ಇತ್ತೀಚೆಗೆ ಮುಕ್ತಾಯವಾಗಿರುವ ಮಹಾಚುನಾವಣೆಯಲ್ಲಿ ರಾಜಕೀಯ ಪಕ್ಷ ಒಂದರ ಸದಸ್ಯರು ಅಂಚೆಮತಗಳನ್ನು ಒಲಿಸಿಕೊಳ್ಳಲು ಸೇನಾಧಿಕಾರಿಗಳಿಗೆ ಲಂಚ ನೀಡಿತ್ತು ಎಂಬುದಾಗಿ ಚುನಾವಣಾ ಆಯುಕ್ತ ಎಸ್.ವೈ. ಖುರೇಶಿ ಬಾಂಬ್ ಸಿಡಿಸಿದ್ದಾರೆ. ಆದರೆ ಅವರ ಯಾವ ಪಕ್ಷ ಈ ಕೃತ್ಯ ಎಸಗಿದೆ ಎಂಬುದನ್ನು ಬಹಿರಂಗ ಪಡಿಸಲಿಲ್ಲ.
ಲಂಡನ್‌ನ ಹೌಸ್ ಆಫ್ ಕಾಮನ್ಸ್‌ನಲ್ಲಿ ಇತ್ತೀಚೆಗೆ ಅಂತ್ಯಗೊಂಡ ಚುನಾವಣೆಗಳ ಕುರಿತು ಉಪನ್ಯಾಸ ನೀಡಲು ಇಲ್ಲಿಗೆ ಆಗಮಿಸಿದ್ದ ಅವರು ಪಂಜಾಬ್ ಚುನಾವಣೆಯಲ್ಲಿ ಈ ದುಷ್ಕೃತ್ಯ ನಡೆದಿದೆ ಎಂದು ಹೇಳಿದ್ದಾರೆ.
ನಿರ್ದಿಷ್ಟ ಅಭ್ಯರ್ಥಿಗೆ ಮತಹಾಕವತಂತೆ ಕಮಾಂಡಿಂಗ್ ಅಧಿಕಾರಿಗಳು ಸೇನಾ ಜವಾನರಿಗೆ ತಾಕೀತು ಮಾಡಿರುವ ವಿಚಾರವನ್ನು ಪಂಜಾಬ್ ಪೊಲೀಸ್ ಸಿಬ್ಬಂದಿ ಪತ್ತೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
"ಕಮಾಂಡಿಂಗ್ ಅಧಿಕಾರಿಗಳನ್ನು ಸಂಪರ್ಕಿಸಿರುವ ಪಕ್ಷವು ಸೇನಾ ಸಿಬ್ಬಂದಿಗಳು ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕುವಂತೆ ಲಂಚ ನೀಡಿದೆ. ಮತ್ತು ಈ ಜವಾನರು ಜಿ ಹುಜೂರ್ ಅಂದಿದ್ದಾರೆ" ಎಂಬ ಅಂಶ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ. |