ಸುದ್ದಿ ಜಗತ್ತು
ವ್ಯವಹಾರ
ರಾಜ್ಯ ಸುದ್ದಿ
ರಾಷ್ಟ್ರೀಯ
ಮನರಂಜನೆ
ಸ್ಯಾಂಡಲ್ ವುಡ್
ಬಾಲಿವುಡ್‌
ಇನ್ನಷ್ಟು ಹಾಸ್ಯ...
ಕ್ರೀಡಾ ಜಗತ್ತು
ಕ್ರಿಕೆಟ್ ಟಿಕರ್
ಕ್ರೀಡಾಸುದ್ದಿ
ಕ್ರಿಕೆಟ್‌
ಜ್ಯೋತಿಷ್ಯ
ಜ್ಯೋತಿಷ್ಯಶಾಸ್ತ್ರ
ವಾಸ್ತು
ನಿಮ್ಮ ಜಾತಕ
ಫೋಟೋ ಗ್ಯಾಲರಿ
ಹಾಟ್‌ಶಾಟ್
ಸಿನಿಮಾ
ಬಾಲಿವುಡ್
ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಹಿತ್ಯ ಸಮ್ಮೇಳನ: ಏನೈತಿ...ಅಂಥಾದ್ದೇನೈತಿ....?!!
NEWS ROOM
ಸಾಹಿತ್ಯ ಸಮ್ಮೇಳನವೆಂದರೆ ಬರೀ ಗೋಷ್ಠಿಗಳು ಇರುತ್ತವೆಯೋ ಅಥವಾ ಇನ್ನೇನಾದರೂ ವಿಶೇಷವಿರುತ್ತದೆಯೋ ಎಂದು ಕೇಳುವವರಿಗೆ ಉಡುಪಿ ಸಾಹಿತ್ಯ ಸಮ್ಮೇಳನ ಉತ್ತರ ನೀಡಲಿದೆ.

ಎಲ್ಲಾ ಸಾಹಿತ್ಯ ಸಮ್ಮೇಳನದಂತೆ ಇಲ್ಲಿಯೂ ಹಲವು ಹನ್ನೊಂದು ವಿಚಾರ ಗೋಷ್ಠಿಗಳು, ಪುಸ್ತಕ ಬಿಡುಗಡೆ ಇದ್ದೇ ಇದೆ. ಅದರ ಜೊತೆಗೆ ಸಾಂಸ್ಕ್ಕತಿಕ ವೈವಿಧ್ಯ, ಪಾರಂಪರಿಕ ಶೈಲಿಯ ಊಟ, ಸುಗಮ ಸಂಗೀತದ ಕುರಿತಾದ ವಿಚಾರಗೋಷ್ಠಿಗಳು ನಡೆಯಲಿರುವುದು ವಿಶೇಷ.

ಸಮ್ಮೇಳನದ ಉದ್ಘಾಟನೆಯಾದ ನಂತರ ಖ್ಯಾತ ಸುಗಮ ಸಂಗೀತ ನಿರ್ದೇಶಕ ಹಾಗೂ ಗಾಯಕ ಸಿ.ಅಶ್ವತ್ಥ್ ಅಧ್ಯಕ್ಷತೆಯಲ್ಲಿ ಕನ್ನಡದಲ್ಲಿ ಸುಗಮ ಸಂಗೀತ ಹೆಸರಿನ ಗೋಷ್ಠಿ ಆಯೋಜನೆಯಾಗಿದ್ದು, ಇದು ಸುಗಮ ಸಂಗೀತವನ್ನೂ ಚರ್ಚೆಗೆ ಒಳಪಡಿಸುವ ವಿನೂತನ ಪರಿಕಲ್ಪನೆಯಾಗಿದೆ. ಜೊತೆಗೆ ಸುಗಮ ಸಂಗೀತದಲ್ಲಿನ ಸ್ವರಸಂಯೋಜನೆಯ ವಿಷಯಕ್ಕೆ ಸಂಬಂಧಿಸಿ ಅಶ್ವತ್‌ರವರು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡಲಿರುವುದು ಮತ್ತೊಂದು ವಿಶೇಷ.

ಉಡುಪಿ ಎಂದರೆ ಅದು ಬರೀ ಒಂದು ಉರಿನ ಹೆಸರಲ್ಲ. ಅದು ಧರ್ಮ, ಸಂಸ್ಕ್ಕತಿ, ಕಲೆ ಇವುಗಳ ಅನನ್ಯ ಸಂಗಮ. ಇದನ್ನು ಬಿಂಬಿಸಲು ಸಾಹಿತ್ಯ ಸಮ್ಮೇಳನದ ಸನ್ನಿವೇಶ ಒದಗಿಬಂದಿರುವುದು ಇಲ್ಲಿನ ಕಲಾಸಕ್ತರಲ್ಲಿ ಉತ್ಸಾಹ ತುಂಬಿಸಿದೆ. ಉಡುಪಿ ಜಿಲ್ಲೆಯ ವಿಶಿಷ್ಟತೆ-ವೈವಿಧ್ಯತೆಗಳನ್ನು ಚಿತ್ರಗಳಲ್ಲೇ ಬಿಡಿಸಿಡುವ ಅಪರೂಪದ ಪ್ರಯತ್ನವಾದ ಚಿತ್ರಮಯ ಉಡುಪಿ ಈ ಸಮ್ಮೇಳನದ ಮತ್ತೊಂದು ವಿಶೇಷ. ಉಡುಪಿ ಕೃಷ್ಣ ಮಂದಿರ, ಭೂತದ ಕೋಲ, ಕೊಲ್ಲೂರು ಮೂಕಾಂಬಿಕೆ ದೇವಳ, ಮಲ್ಪೆ, ಕಾಪು ಪ್ರದೇಶದ ಸಮುದ್ರ ತೀರಗಳು ಹೀಗೆ ಹಲವು ವಿಶಿಷ್ಟ ವರ್ಣಚಿತ್ರಗಳು ಈ ಸಂಪುಟದಲ್ಲಿ ಮೂಡಿಬರಲಿವೆ.

ಉಡುಪಿ ಚಿತ್ರ ಕಲಾವಿದರಿಗೂ ಹೆಸರುವಾಸಿ. ಇಲ್ಲಿನ ಕೆ.ಕೆ.ಹೆಬ್ಬಾರ್, ಜಿ.ಎಸ್.ಶೆಣೈ ಮೊದಲಾದ ಕಲಾವಿದರು ತಮ್ಮ ರೇಖೆಗಳು, ಕುಂಚಗಳಿಂದ ವಿಶ್ವಮಾನ್ಯರಾಗಿದ್ದಾರೆ. ಇಂತಹ 14 ಅಪರೂಪದ ಕಲಾವಿದರೂ ಸೇರಿದಂತೆ ಒಟ್ಟು 101 ಕಲಾವಿದರ ಅಪೂರ್ವ ಚಿತ್ರಕಲೆಗಳ ಸಂಗಮವಾಗಿರುವ ಕಲಾಶ್ರೀ ಚಿತ್ರಕೃತಿ ಈಗಾಗಲೇ ರೂಪುಗೊಂಡಿದೆ. ಇದು ಚಿತ್ರಾಸಕ್ತರನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ ಎಂಬ ವಿಶ್ವಾಸ ಸಂಘಟಕರದ್ದು.

ಒಟ್ಟಿನಲ್ಲಿ ಸಾಹಿತ್ಯವೆಂಬ ಪಕ್ಷಿಗೆ ಕಲೆ ಮತ್ತು ಸಂಸ್ಕ್ಕತಿಯ ರೆಕ್ಕೆಗಳು ಸೇರಿ ಇಡೀ ವಾತಾವರಣವನ್ನು ನ ಭೂತೋ ನ ಭವಿಷ್ಯತಿ ಎನ್ನುವಷ್ಟರ ಮಟ್ಟಿಗೆ ಅಪರೂಪದ್ದಾಗಿಸಲು ಶ್ರಮವಹಿಸುತ್ತಿರುವುದು ಕಣ್ಣಿಗೆ ಕಾಣುತ್ತಿರುವ ಸತ್ಯವಾಗಿದೆ.
ಮತ್ತಷ್ಟು
ಜೆಡಿಎಸ್‌ನಲ್ಲಿ ಮುಂದುವರೆದ ಚೆಲುವರಾಯಸ್ವಾಮಿ
ಕಾಂಗ್ರೆಸ್‌ಗೆ ಜನಬೆಂಬಲ: ಖರ್ಗೆ
ಎಲ್ಲ ಮಾಜಿ ಶಾಸಕರಿಗೂ ಟಿಕೆಟ್: ದೇವೇಗೌಡ
ಹೋಟೆಲ್ ಉದ್ಯಮದ ಸಾಧಕರಿಗೆ ಆತಿಥ್ಯರತ್ನ ಪ್ರಶಸ್ತಿ ಪ್ರದಾನ
ರಾಜಕೀಯ ಮರು ವ್ಯಭಿಚಾರ: ಎ.ಕೆ.ಸುಬ್ಬಯ್ಯ
ಹಿಂದಿ ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ರಾಜ್ಯಪಾಲರ ಒಲವು
ಮುಖಪುಟ  | ನಮ್ಮ ಕುರಿತು  | ಸಲಹೆಗಳು  | ಜಾಹೀರಾತು ನೀಡಲು  | ಮಿತ್ರನಿಗೆ ಕಳಿಸು  | ಹಕ್ಕು ನಿರಾಕರಣೆ
Copyright © 2009 Webdunia.com