ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಶ್ರೀಘ್ರದಲ್ಲಿ ನಾಟಕ ಶಾಲೆ ಆರಂಭ
ಮುಂದಿನ ಶೈಕ್ಷಣಿಕ ವರ್ಷದಿಂದಲೇ ಬೆಂಗಳೂರಿನಲ್ಲಿ ರಾಷ್ಟ್ತ್ರೀಯ ನಾಟಕ ಶಾಲಾ ಆರಂಭಿಸಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ ಎಂದು ನಾಟಕ ಶಾಲೆಯ ನಿರ್ದೇಶಕಿ ಅನುರಾಧಾ ಕಪೂರ್ ಹೇಳಿದ್ದಾರೆ.

ಕಪೂರ್ ನೇತೃತ್ವದಲ್ಲಿ ಈಚೆಗೆ ದೆಹಲಿಯ ರಾಷ್ಟ್ತ್ರೀಯ ನಾಟಕ ಶಾಲೆಯ ಉನ್ನತ ಸಮಿತಿ ನಗರಕ್ಕೆ ಆಗಮಿಸಿತ್ತು. ಈ ಸಂದರ್ಭದಲ್ಲಿ ಇಲ್ಲಿನ ರಂಗ ತಂಡಗಳ ನಿಯೋಗವೊಂದು ಭೇಟಿ ಮಾಡಿದ ಸಂದರ್ಭದಲ್ಲಿ ಈ ವಿಷಯ ತಿಳಿಸಲಾಗಿದೆ.

ರಾಷ್ಟ್ತ್ರೀಯ ನಾಟಕ ಶಾಲೆಗೆ ಸಂಬಂಧಿಸಿದಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ.ಬಿ . ಮಹಿಷಿ ಮತ್ತು ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆ ಕಾರ್ಯದರ್ಶಿ ಐ.ಎಂ. ವಿಠಲಮೂರ್ತಿ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದಲೇ ಶಾಲೆ ಆರಂಭಿಸಲು ದಿನನಿತ್ಯದ ಆಧಾರದಲ್ಲಿ ಕೆಲಸ ಕಾರ್ಯಗಳನ್ನು ಪ್ರಾರಂಭಿಸಿರುವುದಾಗಿ ಅನುರಾಧಾ ಕಪೂರ್ ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರದಿಂದ ಅನುಕೂಲಕರ ಸ್ಪಂದನೆ ದೊರೆತಿದೆ. ಸರ್ಕಾರ ನೀಡಬೇಕೆಂದಿರುವ ಕಟ್ಟಡವನ್ನು ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ನೀಡುವ ಸಾಧ್ಯತೆಯಿದೆ.


ಮತ್ತಷ್ಟು
ಮೈತ್ರಿ ತೀರ್ಮಾನ ಹೈಕಮಾಂಡ್‌ಗೆ-ಖರ್ಗೆ
ಎಂ.ಪಿ ಪ್ರಕಾಶ್,ಕಾಂಗ್ರೆಸ್ ಮುಖಂಡರ ಭೇಟಿ
ನಾ ಡಿಸೋಜಾಗೆ ವರ್ಧಮಾನ ಪೀಠ ಪ್ರಶಸ್ತಿ
ದತ್ತಪೀಠ: ಬಿಗಿ ಬಂದೋಬಸ್ತ್
ಬೃಹತ್ ಸಮಾವೇಶ:ಕಾಂಗ್ರೆಸ್ ಸಭೆ
ಮೈತ್ರಿ, ಚುನಾವಣೆ ಜೆಡಿಎಸ್ ನಿರ್ಧಾರ