ಇಬ್ಬರು ಮಹಿಳೆಯರ ನಿಗೂಢ ಸಾವನ್ನು ಪ್ರತಿಭಟಿಸಿ ಶ್ರೀನಗರದಲ್ಲಿ ನಡೆಸಲಾಗುತ್ತಿರುವ ಹಿಂಸಾಚಾರದ ಪ್ರತಿಭಟನೆ ಮೂರನೆ ದಿನಕ್ಕೆ ಮುಂದುವರಿದ್ದು, ಗಲಭೆಯನ್ನು ಹತ್ತಿಕ್ಕಲು ಶ್ರೀನಗರದ ವಿವಿಧೆಡೆ ಕರ್ಫ್ಯೂ ಜಾರಿ ಮಾಡಲಾಗಿದೆ. ಮೃತ ಮಹಿಳೆಯರನ್ನು ಭದ್ರತಾ ಸಿಬ್ಬಂದಿಗಳು ಅತ್ಯಾಚಾರ ಎಸಗಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಉದ್ರಿಕ್ತ ಪ್ರತಿಭಟನಾಕಾರರು ಒಮರ್ ಅಬ್ದುಲ್ಲಾ ಅವರ ಪ್ರತಿಕೃತಿ ದಹನ ಮಾಡಿದರು.
ಪ್ರತ್ಯೇಕತವಾದಿಗಳು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದವು. ನಗರದಲ್ಲಿ ಸಂಚಾರ ಪ್ರತಿಬಂಧಿಸಲಾಗಿದ್ದು, ಭದ್ರತಾ ಸಿಬ್ಬಂದಿಗಳು ರಸ್ತೆಗಳಲ್ಲಿ ಗಸ್ತು ತಿರುಗುತ್ತಿದ್ದರು. |