ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೊಂಚಕಾಲ ದೂರ ಇರಿ: ದಲ್ಲಾಳಿಗಳ ಸಲಹೆ
PTI
ಶೇರು ದಲ್ಲಾಳಿಗಳು ತಮ್ಮ ಗ್ರಾಹಕರಿಗೆ, ಸ್ವಲ್ಪ ಕಾಲ ಮಾರುಕಟ್ಟೆಯಿಂದ ದೂರ ಇರುವಂತೆ ತಿಳಿಸಿದ್ದಾರೆ. ಮಾರುಕಟ್ಟೆ ಚಿತ್ರಣ ಮಸುಕಾಗಿರುವುದರಿಂದ ಇದು ಸೂಕ್ತ ವಿಧಾನವಾಗಿದೆ ಎಂಬುದಾಗಿ ಅವರು ಹೇಳಿದ್ದಾರೆ. ಮಾರುಕಟ್ಟೆಯಲ್ಲಿ ತತ್ಕಾಲದಲ್ಲಿ ಯಾವುದೂ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ದೀರ್ಘ ಕಾಲದ ಹೂಡಿಕೆಯ ಹೊರತಾಗಿ, ಬೇರೆ ಯಾವುದೇ ವಹಿವಾಟಿಗೂ ಅವಕಾಶ ಇಲ್ಲ. ತೀವ್ರ ರೀತಿಯ ಚೌಕಾಶಿಗೆ ಮತ್ತು ಶೀಘ್ರ ಹಣ ಸಂಪಾದನೆಗೆ ಇದು ಆಯ್ಕೆಯಲ್ಲ ಎಂದು ದಲ್ಲಾಳಿಗಳು ಅಭಿಪ್ರಾಯಿಸಿದ್ದಾರೆ.

ಏಂಜಲ್ ಬ್ರೋಕಿಂಗ್‌ನ ದಿನೇಶ್ ಥಕ್ಕರ್ ತಿಳಿಸುವಂತೆ, "ಮಾರುಕಟ್ಟೆಯು ಯಾವಾಗ ಕುಸಿಯುತ್ತದೆ ಎಂಬುದನ್ನು ಹೇಳುವುದು ಬಹಳ ಕಷ್ಟ. ಈಗ ಮಾರುಕಟ್ಟೆ ಬಿದ್ದಿರುವುದಕ್ಕೆ, ಮೂಲಭೂತ ಕಾರಣಗಳಿಗಿಂತಲೂ, ಜನರ ಭಾವನಾತ್ಮಕತೆಯೇ ಮುಖ್ಯ ಕಾರಣವಾಗಿದೆ. ಆದರೆ ಸಾಮಾನ್ಯ ಹೂಡಿಕೆದಾರರು, ಕ್ರಮಬದ್ಧವಾಗಿ ಹೂಡಿಕೆಯನ್ನು ಮುಂದುವರಿಸಬಹುದು. ನಾವು ದೀರ್ಘ ಕಾಲದ ಈಕ್ವಿಟಿ ಹೂಡಿಕೆಗಳಲ್ಲಿ ನಾವು ಧನಾತ್ಮಕವಾಗಿದ್ದೇವೆ" ಎನ್ನುತ್ತಾರೆ.
ಐಡಿಬಿಐ ಕ್ಯಾಪ್ಸ್‌ನ ರೀಸರ್ಚ್ ಮುಖ್ಯಸ್ಥೆಯಾಗಿರುವ ಶೀನಾ ಮುಕುಂದನ್, ಮಾರುಕಟ್ಟೆ ಇನ್ನಷ್ಟು ಕೆಳಕ್ಕಿಳಿಯವ ನಿರೀಕ್ಷೆ ಇದೆ. ಆದುದರಿಂದ ಸದ್ಯಕ್ಕೆ ಧೀರ್ಘಕಾಲಿಕ ಹೂಡಿಕೆ ಬೇಡ. ನಿಫ್ಟಿ ಯಾವಾಗ 5450 ಅಂಶಗಳ ಹಂತದಲ್ಲಿ ನೆಲೆಸುತ್ತದೆಯೋ, ಆ ನಂತರ ಮಾರುಕಟ್ಟೆಗೆ ಪ್ರವೇಶಿಸುವುದು ಉತ್ತಮ. ಆದರೆ ತೀವ್ರ ಖರೀದಿಯ ಸಲಹೆಯನ್ನು ನೀಡುವುದಿಲ್ಲ ಎನ್ನುತ್ತಾರೆ.

ಮೋತೀಲಾಲ್ ಓಸ್ವಾಲ್‌ನ ಮನಿಷ್ ಸೊಂತಾಲಿಯಾ ಪ್ರಕಾರ, ವಹಿವಾಟುದಾರರು ತಾಂತ್ರಿಕ ವಿಧಾನಗಳನ್ನು ಅನುಸರಿಸುವುದು ಸೂಕ್ತ. ಸದ್ಯಕ್ಕೆ ಶೇರುಗಳು ಯಾವುದೇ ಬೆಲೆಯಲ್ಲಿದ್ದರೂ ಧೀರ್ಘ ಕಾಲವನ್ನು ಗುರಿಯಾಗಿಟ್ಟುಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ.
ಮತ್ತಷ್ಟು
ರಾಜ್ಯ ರಾಜಕೀಯದಲ್ಲಿ 'ತ್ರಿಶಂಕು ಸ್ಥಿತಿ'
ದುರ್ಬಲವಾಗುತ್ತಿರುವ ಶೇರು ವ್ಯವಹಾರ
ತೆರಿಗೆ ಉಳಿತಾಯಕ್ಕೆ ಬಂಡವಾಳ ಹೂಡಿಕೆಯೇ ಪರಿಹಾರ
ಚುನಾವಣೆಯಲ್ಲಿ ಬಜೆಟ್ ಪರಿಣಾಮ
ವಾರದ ಸುದ್ದಿ ಸಾರ
ಮಾರ್ಚ್ 30 ಬೆಂಗಳೂರು ವಿಮಾನ ನಿಲ್ದಾಣ ಕಾರ್ಯಾರಂಭ