ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದುರ್ಬಲವಾಗುತ್ತಿರುವ ಶೇರು ವ್ಯವಹಾರ
ರಾಜೇಶ್ ಪಾಲವೀಯಾ
ಲೇಖಕರ ವಿವರಗಳು ವೀಕ್ಷಿಸಿ
ಅಮೆರಿಕದ ಅರ್ಥ ವ್ಯವಸ್ಥೆ ಒಂದು ಹಿಡಿತದವರೆಗೆ ಬರುವವರಗೆ ಭಾರತೀಯ ಶೇರು ಮಾರುಕಟ್ಟೆಯಲ್ಲಿ ಇನ್ನೂ ಕೆಲವು ದಿನಗಳ ಕಾಲ ಏರು ಪೇರಿನ ವಹಿವಾಟು ಕಂಡು ಬರಬಹುದು. ಮೂಲಭೂತವಾಗಿ ಭಾರತೀಯ ಶೇರು ಮಾರುಕಟ್ಟೆ ಸ್ಥಿರವಾಗಿದ್ದು ಆದರೆ ಅಮೆರಿಕದ ಅರ್ಥ ವ್ಯವಸ್ಥೆಯ ಕಾರಣ ಕೊಂಚ ಏರು ಪೇರು ಕಾಣುತ್ತಿದೆ.

ಜಾಗತಿಕ ಶೇರು ಮಾರುಕಟ್ಟೆಯ ಕುರಿತು ಏನೂ ಹೇಳುವುದು ಸಾಧ್ಯವಿಲ್ಲವಾದರೂ ಸ್ಥಳೀಯ ಮಾರುಕಟ್ಟೆ ಮಾತ್ರ ಕೆಲದಿನಗಳ ನಂತರ ಚೇತರಿಸಿಕೊಳ್ಳಬಹುದು. ಪೆಡರಲ್ ಬ್ಯಾಂಕ್‌ನಿಂದ ಇನ್ನಷ್ಟು ಬಡ್ಡಿದರಗಳ ಕಡಿತ ಉಂಟಾಗಬಹುದು. ಇದು ಮಾತ್ರ ಜಾಗತಿಕ ಶೇರು ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳದ ಪ್ರಮಾಣವನ್ನು ಏರು ಪೇರು ಮಾಡಬಹುದು.

ಎಪ್ರಿಲ್‌ನಿಂದ ಪ್ರಾರಂಭವಾಗಲಿರುವ ನೂತನ ಹಣಕಾಸು ವರ್ಷದಲ್ಲಿ ಉಳಿತಾಯಕ್ಕೆ ಹೂಡಿಕೆದಾರರು ಆದ್ಯತೆ ನೀಡಬಹುದು. ಭಾರತ ಜಾಗತಿಕ ಅರ್ಥವ್ಯವಸ್ಥೆಗೆ ಹೊಂದಿಕೊಂಡಿರುವುದರಿಂದ ಭಾರತೀಯ ಶೇರು ಮಾರುಕಟ್ಟೆಯ ಎಲ್ಲ ವಹಿವಾಟು ಅಮೆರಿಕದ ಆರ್ಥಿಕ ಬೆಳವಣಿಗೆ ಮೇಲೆ ಅವಲಂಬಿತವಾಗಿದೆ.

ಮಾರುಕಟ್ಟೆ ಚೇತರಿಸಿಕೊಳ್ಳಲು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ದಿನಗಳು ಬೇಕಾಗಬಹುದು. ಅಂದಾಜು ಮೂರರಿಂದ ನಾಲ್ಕು ತಿಂಗಳುಗಳ ಅವಧಿಯಲ್ಲಿ ಶೇರು ಮಾರುಕಟ್ಟೆ ಚೇತರಿಸಿಕೊಳ್ಳಬಹುದು. ಸಾದಾರಣವಾಗಿ ನಿಫ್ಟಿ 4800 ಮತ್ತು ಅದರಾಚೆ ವಹಿವಾಟು ನಡೆಸಿದಲ್ಲಿ ಮತ್ತೆ ಲಾಭದತ್ತ ಮುಖಮಾಡಬಹುದು. ಈ ಮೊದಲು ನಿಫ್ಟಿ 4800ರ ಗಡಿಗೆ ತಲುಪಿ ಪುನಃ ಚೇತರಿಸಿಕೊಂಡ ಉದಾಹರಣೆ ಇದೆ.
ಮತ್ತಷ್ಟು
ತೆರಿಗೆ ಉಳಿತಾಯಕ್ಕೆ ಬಂಡವಾಳ ಹೂಡಿಕೆಯೇ ಪರಿಹಾರ
ಚುನಾವಣೆಯಲ್ಲಿ ಬಜೆಟ್ ಪರಿಣಾಮ
ವಾರದ ಸುದ್ದಿ ಸಾರ
ಮಾರ್ಚ್ 30 ಬೆಂಗಳೂರು ವಿಮಾನ ನಿಲ್ದಾಣ ಕಾರ್ಯಾರಂಭ
ಐಐಟಿ-ಜೆಇಇ ಒಂದು ಸವಾಲೇ?
ಹೋರಾಡು ಕನ್ನಡಿಗ- ಉಗ್ರರ ಬೇರು ಕೀಳಲು, ಆಡಳಿತ ಎಚ್ಚೆತ್ತುಕೊಳ್ಳಲು!