ಸಲಿಂಗಕಾಮವನ್ನು ಕಾನೂನು ಬದ್ಧಗೊಳಿಸುವ ದೆಹಲಿ ಹೈಕೋರ್ಟ್ ಆದೇಶವನ್ನು ಅಧ್ಯಯನ ನಡೆಸಿದ ಬಳಿಕ ಸರ್ಕಾರವು ಅಭಿಪ್ರಾಯ ಒಂದನ್ನು ಹೊಂದಲಿದೆ ಎಂದು ಕಾನೂನು ಸಚಿವ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮೊಯ್ಲಿ, ಈ ಕುರಿತು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲು ನಿರಾಕರಿಸಿದ್ದು, ದೆಹಲಿ ಹೈಕೋರ್ಟಿನ ಆದೇಶದ ಎಲ್ಲಾ ಕೋನಗಳನ್ನು ಶೀಘ್ರದಲ್ಲೇ ಪರಿಶೀಲಿಸಲಾಗುವುದು ಎಂದು ನುಡಿದರು.
ಪರಸ್ಪರ ಒಪ್ಪಿಗೆಯೊಂದಿಗೆ ಪ್ರಾಪ್ತವಯಸ್ಕರ ನಡುವಿನ ಸಲಿಂಗ ಕಾಮವನ್ನು ಕಾನೂನು ಬದ್ಧಗೊಳಿಸಿ ದೆಹಲಿ ಹೈ ಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯನ್ವಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟೀಸ್ ನೀಡಿರುವ ಬೆನ್ನಿಗೆ ಮೊಯ್ಲಿ ಅವರ ಈ ಹೇಳಿಕೆ ಹೊರಬಿದ್ದಿದೆ.
ಜುಲೈ 20ರಂದು ಪ್ರಕರಣದ ಹೆಚ್ಚಿನ ವಿಚಾರಣೆ ನಡೆಯಲಿದೆ. |