ತೀರ ರಕ್ಷಣೆಗೆ ಆದ್ಯತೆ
ತೀರ ರಕ್ಷಣೆಗೆ ಸರಕಾರವು ಅತ್ಯುನ್ನತ ಆದ್ಯತೆ ನೀಡುತ್ತಿದೆ ಎಂದು ತಿಳಿಸಿರುವ ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ, 26/11ರ ಮುಂಬೈ ದಾಳಿಯ ಬಳಿಕ ಭದ್ರತಾ ಕ್ರಮ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ನಿರ್ಧಾರಗಳನ್ನು ಅನುಷ್ಠಾನಗೊಳಿಸುವಂತೆ ನೌಕಾಪಡೆಗೆ ಸೂಚಿಸಿದ್ದಾರೆ.