ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಿರ್ಗಿಸ್ತಾನ್ ಹಿಂಸಾಚಾರ-ನಮ್ಮನ್ನು ರಕ್ಷಿಸಿ: ಭಾರತೀಯ ವಿದ್ಯಾರ್ಥಿಗಳು (Kyrgyzstan | Indian students | Osh | Jalalabad)
Bookmark and Share Feedback Print
 
ಹಿಂಸಾಚಾರದಿಂದ ನಲುಗಿ ಹೋಗಿರುವ ಕಿರ್ಗಿಸ್ತಾನದ ಓಶ್ ಮತ್ತು ಜಲಾಲ್‌ಬಾದ್ ನಗರಗಳಲ್ಲಿ ನೂರಾರು ಭಾರತೀಯ ವಿದ್ಯಾರ್ಥಿಗಳು ಅಪಾಯಕಾರಿ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ತಮ್ಮನ್ನು ಹೇಗಾದರು ಮಾಡಿ ದೇಶಕ್ಕೆ ವಾಪಸ್ ಕರೆಯಿಸಿಕೊಳ್ಳುವಂತೆ ಭಾರತೀಯ ಅಧಿಕಾರಿಗಳಲ್ಲಿ ಮೊರೆ ಇಟ್ಟಿದ್ದಾರೆ.

ಯಾವುದೇ ಸಂದರ್ಭದಲ್ಲಿಯೂ ನಮ್ಮ ಪ್ರಾಣ ಹೋಗುವಂತಹ ಉದ್ನಿಗ್ನ ಸ್ಥಿತಿ ಇಲ್ಲಿದೆ ಎಂದು ಭಾರತೀಯ ವಿದ್ಯಾರ್ಥಿಯಾಗಿರುವ ಜಹೀರ್ ಖಾನ್ ಟೈಮ್ಸ್ ನೌ ಚಾನೆಲ್‌ಗೆ ಓಶ್‌ನಿಂದ ದೂರವಾಣಿ ಮೂಲಕ ಭಾರತೀಯರ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾನೆ.

ಕಳೆದ ಕೆಲವು ದಿನಗಳಿಂದ ಕಿರ್ಗಿಸ್ತಾನದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದ್ದು, ಈಗಾಗಲೇ ನೂರಾರು ಮಂದಿ ಬಲಿಯಾಗಿದ್ದಾರೆ. ಅಲ್ಲದೇ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಎಲ್ಲೆಡೆ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ತಮ್ಮ ಜೀವಕ್ಕೆ ಅಪಾಯ ಇರುವುದಾಗಿ ಭಾರತೀಯ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿ, ತಮ್ಮನ್ನು ಕೂಡಲೇ ಭಾರತಕ್ಕೆ ವಾಪಸ್ ಕರೆಯಿಸಿಕೊಳ್ಳಲು ನೆರವು ನೀಡುವಂತೆ ಒತ್ತಾಯಿಸಿದ್ದಾರೆ.

ಕಟ್ಟಡದ ಸಮೀಪ ಇರುವ ತಮ್ಮ ಮನೆಯನ್ನು ಗಲಭೆಕೋರರು ಸುಟ್ಟು ಹಾಕಿದ್ದಾರೆ. ಹಾಗಾಗಿ ನಾವೆಲ್ಲ ಆಶ್ರಯ ದೊರೆಕಿರುವ ಮನೆಯೊಂದರಲ್ಲಿ ಆತಂಕದಲ್ಲಿ ಕಾಲಕಳೆಯುತ್ತಿರುವುದಾಗಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಅಮೃತ್ ದಾಸ್ ತಿಳಿಸಿದ್ದಾನೆ. ವಿಮಾನ ನಿಲ್ದಾಣಕ್ಕೂ ಹೋಗದಂತಹ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ತಾವು ತುಂಬಾ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿರುವುದಾಗಿ ಭಾರತೀಯ ವಿದ್ಯಾರ್ಥಿಗಳು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ