ಗ್ಲಾಸ್ಗೋ ವಿಮಾನ ನಿಲ್ದಾಣ ವಿಫಲ ದಾಳಿಗೆ ಸಂಬಂಧಿಸಿದಂತೆ ಸ್ಕಾಟ್‌ಲ್ಯಾಂಡ್ ಗ್ಲಾಸ್ಗೋ ರಾಯಲ್ ಇನ್‌ಫರ್ಮರಿ ಆಸ್ಪತ್ರೆಯಲ್ಲಿ ಮೃತಪಟ್ಟ ದೇಹವು ಕಫೀಲ್ ಅಹ್ಮದ್ ಎಂದು ಪತ್ತೆಹಚ್ಚಲಾಗಿದೆ ಎಂದು ಲಂಡನ್ ಅರಮನೆಯ ವಕ್ತಾರರು ತಿಳಿಸಿದ್ದಾರೆ.
ಮೃತದೇಹವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದ್ದು, ಸಂಬಂಧಿಕರ ಇಚ್ಛೆಯಂತೆ ಅಂತ್ಯಸಂಸ್ಕಾರ ಮಾಡಲಾಗಿದೆ.
ಉರಿಯುತ್ತಿರುವ ಜೀಪನ್ನು ವಿಮಾನನಿಲ್ದಾಣದೊಳಗೆ ಚಲಾಯಿಸಿದ್ದ 27 ವರ್ಷದ ಕಫೀಲ್ ಅವರು 90 ಶೇಕಡಾ ಸುಟ್ಟು ಹೋಗಿದ್ದರು.
ಜೂನ್ 30 2007ರಂದು ಗ್ಲಾಸ್ಗೋ ವಿಮಾನ ನಿಲ್ದಾಣ ಬಾಂಬ್ ದಾಳಿಯಲ್ಲಿ ಒಬ್ಬ ವ್ಯಕ್ತಿಯು ಗಂಭೀರವಾಗಿ ಗಾಯಗೊಂಡಿದ್ದರು. ಆಗಸ್ಟ್ 2ರರಂದು ಗ್ಲಾಸ್ಗೋ ರೋಯಲ್ ಇನ್ಫರ್ಮರಿಯಲ್ಲಿ ಮೃತಪಟ್ಟ ಈ ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪೇಸ್ಲೀಯ ಪ್ರೊಕ್ಯುರೇಟರ್ ಫಿಸ್ಕಲ್‌ಗೆ ಬಿಟ್ಟುಕೊಡಲಾಗಿತ್ತು.
|