| ಅನುರಾಧಾ ಬಾಲಿ ಜತೆ ಎಲ್ಲಾ ಸಂಬಂಧಕ್ಕೆ ಎಳ್ಳುನೀರು | | | ಚಂಡೀಗಢ, ಗುರುವಾರ, 4 ಜೂನ್ 2009( 10:26 IST ) | | | |
| | |
| ತನ್ನ ಹೊಸಪತ್ನಿ ಅನುರಾಧಾ ಬಾಲಿ ಅಲಿಯಾಸ್ ಫಿಜಾರೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿರುವುದಾಗಿ ಹರ್ಯಾಣದ ಮಾಜಿ ಉಪಮುಖ್ಯಮಂತ್ರಿ ಚಂದ್ರಮೋಹನ್ ಅಲಿಯಾಸ್ ಚಾಂದ್ ಮೊಹಮ್ಮದ್ ಹೇಳಿದ್ದಾರೆ. ತಾನು ಆಕೆಗೆ ವಿಚ್ಚೇದನ ನೀಡಿದ್ದು ಎಲ್ಲಾ ಸಂಬಂಧಗಳನ್ನು ಕಳೆದುಕೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ." ನಾನು ನೀಡಿರುವ ತಲಾಖ್ ಸಿಂಧುವಾಗಿದೆ. ಬೇಕಿದ್ದರೆ ಆಕೆ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು" ಎಂದು ಅವರು ಹೇಳಿದ್ದಾರೆ. ತಾನು ತಲಾಖ್ ನೀಡುವ ಮುನ್ನ ವಕೀಲರ ಸಲಹೆ ಪಡೆದಿರುವುದಾಗಿಯೂ ಅವರು ಹೇಳಿದ್ದಾರೆ.ಹರ್ಯಾಣದ ಮಾಜಿ ಮುಖ್ಯಮಂತ್ರಿ ಹರ್ಯಾಣ ಜನಹಿತ್ ಕಾಂಗ್ರೆಸ್‌ನ ಮುಖ್ಯಸ್ಥ ಭಜನ್‌ಲಾಲ್ ಅವರ ಪುತ್ರನಾಗಿರುವ ಚಂದ್ರಮೋಹನ್ ತನ್ನ ಪಂಚಕುಲ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ವಿಚಾರ ಹೊರಗೆಡಹಿದ್ದಾರೆ.ಫಿಜಾ ಅವರು ಚಂದ್ರಮೋಹನ್ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ತನ್ನದೇ ಪತಿಯ ವಿರುದ್ಧ ಅತ್ಯಾಚಾರದ ಆರೋಪ ಹೊರಿಸುವ ಮಹಿಳೆಯ ಚಾರಿತ್ರ್ಯದ ಕುರಿತು ನೀವೇ ಊಹಿಸಬಹುದು" ಎಂದು ನುಡಿದರು.ತಾನು ಚಂದ್ರಮೋಹನ್ ಅವರ ಪಂಚಕುಲ ನಿವಾಸಕ್ಕೆ ತೆರಳಿ ಅವರಿಗೆ ಚಪ್ಪಲಿ ಎಸೆಯುವುದಾಗಿ ಫಿಜಾ ಸೋಮವಾರ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಒಟ್ಟಿನಲ್ಲಿ ರಾಷ್ಟ್ರಾದ್ಯಂತ ಕುತೂಹಲ ಮೂಡಿಸಿದ್ದ ಇವರ ವಿವಾಹವು ಅತ್ಯಂತ ಕ್ಷಿಪ್ರ ಅವಧಿಯಲ್ಲಿ ಅಂತ್ಯಕಂಡಂತಾಗಿದೆ.ಅನುರಾಧ ಬಾಲಿಯ ಪ್ರೇಮಪಾಶಕ್ಕೆ ಬಿದ್ದಿದ್ದ, ಚಂದ್ರಮೋಹನ್ ತನ್ನ ಉಪಮುಖ್ಯಮಂತ್ರಿ ಸ್ಥಾನ ಕಳಕೊಂಡಿದ್ದರು. ತನ್ನ ಮನೆಯಿಂದ ಹೊರದಬ್ಬಿಸಿಕೊಂಡಿದ್ದರು. ಇಸ್ಲಾಂಗೆ ಪರಿವರ್ತನೆಗೊಂಡು ಇವರು ವಿವಾಹವಾಗಿದ್ದು. ಇದೀಗ ವಿವಾಹ ಮುರಿದು ಬಿದ್ದಿದೆ.ಕಲ್ಕಾ ಕ್ಷೇತ್ರದ ಶಾಸಕರಾಗಿರುವ ಮೋಹನ್ ತಾನು ಇನ್ನೂ ಕಾಂಗ್ರೆಸ್ ಪಕ್ಷದಲ್ಲೇ ಇರುವುದಾಗಿ ಹೇಳಿದ್ದು, ಇನ್ನು ಮುಂದೆ ತನ್ನ ಕ್ಷೇತ್ರದತ್ತ ಗಮನಹರಿಸುವುದಾಗಿ ಮತ್ತು ಕ್ಷೇತ್ರದ ಜನತೆಗೆ ಲಭ್ಯವಿರುವುದಾಗಿ ಹೇಳಿದ್ದಾರೆ.ಹೊಸ ಪತ್ನಿಗೆ ತಲಾಖ್ ನೀಡಿದ್ರಾ ಚಂದ್ರಮೋಹನ್?ಅಪ್ಪನಿಂದಲೂ ಉಚ್ಚಾಟನೆಗೀಡಾದ ಚಂದ್ರಮೋಹನ್ |
| |
| | |
| | | |
|
| | ಸಂಬಂಧಿತ ಮಾಹಿತಿ ಹುಡುಕಿ ಇದನ್ನು ಸಹ ಶೋಧಿಸು: ಅನುರಾಧಾ ಬಾಲಿ, ಚಂದ್ರ ಮೋಹನ್, ಹರ್ಯಾಣ, ಭಜನ್‌ಲಾಲ್, ತಲಾಖ್, ವಿಚ್ಚೇದನ, Anuradha Bali, Chand Mohammad, Divorce, Talaq, Haryana, Bha, Panchkula, Bhajan Lal |
|
|
| | |
|
|
| |
|  | |