| ಲೈಸೆಸ್ಟರ್‌ನಲ್ಲಿ ಉರುಗೋಲು ಹಿಡಿದ ಗಾಂಧಿ ಪ್ರತಿಮೆ | | | ಲಂಡನ್, ಗುರುವಾರ, 18 ಜೂನ್ 2009( 16:34 IST ) | | | |
| | |
| ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಏಳುವರೆ ಅಡಿ ಎತ್ತರದ ಪ್ರತಿಮೆಯನ್ನು ಜೂನ್ 26ರಂದು ಲೈಸೆಸ್ಟರ್‌ನಲ್ಲಿ ಅನಾವರಣಗೊಳಿಸಲಾಗುವುದು. ಬೆಲ್‌ಗ್ರೇವ್ ರಸ್ತೆ ಮತ್ತು ಲೈಸೆಸ್ಟರ್ ಡೊನಾಲ್ಡ್ಸ್‌ಡನ್ ರಸ್ತೆ ಕೂಡುವ ಸ್ಥಳದಲ್ಲಿರುವ ಕಾಯಂ ವಾಸಸ್ಥಾನಕ್ಕೆ 20,000 ಯೂರೊ ಮೌಲ್ಯದ ಪ್ರತಿಮೆಯನ್ನು ಕ್ರೇನ್ ಮೂಲಕ ಸಾಗಿಸಲಾಯಿತು.ಭಾರತದ ದತ್ತಿಸಂಸ್ಥೆ ಸಮನ್ವಯ ಪರಿವಾರ್ ಈ ಪ್ರತಿಮೆ ಸ್ಥಾಪನೆಗೆ ಹಣಕಾಸು ಒದಗಿಸಿದ್ದು, ಕೊಲ್ಕತಾ ಮೂಲದ ಶಿಲ್ಪಿ ಗೌತಂ ಪಾಲ್ ಕಲಾಚಾತುರ್ಯದಿಂದ ರೂಪುಗೊಂಡಿದ್ದು, ಬ್ರಿಟನ್‌ಗೆ ಸಾಗಿಸಲಾಗಿತ್ತು. ಮಹಾತ್ಮಾ ಅವರು ಆಸರೆಯಾಗಿ ಉರುಗೋಲನ್ನು ಹಿಡಿದು ಮುಂದಡಿಯಿಡುವ ಅವರ ಪ್ರಖ್ಯಾತ ಭಂಗಿಯಲ್ಲಿ ಮಹಾತ್ಮರ ಪ್ರತಿಮೆಯನ್ನು ಪಾಲ್ ವಿನ್ಯಾಸಗೊಳಿಸಿದ್ದಾರೆ.ದತ್ತಿಸಂಸ್ಥೆಯ ವಕ್ತಾರ ಜಿತೇಂದ್ರ ಆಚಾರ್ಯ ಮಾತನಾಡುತ್ತಾ, ಮಹಾತ್ಮ ಪ್ರತಿಮೆ ಅನಾವರಣದ ಬಗ್ಗೆ ತಾವು ಪುಳಕಿತರಾಗಿರುವುದಾಗಿ ಹೇಳಿದರು. ಭಾರತದಿಂದ ಕಳೆದ ವಾರ ಪ್ರತಿಮೆಯನ್ನು ಸಾಗಿಸಲಾಗಿದ್ದು ಇಲ್ಲಿವರೆಗೆ ಲೈಸೆಸ್ಟರ್ ಉಗ್ರಾಣದಲ್ಲಿ ರಕ್ಷಿಸಿಡಲಾಗಿತ್ತು. ಆದರೆ ಗಾಂಧಿ ಪ್ರತಿಮೆ ಸ್ಥಾಪನೆಗೆ ಸ್ಥಳೀಯ ಪ್ರಚಾರಕರು ವಿರೋಧಿಸಿದ್ದಾರೆ. ಲೈಸೆಸ್ಟರ್ ಜತೆ ಗಾಂಧಿಗೆ ಯಾವುದೇ ನಂಟು ಇಲ್ಲವೆಂದು ಹೇಳಿರುವ ಅವರು ಸ್ಥಳೀಯ ಹೀರೊ ಪ್ರತಿಮೆ ಸ್ಥಾಪಿಸಿದರೆ ಸೂಕ್ತವೆನಿಸುತ್ತದೆಂದು ಹೇಳಿದ್ದಾರೆ. |
| |
| | |
| | | |
|
| | | | | |
|
|
| |
|  | |