ಸಿಂಗಾಪುರದ ಸರ್ಕಾರಿ ಅಧಿಕಾರಿಗಳು ಏಷ್ಯಾದಲ್ಲೇ ಅತ್ಯಂತ ದಕ್ಷರಾಗಿದ್ದಾರೆ ಎಂದು ಹಾಂಕಾಂಗ್ ಮೂಲದ ಪೊಲಿಟಿಕಲ್ ಆಂಡ್ ಇಕನಾಮಿಕ್ ರಿಸ್ಕ್ ಕನ್ಸಲ್ಟೆನ್ಸಿ ಸಂಸ್ಥೆಯು ನಡೆಸಿದ ಸಮೀಕ್ಷೆ ಹೇಳಿದೆ. ಉದೇ ವೇಳೆ ಭಾರತದ ಅಧಿಕಾರಿಗಳು ಅತ್ಯಂತ ಅದಕ್ಷರೆಂದೂ ಅತು ತಿಳಿಸಿದೆ. 12 ಪ್ರಮುಖ ಆರ್ಥಿಕ ರಾಷ್ಟ್ರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. ಸಿಂಗಾಪುರದ ಈ ಅಧಿಕಾರಿಗಳು ಅತ್ಯಂತ ದಕ್ಷರೇನೋ ಹೌದು, ಆದರೆ ಬಿಕ್ಕಟ್ಟಿನ ಸಂದರ್ಭದಲ್ಲಿ ಕೈಚೆಲ್ಲಾತ್ತಾರೆ ಎಂದೂ ಸಮೀಕ್ಷೆ ತಿಳಿಸಿದೆ.
ಭಾರತ ಅತ್ಯಂತ ಕಳಪೆ ಈ ಸಮೀಕ್ಷೆ ಹೊರಗೆಡಹಿರುವ ಪ್ರಮುಖ ಅಂಶವೆಂದರೆ, ಭಾರತದ 'ಉಸಿರುಕಟ್ಟಿಸುವ ಅಧಿಕಾರಶಾಹಿ'ಯು ಅತ್ಯಂತ ಕಳಪೆಯಾಗಿದೆ ಎಂದು ಹೇಳಿದ್ದು, ಭಾರತದ ಸರ್ಕಾರಿ ಅಧಿಕಾರಿಗಳ ಕಾರ್ಯನಿರ್ವಹಣೆ ಅತಿ ನಿಧಾನ ಮತ್ತು ಇವರೊಂದಿಗೆ ಕಾರ್ಯವೆಸಗುವುದು ನೋವಿನ ಪ್ರಕ್ರಿಯೆ ಎಂದು ಹೇಳಿದೆ.
ಭಾರತದಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಅಧಿಕಾರಿಗಳೇ ಶಕ್ತಿಕೇಂದ್ರಗಳು. ಒಂದೊಮ್ಮೆ ಆಡಳಿತ ಸುಧಾರಣೆಯಾದರೆ ತಮ್ಮ ಮೇಲೆ ಪರಿಣಾಮ ಬೀರಬಹುದು ಇಲ್ಲವೇ ಕಾರ್ವನಿರ್ವಣಾ ರೀತಿಗೆ ಅಡ್ಡಿಯಾಗಬಹುದೆಂಬ ಹಿನ್ನೆಲೆಯಲ್ಲಿ ಅವರು ಸುಧಾರಣೆಗೆ ವಿರೋಧ ಒಡ್ಡುತ್ತಾರೆ ಎಂದು ಸಮೀಕ್ಷೆ ಹೇಳುತ್ತದೆ.
ಸಿಂಗಾಪುರದವು ತೃತೀಯ ಬಾರಿಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ದಕ್ಷತೆಯಲ್ಲಿ ವಿವಿಧ ಆರ್ಥಿಕತೆಗಳು ಪಡೆದುಕೊಂಡಿರುವ ರ‌್ಯಾಂಕಿಂಗ್ ಇಂತಿದೆ.
ಸಿಂಗಾಪುರ, ಹಾಂಕಾಂಗ್, ಥಾಯ್‌ಲ್ಯಾಂಡ್, ದಕ್ಷಿಣ ಕೊರಿಯಾ, ಜಪಾನ್, ಮಲೇಶ್ಯಾ, ಥೈವಾನ್, ವಿಯೆಟ್ನಾಂ, ಚೀನ, ಫಿಲಿಫೈನ್ಸ್, ಇಂಡೋನೇಶ್ಯ ಮತ್ತು ಕೊನೆಯ ಸ್ಥಾನದಲ್ಲಿ ಭಾರತ. |