ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣಾ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗವು ಬುಧವಾರ ಘೋಷಿಸಿದೆ.
ಈ ಪ್ರಕಟಣೆಯ ಪ್ರಕಾರ ಗುಜರಾತ್ ಚುನಾವಣೆಯನ್ನು ಡಿಸೆಂಬರ್ 11 ಮತ್ತು 16ರರಂದು ಎರಡೂ ಹಂತಗಳಲ್ಲಿ ನಡೆಸಲಿದೆ.
ಚುನಾವಣಾ ಫಲಿತಾಂಶವನ್ನು ಗುಜರಾತಿನಲ್ಲಿ ಡಿಸೆಂಬರ್ 23ರರಂದು ಘೋಷಿಸಲಿದ್ದು, ಹಿಮಾಚಲ ಪ್ರದೇಶದಲ್ಲಿ ಡಿಸೆಂಬರ್ 28ರಂದು ಪ್ರಕಟಿಸಲಿದೆ.
ಕೋಮುಸೂಕ್ಷ್ಮ ಪ್ರದೇಶವಾದ ಗುಜರಾತಿನಲ್ಲಿ ಚುನಾವಣೆಯು ಮುಕ್ತವಾಗಿ ನಡೆಯುವಂತೆ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಕ್ತ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸುವ ಸಮಯದಲ್ಲಿ ಸ್ಪಷ್ಟಪಡಿಸಿದ್ದಾರೆ.
ವಿದ್ಯುನ್ಮಾನ ಮತದಾನದ ಪದ್ಧತಿಯನ್ನು ಅನುಸರಿಸಲಾಗುವುದು ಮತ್ತು ಬಿಗಿ ತಪಾಸಣೆಯನ್ನು ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ ಆಯುಕ್ತರು,ಮತದಾರರ ಗುರುತು ಪತ್ರ ಇರುವವರಿಗೆ ಮಾತ್ರವೇ ಮತ ಚಲಾಯಿಸಲು ಅವಕಾಶ ನೀಡಲಾಗುವುದು ಎಂದಿದ್ದಾರೆ.
|