಐಐಟಿ-ಜೆಇಇ ಒಂದು ಸವಾಲೇ?
ಹೋರಾಡು ಕನ್ನಡಿಗ- ಉಗ್ರರ ಬೇರು ಕೀಳಲು, ಆಡಳಿತ ಎಚ್ಚೆತ್ತುಕೊಳ್ಳಲು!
ಇಂಧನ ಬೆಲೆ ಏರಿಕೆ: ಅಂತಿಮ ಹೊರೆ ಜನರ ಮೇಲೆ