ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಲಷ್ಕರ್ ಸಂಘಟನೆ ಹುಟ್ಟುಹಾಕಿದ್ದು ಯಾರು?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಷ್ಕರ್ ಸಂಘಟನೆ ಹುಟ್ಟುಹಾಕಿದ್ದು ಯಾರು?
ಭಾರತದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಚಟುವಟಿಕೆಗಳ ರೂವಾರಿ ಎಂದೇ ಪರಿಗಣಿಸಲ್ಪಟ್ಟಿರುವ ಲಷ್ಕರ್ ಇ ತೋಯ್ಬಾವನ್ನು ಹುಟ್ಟು ಹಾಕಿದ್ದು ಯಾರು? ಬೇರಾರೂ ಅಲ್ಲ, ಅಮೆರಿಕ ಎಂದರೆ ನೀವು ನಂಬಲೇಬೇಕು. ಅದರ ಜೊತೆಗೆ ಪಾಕಿಸ್ತಾನದ ಬೇಹುಗಾರಿಕಾ ಸಂಘಟನೆ ಇಂಟರ್ ಸರ್ವಿಸಸ್ ಇಂಟಲಿಜೆನ್ಸ್ (ಐಎಸ್ಐ) ಕೂಡ ಭಾಗಿಯಾಗಿತ್ತು.

ಇದು 80ರ ದಶಕದ ಸಂಗತಿ. ಸೋವಿಯತ್ ಒಕ್ಕೂಟದ ಪಡೆಗಳನ್ನು ಅಫ್ಘಾನಿಸ್ತಾನದ ಕುನಾರ್ ಪ್ರಾಂತ್ಯದಿಂದ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಅಮೆರಿಕದ ಬೇಹುಗಾರಿಕಾ ದಳ (ಸಿಐಎ) ಮತ್ತು ಐಎಸ್ಐ ಸಂಪೂರ್ಣ ಬೆಂಬಲದೊಂದಿಗೆ ಲಷ್ಕರ್ ಇ ತೋಯ್ಬಾವನ್ನು ಹುಟ್ಟು ಹಾಕಿದ ವ್ಯಕ್ತಿ ಈಗಿನ ಅದರ ಮುಖ್ಯಸ್ಥ ಹಫೀಜ್ ಮುಹಮ್ಮದ್ ಸಯೀದ್ ಮತ್ತು ಜಾಫರ್ ಇಕ್ಬಾಲ್ ಎಂಬವರು.

ಸೋವಿಯತ್ ಒಕ್ಕೂಟವು ಅಫ್ಘಾನಿಸ್ತಾನದಿಂದ ಹಿಂದೆ ಸರಿದ ಬಳಿಕ, ಸಿಐಎ ಕೂಡ ಲಷ್ಕರ್‌ಗೆ ನೀಡುತ್ತಿದ್ದ ಬೆಂಬಲವನ್ನು ನಿಲ್ಲಿಸಿತು. ಯಾಕೆಂದರೆ ಅದರ ಉದ್ದೇಶ ಈಡೇರಿತ್ತು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ವಿರುದ್ಧದ ತನ್ನ ಪ್ರಚ್ಛನ್ನ ಸಮರಕ್ಕಾಗಿ ಈ ಸಂಘಟನೆಯ ಉಗ್ರಗಾಮಿಗಳಿಗೆ ಐಎಸ್ಐ ಬೆಂಬಲ ಮುಂದುವರಿಯಿತು.

ಅಮೆರಿಕದ ಸಿಐಎ ಮತ್ತು ಪಾಕಿಸ್ತಾನದ ಐಎಸ್ಐನಿಂದ ಸಮರ್ಥ ತರಬೇತಿ ಪಡೆದ ಲಷ್ಕರ್, ಇದೇ ಕಾರಣಕ್ಕೆ ಇಂದು ಇಷ್ಟೊಂದು ಅತ್ಯಾಧುನಿಕತೆಯೊಂದಿಗೆ ಬೆಳೆದು ನಿಂತಿದೆ. ಮತ್ತು ಭಾರತವೇನಾದರೂ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ನಾವು ಸಹಾಯ ಮಾಡುತ್ತೇವೆ ಎಂದು ಪಾಕಿಸ್ತಾನಕ್ಕೆ ಭರವಸೆ ಕೊಡುವಷ್ಟರ ಮಟ್ಟಿಗೆ ಈ ಲಷ್ಕರ್ ಪಡೆ ಬೆಳೆದಿದೆ!
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
2008ರ ಶ್ರೇಷ್ಠರು ಯಾರು? ವೆಬ್‌ದುನಿಯಾ ಸಮೀಕ್ಷೆ
ಧಿಕ್ಕಾರವಿರಲಿ ಓಟ್ ಬ್ಯಾಂಕ್ ರಾಜಕಾರಣಿಗಳಿಗೆ!
'ಧರ್ಮ ರಾಜಕೀಯ' ಬೇಡ, ರಾಜಕೀಯ ಧರ್ಮ ಇರಲಿ
ಕಾಂಗ್ರೆಸ್ ರಣಕಹಳೆಯಲ್ಲಿ ಅಪಸ್ವರ
ಚುನಾವಣೆ ರಾಜಕೀಯ ಆಟಕ್ಕೆ ನೀವು ಸಿದ್ಧವೇ?
ಬರಾಕ್ ಒಬಾಮ ಅವರ ಆರ್ಥಿಕ ಅಜೆಂಡಾ