ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಎಂ.ಪಿ ಪ್ರಕಾಶ್,ಕಾಂಗ್ರೆಸ್ ಮುಖಂಡರ ಭೇಟಿ
ಜೆಡಿಎಸ್ ಪ್ರಮುಖ ಎಂಪಿ ಪ್ರಕಾಶ್ ಇಂದು ದೆಹಲಿಯಲ್ಲಿ ಕಾಂಗ್ರೆಸ್ ಪ್ರಮುಖರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ನವದೆಹಲಿಯಲ್ಲಿ ಇಂದು ಮುಂಜಾನೆ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಿರುವ ಅವರು, ರಾಜ್ಯ ರಾಜಕೀಯ ಪರಿಸ್ಥಿತಿಯ ಅವಲೋಕನ ನಡೆಸಿದರು ಎನ್ನಲಾಗಿದೆ.

ಈ ನಡುವೆ ಪ್ರಕಾಶ್ ಮತ್ತೆ ಜೆಡಿಎಸ್ ಮತ್ತು ಬಿಜೆಪಿ ನೇತೃತ್ವದ ಸರ್ಕಾರ ರಚಿಸಲು ಮರು ಮೈತ್ರಿಯ ಸಾರಥ್ಯ ಹೊಂದಿದ್ದಾರೆ ಎಂದೇ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಜೆಡಿಎಸ್‌ನ ಬಹುತೇಕ ಶಾಸಕರಿಗೆ ಮಧ್ಯಂತರ ಚುನಾವಣೆಯಲ್ಲಿ ಆಸಕ್ತಿ ಇಲ್ಲದಿರುವ ಹಿನ್ನೆಲೆಯಲ್ಲಿ ದೇವೇಗೌಡರು ಪ್ರಕಾಶ್ ಅವರನ್ನು ಮರು ಮೈತ್ರಿಗೆ ಕಾಂಗ್ರೆಸ್ ಪಕ್ಷವನ್ನು ಆಹ್ವಾನಿಸಿ ಸಂಧಾನ ನಡೆಸಲು ಕಳುಹಿಸಿದ್ದಾರೆ ಎನ್ನಲಾಗಿದೆ.
ಮತ್ತಷ್ಟು
ನಾ ಡಿಸೋಜಾಗೆ ವರ್ಧಮಾನ ಪೀಠ ಪ್ರಶಸ್ತಿ
ದತ್ತಪೀಠ: ಬಿಗಿ ಬಂದೋಬಸ್ತ್
ಬೃಹತ್ ಸಮಾವೇಶ:ಕಾಂಗ್ರೆಸ್ ಸಭೆ
ಮೈತ್ರಿ, ಚುನಾವಣೆ ಜೆಡಿಎಸ್ ನಿರ್ಧಾರ
'ರಾಜ್ಯ'ಕಾರಣ: ಎಂ.ಪಿ.ಪ್ರಕಾಶ್ ದೆಹಲಿಗೆ ದೌಡು
ಸಮ್ಮಿಶ್ರ ಸರಕಾರ ರಚನೆಗೆ ಪಕ್ಷೇತರರ ಆಸಕ್ತಿ