ಸುದ್ದಿ ಜಗತ್ತು
ವ್ಯವಹಾರ
ರಾಜ್ಯ ಸುದ್ದಿ
ರಾಷ್ಟ್ರೀಯ
ಮನರಂಜನೆ
ಸ್ಯಾಂಡಲ್ ವುಡ್
ಬಾಲಿವುಡ್‌
ಇನ್ನಷ್ಟು ಹಾಸ್ಯ...
ಕ್ರೀಡಾ ಜಗತ್ತು
ಕ್ರಿಕೆಟ್ ಟಿಕರ್
ಕ್ರೀಡಾಸುದ್ದಿ
ಕ್ರಿಕೆಟ್‌
ಜ್ಯೋತಿಷ್ಯ
ಜ್ಯೋತಿಷ್ಯಶಾಸ್ತ್ರ
ವಾಸ್ತು
ನಿಮ್ಮ ಜಾತಕ
ಫೋಟೋ ಗ್ಯಾಲರಿ
ಹಾಟ್‌ಶಾಟ್
ಸಿನಿಮಾ
ಬಾಲಿವುಡ್
ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ನಾ ಡಿಸೋಜಾಗೆ ವರ್ಧಮಾನ ಪೀಠ ಪ್ರಶಸ್ತಿ
ಪ್ರಖ್ಯಾತ ಮನಃಶಾಸ್ತ್ರಜ್ಞ ಮತ್ತು ಕನ್ನಡ ಲೇಖಕ ಶಿವಮೊಗ್ಗದ ನಾ ಡಿಸೋಜಾ 27ನೇ ವರ್ಧಮಾನ ಪೀಠ ಸಾಹಿತ್ಯ ಪ್ರಶಸ್ತಿ 2006"ಕ್ಕೆ ಪುರಸ್ಕೃತರಾಗಿದ್ದಾರೆ. ಡಿಸೋಜಾ ಬರೆದಿರುವ "ಇಗರ್ಜಿಯ ಸುತ್ತಲೂ ಹತ್ತು ಮನೆಗಳು" ಕಾದಂಬರಿಗೆ ವರ್ಧಮಾನ ಪೀಠ ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿದೆ.

ಪೀಠದ ಕಾರ್ಯನಿರ್ವಾಹಕ ಸಭೆಯ ಬಳಿಕ ಪ್ರಶಸ್ತಿಗಳನ್ನು ಪ್ರಕಟಿಸಿದ ಪೀಠದ ನಿರ್ದೇಶಕ ಮೊಗಸಾಲೆ, ಪ್ರಶಸ್ತಿಯು 5000 ರೂ. ನಗದು, ಪ್ರಶಸ್ತಿ ಪತ್ರ ಒಳಗೊಂಡಿದ್ದು ಮುಂದಿನ ತಿಂಗಳ ನಡೆಯುವ ಸಮಾರಂಭದಲ್ಲಿ ನೀಡಲಾಗುವುದು ಎಂದು ಹೇಳಿದರು. ವರ್ಧಮಾನ ಪೀಠ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯನ್ನು ಅಗ್ರಹಾರ ಕೃಷ್ಣಮೂರ್ತಿ ಅವರಿಗೆ ನೀಡಲಾಗಿರುವ ವಿಷಯವನ್ನು ಅವರು ತಿಳಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿರುವ ಅಗ್ರಹಾರ ಕೃಷ್ಣಮೂರ್ತಿ ಬರೆದಿರುವ ನೀರು ಮತ್ತು ಪ್ರೀತಿ ಪುಸ್ತಕಕ್ಕಾಗಿ ಈ ಪ್ರಶಸ್ತಿ ಸಂದಿದೆ, ಮಾಧವ ಕುಲಕರ್ಣಿ, ಡಾ. ಕಮಲಾ ಹೆಮ್ಮಿಗೆ ಮತ್ತು ವೀಗಾ ನಾಯಕ್ ತೀರ್ಪುಗಾರರ ಸಮಿತಿಯು ಪ್ರಶಸ್ತಿಗೆ ಉತ್ತಮ ಪುಸ್ತಕಗಳನ್ನು ಆಯ್ಕೆ ಮಾಡಿದೆಯೆಂದು ಅವರು ತಿಳಿಸಿದ್ದಾರೆ.
ಮತ್ತಷ್ಟು
ದತ್ತಪೀಠ: ಬಿಗಿ ಬಂದೋಬಸ್ತ್
ಬೃಹತ್ ಸಮಾವೇಶ:ಕಾಂಗ್ರೆಸ್ ಸಭೆ
ಮೈತ್ರಿ, ಚುನಾವಣೆ ಜೆಡಿಎಸ್ ನಿರ್ಧಾರ
'ರಾಜ್ಯ'ಕಾರಣ: ಎಂ.ಪಿ.ಪ್ರಕಾಶ್ ದೆಹಲಿಗೆ ದೌಡು
ಸಮ್ಮಿಶ್ರ ಸರಕಾರ ರಚನೆಗೆ ಪಕ್ಷೇತರರ ಆಸಕ್ತಿ
ದತ್ತಮಾಲಾ ಅಭಿಯಾನ:ಚಿಕ್ಕಮಗಳೂರಲ್ಲಿ ಬಿಗಿ ಭದ್ರತೆ
ಮುಖಪುಟ  | ನಮ್ಮ ಕುರಿತು  | ಸಲಹೆಗಳು  | ಜಾಹೀರಾತು ನೀಡಲು  | ಮಿತ್ರನಿಗೆ ಕಳಿಸು  | ಹಕ್ಕು ನಿರಾಕರಣೆ
Copyright © 2009 Webdunia.com