| ಪ್ರಧಾನಿ - ಸೇನಾಮುಖ್ಯಸ್ಥರ ಉನ್ನತ ಸಭೆ |
| | ನವದೆಹಲಿ, ಶುಕ್ರವಾರ, 26 ಡಿಸೆಂಬರ್ 2008( 18:07 IST ) | | | |
| | |
| ಗಡಿಯಾಚೆಗೆ ಪಾಕಿಸ್ತಾನವು ಯುದ್ಧಸನ್ನದ್ಧವಾಗಿರುವಂತೆ, ಇತ್ತ ಕಡೆ ಪ್ರಧಾನಿ ಮನಮೋಹನ್ ಸಿಂಗ್ ಶುಕ್ರವಾರದಂದು ರಕ್ಷಣಾ ಪಡೆಗಳ ಮೂರೂ ಮುಖ್ಯಸ್ಥರನ್ನು ಭೇಟಿಯಾಗಿ ಭದ್ರತಾ ಪರಿಸ್ಥಿತಿಯ ಕುರಿತು ಪರಾಮರ್ಶೆ ನಡೆಸಿದರು. ಪ್ರಧಾನಿಯವರ ಕಚೇರಿಯಲ್ಲಿ ನಡೆಸಲಾದ ಈ ಉನ್ನತ ಮಟ್ಟದ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹಾಗಾರ ಎಂ.ಕೆ.ನಾರಾಯಣನ್ ಅವರು ಭಾಗವಹಿಸಿದ್ದರು.ಇದೇವೇಳೆ ಭದ್ರತಾ ಸಂಪುಟ ಸಮಿತಿಯು ರಾಷ್ಟ್ರದ ಭದ್ರತೆಯ ಕುರಿತು ಸಭೆ ನಡೆಸಿದೆ.ಭದ್ರತಾ ಪಡೆಗಳ ಸಿದ್ಧತೆಯ ಕುರಿತು ಮನವರಿಕೆಗಾಗಿ ಪ್ರಧಾನಿಯವರ ಕಚೇರಿಯಲ್ಲಿ ಸಭೆ ನಡೆದಿದೆ ಎಂದು ಊಹಿಸಲಾಗಿದೆ.ಭಾರತೀಯ ಸಶಸ್ತ್ರಪಡೆಗಳು ಉನ್ನತ ಕಟ್ಟೆಚ್ಚರದಲ್ಲಿವೆ. ಅದರಲ್ಲೂ ವಿಶೇಷವಾಗಿ ವಾಯು ನೆಲೆಗಳಲ್ಲಿ ಕಟ್ಟೆಚ್ಚರ ಹೆಚ್ಚಿದೆ. ಭದ್ರತಾ ಪಡೆಗಳ ಮುಖ್ಯಸ್ಥರೊಂದಿಗೆ ಪ್ರಧಾನಿಯವರು ಸಭೆ ನಡೆಸುತ್ತಿರುವುದು ವಾರದಲ್ಲಿ ಇದು ಎರಡನೆಯ ಬಾರಿಯಾಗಿದೆ.ಭಾರತದ ಗಡಿಯಲ್ಲಿ ಪಾಕಿಸ್ತಾನದ ಚಟುವಟಿಕೆ ಹೆಚ್ಚಾಗಿರುವ ಕಾರಣ ಇಂದಿನ ಸಭೆಯು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈ ಮಧ್ಯೆ ಸೇನಾಪಡೆಯಲ್ಲಿ ಸೇವೆಸಲ್ಲಿಸುತ್ತಿರುವ ಎಲ್ಲ ರಜೆಗಳನ್ನು ರದ್ದುಪಡಿಸಲಾಗಿದೆ ಎಂದು ವರದಿಗಳು ಹೇಳಿವೆ.ಪಾಕಿಸ್ತಾನದ 10ನೆ ಬ್ರಿಗೇಡ್ ಲಾಹೋರಿನಲ್ಲಿ ಮುಂಚಲನೆ ಮಾಡಿದೆ. ಅಲ್ಲದೆ ಸಾಮಾನ್ಯವಾಗಿ ಮೀಸಲಿನಲ್ಲಿರುವ ಸೇನೆಯ ತೃತೀಯ ಸಶಸ್ತ್ರ ಬ್ರಿಗೇಡ್ ಜೇಲಂಗೆ ಚಲಿಸಿದೆ. ಅಲ್ಲದೆ, ಗಡಿಯಲ್ಲಿ ಭಾರತೀಯ ಪಡೆಗಳ ಚಲನವಲನದ ಮೇಲೆ ತೀವ್ರ ಗಮನ ಹರಿಸಲಾಗಿದೆ. ಪಾಕ್ ಸೇನೆಯ 10 ಮತ್ತು 11ನೆ ವಿಭಾಗಗಳೂ ಕಟ್ಟೆಚ್ಚರದಲ್ಲಿದ್ದು, ಈ ಪಡೆಗಳನ್ನು ಕಾಶ್ಮೀರದ ರಾಜೌರಿ ಮತ್ತು ಪೂಂಛ್ ವಲಯಗಳಲ್ಲಿ ನೇಮಿಸಲಾಗಿದೆ. ಇದರೊಂದಿಗೆ ವಾಯಪಡೆಯು ಪ್ರಮುಖ ನಗರಗಳು ಮತ್ತು ಪ್ರಮುಖ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಎಚ್ಚರ ವಹಿಸಲಾಗಿದೆ.ಡಿಸೆಂಬರ್ 18ರಂದು ರಕ್ಷಣಾ ಸಚಿವ ಎ.ಕೆ.ಆಂಟನಿ ಅವರೂ ಸೇನಾಪಡೆಗಳ ಮುಖ್ಯಸ್ಥರನ್ನು ಭೇಟಿಯಾಗಿ ವಿಸ್ತೃತ ಪರಿಶೀಲನೆ ನಡೆಸಿದ್ದರು. |
| |
| | |
|
| | |
|
|
| | |
|
|
| |
| | |