ಚೆನ್ನೈ: ಹಗರಣಪೀಡಿತ ಸತ್ಯಂ ಕಂಪ್ಯೂಟರ್ಸ್‌ನಲ್ಲಿ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದ 23ರ ಹರೆಯದ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೇಲಂನವರಾಗಿರುವ ವಿಶ್ವ ವೆಂಕಟೇಶನ್ ಬುಧವಾರ ವಿಷ ಸೇವಿಸಿದ್ದು, ಗುರುವಾರ ಜನರಲ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ತಿಂಗಳಾರಂಭದಲ್ಲಿ ಹಗರಣವು ಬೆಳಕಿಗೆ ಬಂದ ಸಂದರ್ಭದಲ್ಲಿಯೂ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಸಕಾಲಿಕ ಕ್ರಮದಿಂದಾಗಿ ಅವರು ಬದುಕುಳಿದಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ. |