ಉತ್ತರಪ್ರದೇಶ ಕಾಂಗ್ರೆಸ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ರೀಟಾ ಬಹುಗುಣ ಅವರು ತನ್ನ ವಿರುದ್ಧ ಹಾಗೂ ದಲಿತ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿರುವುದಕ್ಕೆ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯವತಿ ಒತ್ತಾಯಿಸಿದ್ದಾರೆ.
ಬುಧವಾರ ಮೊರಾದಾಬಾದಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ರೀಟಾ ಅವರು ಮಾಯಾವತಿ ಸರ್ಕಾರದ ಕಾರ್ಯ ವೈಖರಿಯನ್ನು ಖಂಡಿಸುತ್ತಾ ಮಾಯಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು.
ರೀಟಾ ಬಂಧನದ ಬಳಿಕ ಉಂಟಾಗಿರುವ ಗಲಭೆ ಹಾಗೂ ರೀಟ ಮನೆಮೇಲಿನ ದಾಳಿಯನ್ನು "ಬಿಎಸ್ಪಿ ವೇಲೆ ಗೂಬೆ ಕೂರಿಸಲು ಕಾಂಗ್ರೆಸ್ ಕಾರ್ಯಕರ್ತರಿಂದಲೇ ಮಾಡಿಸಲಾಗಿದೆ" ಎಂದು ಬಿಎಸ್ಪಿ ದೂರಿದೆ.
ಉತ್ತರಪ್ರದೇಶದಲ್ಲಿ ಅತ್ಯಾಚಾರ ಬಲಿಪಶುಗಳು ಸೇರಿದಂತೆ ಇತರ ಅಪರಾಧಗಳ ಬಲಿಪಶುಗಳಿಗೆ ಸರ್ಕಾರವು ಡಿಜಿಪಿ ಮೂಲಕ 25 ಸಾವಿರ ರೂಪಾಯಿ ಪರಿಹಾರ ನೀಡುತ್ತಿದೆ ಎಂದು ಟೀಕಿಸುತ್ತಾ, ಒಂದೊಮ್ಮೆ ಮಾಯವತಿ ಅವರು ಅತ್ಯಾಚಾರಕ್ಕೀಡಾದರೆ ನಾವು ಅವರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡುತ್ತೇವೆ ಎಂದು ರೀಟಾ ಹೇಳಿದ್ದರು. |