ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕರ್ನಾಟಕ: ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು
ಕ್ಷಿಪ್ರಗತಿಯ "ರಾಜಕೀಯ" ಬೆಳವಣಿಗೆಗಳಿಗೆ ಅಂತ್ಯ: ಚುನಾವಣೆಯತ್ತ ಕರ್ನಾಟಕ
ರಾಜ್ಯದಲ್ಲಿ ಕ್ಷಿಪ್ರ ತಿರುವುಗಳನ್ನು ಪಡೆಯುತ್ತಿದ್ದ ಚಿತ್ರ ವಿಚಿತ್ರ ರಾಜಕೀಯ ಬೆಳವಣಿಗೆಗಳು ಒಂದು ಹಂತಕ್ಕೆ ಬಂದು ನಿಂತಿದ್ದು, ಸೋಮವಾರ ರಾತ್ರಿ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದಾರೆ.

ಇದರೊಂದಿಗೆ ಕುದುರೆ ವ್ಯಾಪಾರ, ಪಕ್ಷಾಂತರ, ಮರು ಮೈತ್ರಿ, ಪರ್ಯಾಯ ಸರಕಾರ ಮುಂತಾದ ಹಲವಾರು ಊಹಾಪೋಹಗಳಿಗೆ ತೆರೆಬಿದ್ದಿದ್ದು, ರಾಜ್ಯವು ಮತ್ತೊಂದು ಚುನಾವಣೆಯತ್ತ ಮುಖ ಮಾಡಿದೆ.

ಮುಖ್ಯಮಂತ್ರಿ ಕುಮಾಸ್ವಾಮಿಯವರ ರಾಜೀನಾಮೆ ಅಂಗೀಕರಿಸಿದ ಬಳಿಕ ಪರ್ಯಾಯ ಸರ್ಕಾರ ರಚಿಸಲು ಕಾಂಗ್ರೆಸ್ ನಿರಾಸಕ್ತಿ ತೋರಿಸಿದ ಹಿನ್ನೆಲೆಯಲ್ಲಿ ರಾಜ್ಯಪಾಲರು ಈ ನಿರ್ಧಾರ ಪ್ರಕಟಿಸಿದ್ದಾರೆ.

ಸೋಮವಾರ ರಾತ್ರಿಯವರೆಗೂ ಕಾಂಗ್ರೆಸ್ ಪರ್ಯಾಯ ಸರ್ಕಾರ ನಡೆಸುವ ಸಾಧ್ಯತೆ ಬಗ್ಗೆ ತೀವ್ರ ಚರ್ಚೆ ನಡೆಸಿತ್ತು. ಕೊನೆಗಳಿಗೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪುನಃ ಜತೆಯಾಗಿ ಸರ್ಕಾರ ನಡೆಸುವ ಸಾಧ್ಯತೆಯ ಬಗ್ಗೆ ಗುಲ್ಲು ಹಬ್ಬಿತು. ಆದರೆ ಅದು ಯಶಸ್ವಿಯಾಗಲಿಲ್ಲ.

ಜೆಡಿಎಸ್ ಹಾಗೂ ಬಿಜೆಪಿ ಕೊನೆಯ ಹಂತದಲ್ಲಿ ಹಲವು ಲೆಕ್ಕಾಚಾರಗಳನ್ನು ನಡೆಸಿದರೂ ಅದಕ್ಕೆ ಕೇಂದ್ರ ವರಿಷ್ಠರ ಬೆಂಬಲ ಸಿಗಲಿಲ್ಲ.

ಈ ನಡುವೆ ಅಧಿಕಾರ ಹಸ್ತಾಂತರಕ್ಕೆ ನಿರಾಕರಿಸಿ ವಚನ ಭ್ರಷ್ಟತೆಗೆ ಕಾರಣರಾದ ಜೆಡಿಎಸ್ ವಿರುದ್ಧ ಧರ್ಮ ಯುದ್ಧ ಆರುವುದಾಗಿ ಘೋಷಿಸಿದೆ.

ಕಾಂಗ್ರೆಸ್ ಪಕ್ಷವು ಜೆಡಿಎಸ್‌ ಜತೆ ಮತ್ತೆ ಕೈಜೋಡಿಸಿ ಕೈಸುಟ್ಟುಕೊಳ್ಳುವುದಿಲ್ಲ ಎಂದು ಘೋಷಿಸಿದ ಬಳಿಕ, ಬಿಜೆಪಿಯು ಜೆಡಿಎಸ್ ಅನ್ನು ಒಡೆದು ಸರಕಾರ ರಚಿಸುವ ಕುರಿತು ಊಹಾಪೋಹಗಳೆದ್ದಿದ್ದವು. ಇದರಿಂದ ವಿಚಲಿತರಾದ ಮಾಜಿ ಪ್ರಧಾನಿ, ಜೆಡಿಎಸ್ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು, ವಿಧಾನಸಭೆ ವಿಸರ್ಜಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.
ಮತ್ತಷ್ಟು
ಕುಮಾರಸ್ವಾಮಿ ರಾಜೀನಾಮೆ
ಬಿಜೆಪಿ-ಜೆಡಿಎಸ್ ಮರುವಿವಾಹಕ್ಕೆ ಸಜ್ಜು?
ರಾಜ್ಯದಲ್ಲಿ ಕೇಂದ್ರಾಡಳಿತಕ್ಕೆ ಕಾಂಗ್ರೆಸ್ ಒತ್ತಾಯ
ಗೌಡರ ಕುಟುಂಬ ಪ್ರಹಾರ: ಚಿಗಿತುಕೊಂಡ ಗಣಿ ರೆಡ್ಡಿ
ಜೆಡಿಎಸ್ ವರ್ತನೆ: ರಾಜ್ಯಾದ್ಯಂತ ಪ್ರತಿಭಟನೆ ಧ್ವನಿ
ದಸರಾ ಉದ್ಘಾಟನೆಗೆ ಬಾಲಗಂಗಾಧರನಾಥ ಶ್ರೀ