ಹೋಟೆಲ್ ಉದ್ಯಮದ ಸಾಧಕರಿಗೆ ಆತಿಥ್ಯರತ್ನ ಪ್ರಶಸ್ತಿ ಪ್ರದಾನ
|
|
|
ಬೆಂಗಳೂರು, ಮಂಗಳವಾರ, 11 ಡಿಸೆಂಬರ್ 2007( 13:53 IST )
|
|
|
|
|
|
|
|
ವಿದ್ಯಾಕ್ಷೇತ್ರದ ಬೆಳವಣಿಗೆಗೆ ಹೋಟೆಲು ಉದ್ಯಮದ ಕೊಡುಗೆ ಅಪಾರ. ಇದು ಪ್ರವಾಸೋದ್ಯಮಕ್ಕೆ ಸರಿಸಮವಾದ ಉದ್ಯಮವಾಗಿದ್ದು ದೇಶದ ಆರ್ಥಿಕತೆಗೆ ವಿಶೇಷ ಕೊಡುಗೆ ನೀಡುತ್ತಿದೆ ಎಂದು ಪ್ರೊ| ಜಿ.ವೆಂಕಟಸುಬ್ಬಯ್ಯ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಪ್ರದೇಶ ಹೋಟೆಲು ಮತ್ತು ಉಪಾಹಾರ ಮಂದಿರಗಳ ಸಂಘ ಹಾಗೂ ಬೆಂಗಳೂರು ಹೋಟೆಲುಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಆತಿಥ್ಯರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಹೋಟೆಲ್ ಉದ್ಯಮವನ್ನು ಗೌರವಿಸಲು ಸರ್ಕಾರ ಮರೆತಿದೆ. ಈ ತಪ್ಪನ್ನು ತಿದ್ದಿಕೊಂಡು ರಾಜ್ಯೋತ್ಸವದ ಸಂದರ್ಭದಲ್ಲಿ ನೀಡುವ ಪ್ರಶಸ್ತಿಗಳಲ್ಲಿ ಹೋಟೆಲ್ ಉದ್ಯಮಿಗಳನ್ನು ಗುರುತಿಸಬೇಕಾಗಿದೆ. ಸರ್ಕಾರದ ನಿರ್ಲಕ್ಷ್ಯವನ್ನು ಗಮನಿಸಿದ ಹೋಟೆಲ್ ಸಂಘಟನೆಯೇ ರಾಜ್ಯಮಟ್ಟದಲ್ಲಿ ಇಂತಹ ಒಂದು ಪ್ರಶಸ್ತಿಯನ್ನು ನೀಡುತ್ತಿರುವುದು ಸ್ತುತ್ಯರ್ಹವಾಗಿದೆ ಎಂದು ವೆಂಕಟಸುಬ್ಬಯ್ಯನವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಆರ್ಥಿಕವಾಗಿ ಹಿಂದುಳಿದವರಿಗೆ ಆಶ್ರಯ, ವಿದ್ಯೆ ನೀಡಿ ಭವಿಷ್ಯತ್ತಿನ ದಾರಿ ತೋರಿಸಿರುವ ಹೋಟೆಲ್ ಉದ್ಯಮಿಗಳು ಶಿಕ್ಷಣ ಮತ್ತು ಇತರ ಕ್ಷೇತ್ರಗಳಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ದೇಶ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುನ್ನಡೆಯುವಲ್ಲಿ ಹೋಟೆಲ್ ಉದ್ಯಮಿಗಳ ಕೊಡುಗೆ ಅಪಾರವಾಗಿದೆ ಎನ್ನುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಸಂಸ್ಥೆಗಳು, ಬ್ಯಾಂಕಿಂಗ್ ವಲಯವೇ ಸಾಕ್ಷಿ. ಇದಕ್ಕೆಲ್ಲ ಮೂಲಕಾರಣವಾಗಿರುವ ಹೋಟೆಲ್ ಉದ್ಯಮ ಬೆಳೆಯಲಿ ಎಂದು ವೆಂಕಟಸುಬ್ಬಯ್ಯನವರು ಹಾರೈಸಿದರು.
ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿದ್ದ ಪೇಜಾವರ ಶ್ರೀಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡುತ್ತಾ, ಕಳೆದ 5 ದಶಕಗಳಲ್ಲಿ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡಿರುವ ಹೋಟೆಲು ಉದ್ಯಮಿಗಳು ಕರಾವಳಿಯ ಸ್ವರೂಪವನ್ನೇ ಬದಲಾಯಿಸಿದ್ದಾರೆ. ಊರನ್ನು, ನಾಡನ್ನು ಬೆಳೆಸಿದ್ದಾರೆ. ಹೋಟೆಲ್ ಉದ್ಯಮಿಗಳು ಹಣಪಡೆದು ಗ್ರಾಹಕರ ಸೇವೆ ಮಾಡುತ್ತಾರೆ. ಸಮಾಜಕ್ಕೆ ಹಣ ಕೊಟ್ಟು ಸೇವೆ ಮಾಡುತ್ತಾರೆ ಎಂದು ನುಡಿದರು. ಸಮಾರಂಭವನ್ನು ಕರ್ನಾಟಕ ಬ್ಯಾಂಕಿನ ಡೆಪ್ಯುಟಿ ಜನರಲ್ ಮ್ಯಾನೇಜರ್ ಅಶೋಕ್ ಹೆಗಡೆ ಉದ್ಘಾಟಿಸಿದರು. ಕೆ.ಎನ್.ವಾಸುದೇವ ಅಡಿಗ ಸ್ವಾಗತಿಸಿದರು. ಇನ್ನ ಶ್ರೀನಿವಾಸ ರಾವ್ ಶುಭಾಸಂಸನೆಯನ್ನು ಮಾಡಿದರೆ, ಸಿ.ವಿ.ಮಹಾದೇವಯ್ಯ ಪ್ರಸ್ತಾವನೆ ಮಾಡಿದರು. ಬಿ.ಎಸ್.ನಾಗರಾಜ ಧನ್ಯ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಪ್ರಶಸ್ತಿ ಕಾರ್ಯಕ್ರಮದ ಹಿನ್ನೆಲೆಯ ಕುರಿತು ಆಯ್ಕೆ ಸಮಿತಿ ಅಧ್ಯಕ್ಷ ಜಿ.ಕೆ.ಸೋಮಯಾಜಿ ವಿವರಿಸಿದರು. ಸನ್ಮಾನಿತರ ಪರವಾಗಿ ಕೆ.ವಿ.ಆನಂದರಾವ್ ಮಾತನಾಡಿದರು. ಮಾಜಿ ಶಾಸಕರಾದ ಕೆ.ಜಯಪ್ರಕಾಶ್ ಹೆಗ್ಡೆ ಹಾಗೂ ಕೆ.ಗೋಪಾಲ ಪೂಜಾರಿ ಉಪಸ್ಥಿತರಿದ್ದರು.
|
|
|
|