2008 ಮುಗಿದಿದೆ. ಸಂದು ಹೋದ ವರುಷಕ್ಕೊಂದು ಹಿನ್ನೋಟ ಹರಿಸಿದಾಗ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವ ವ್ಯಕ್ತಿ ಅತ್ಯುತ್ತಮರು ಎಂದು ನಿಮಗನ್ನಿಸಿದೆ? ಇದನ್ನು ಆಯ್ಕೆ ಮಾಡಿ, ಸರ್ವ ಶ್ರೇಷ್ಠರು ಯಾರು ಎಂಬುದನ್ನು ಆರಿಸುವುದಕ್ಕಾಗಿ ವೆಬ್‌ದುನಿಯಾ ನಿಮಗೆ ವೇದಿಕೆ ಒದಗಿಸಿಕೊಡುತ್ತದೆ. ವಿಭಿನ್ನ ಕ್ಷೇತ್ರಗಳಿಗೆ ಸಂಬಂಧಿಸಿ ನೀಡಲಾಗಿರುವ ಪ್ರತ್ಯೇಕ ಪ್ರಶ್ನೆಗಳಿಗೆ 10 ಆಯ್ಕೆಗಳನ್ನು ನೀಡಲಾಗಿದೆ. ಓದುಗರು ತಮಗಿಷ್ಟವಾದ ಹೆಸರನ್ನು ಆರಿಸಿ, ತಮ್ಮ ಮತ ಚಲಾಯಿಸಿದರಾಯಿತು.ಕಳೆದ ಬಾರಿಯೂ ವೆಬ್‌ದುನಿಯಾದ ಒಂಬತ್ತು ಭಾಷೆಗಳ ಪೋರ್ಟಲ್‌ಗಳು ಸಂಯುಕ್ತವಾಗಿ ಏರ್ಪಡಿಸಿದ್ದ ಈ ಓದುಗರ ಆಯ್ಕೆಯ ಸಮೀಕ್ಷೆಯಲ್ಲಿ ವಿಶ್ವದ ಅತ್ಯಂತ ಖ್ಯಾತ ವ್ಯಕ್ತಿಗಳಾಗಿ ಜಾರ್ಜ್ ಬುಷ್, ಭಾರತದ ಅತ್ಯಂತ ಖ್ಯಾತಿ ಪಡೆದ ವ್ಯಕ್ತಿಯಾಗಿ ಅಮಿತಾಭ್ ಬಚ್ಚನ್, ಭಾರತದ ನೆಚ್ಚಿನ ರಾಜಕಾರಣಿಯಾಗಿ ನರೇಂದ್ರ ಮೋದಿ, ಅತ್ಯುತ್ತಮ ಚಿತ್ರವಾಗಿ ‘ಗುರು’, ಸೆಕ್ಸೀ ನಟಿಯಾಗಿ ಬಿಪಾಷಾ ಬಸು, ಭಾರತದ ನೆಚ್ಚಿನ ಕ್ರಿಕೆಟಿಗರಾಗಿ ಸಚಿನ್ ತೆಂಡುಲ್ಕರ್, ನೆಚ್ಚಿನ ಕ್ರೀಡಾ ತಾರೆಯಾಗಿ ಸಾನಿಯಾ ಮಿರ್ಜಾ ಅವರು ಅತೀ ಹೆಚ್ಚು ಮತಗಳನ್ನು ಪಡೆದಿದ್ದರು. ಅದರ ಪೂರ್ಣ ಫಲಿತಾಂಶವನ್ನು ನೀವು ಇಲ್ಲಿ ಕ್ಲಿಕ್ ಮಾಡಿ ನೋಡಬಹುದು.ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಅತ್ಯಂತ ಪ್ರಮುಖ ರಾಜಕಾರಣಿಯಾಗಿ ಕುಮಾರಸ್ವಾಮಿ, ಕ್ರೀಡಾಪಟುವಾಗಿ ರಾಹುಲ್ ದ್ರಾವಿಡ್, ಅತ್ಯುತ್ತಮ ಚಿತ್ರ-ಚೆಲುವಿನ ಚಿತ್ತಾರ, ಜನಪ್ರಿಯ ತಾರೆ ಆಗಿ ಗಣೇಶ್ ಮತ್ತು ಜನಪ್ರಿಯ ವ್ಯಕ್ತಿಯಾಗಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಓದುಗರು ಗುರುತಿಸಿ ಅತೀ ಹೆಚ್ಚು ಮತಗಳನ್ನು ನೀಡಿದ್ದರು. ಅದರ ವಿವರಗಳನ್ನು ನೀವು ಇಲ್ಲಿ ಕ್ಲಿಕ್ ಮಾಡಿ ನೋಡಬಹುದು.ಸಮೀಕ್ಷೆಯ ಬಳಿಕ ವಿವರವಾದ ವರದಿ ಪ್ರಕಟಿಸಲಾಗುತ್ತದೆ. ಈ ಸಮೀಕ್ಷೆಯಲ್ಲಿ ಎಲ್ಲಾ ಓದುಗರು ಜನವರಿ 10, 2009ರವರೆಗೆ ಭಾಗವಹಿಸಬಹುದಾಗಿದೆ.- ಸಂಪಾದಕ2008 ವರ್ಷದ ಶ್ರೇಷ್ಠರು ಯಾರು ಎಂದು ಆರಿಸಲು ಇಲ್ಲಿ ಕ್ಲಿಕ್ ಮಾಡಿ. ರಾಜ್ಯದಲ್ಲಿ ಯಾರು ಉತ್ತಮರು ಎಂದು ಆರಿಸಲು ಇಲ್ಲಿ ಕ್ಲಿಕ್ ಮಾಡಿ. |