ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಂಡಾಯ ಸಾಹಿತಿ ಬಲ್ಲಾಳ ಇನ್ನಿಲ್ಲ
ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮವನ್ನು ನೀಡಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕ್ಕತ ಸಾಹಿತಿ ವ್ಯಾಸರಾಯ ಬಲ್ಲಾಳರು ಬುಧವಾರ ರಾತ್ರಿ ನಿಧನ ಹೊಂದಿದರು. ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಬಲ್ಲಾಳರು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

ಬಂಡಾಯ ನಾಯಕನೆಂದೇ ಗುರುತಿಸಿಕೊಂಡ ಬಲ್ಲಾಳರು ಉಡುಪಿ ಸಮೀಪದ ನೆಡಂಬೂರು ಗ್ರಾಮದವರಾದ ಬಲ್ಲಾಳರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಮುಗಿಸಿ ಮುಂಬಯಿಯ ಕಂಪೆನಿಯೊಂದರಲ್ಲಿ ಶೀಘ್ರ ಲಿಪಿಗಾರರಾಗಿದ್ದರು. ಅಮೇರಿಕನ್ನರಿಗೆ ಇಂಗ್ಲಿಷ್ ಕಲಿಸಿದ ಹೆಗ್ಗಳಿಕೆ ಇವರದು. ಮುಂಬಯಿಯಲ್ಲಿ ನುಡಿ ವಾರ ಪತ್ರಿಕೆಯ ಸಂಪಾದಕರಾಗಿ ಕರ್ನಾಟಕ ಸಂಘದಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿದರು.

ತಮ್ಮ 85ವರ್ಷದ ಬಾಳ್ವಿಕೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಅನೇಕ ಉತ್ತಮ ಕೃತಿಯನ್ನು ನೀಡಿ ಕನ್ನಡ ಪರಂಪರೆಯನ್ನು ಬೆಳೆಸಿದ್ದಾರೆ. ಉತ್ತರಾಯಣ ಇವರ ಶ್ರೇಷ್ಠ ಕೃತಿ. ಅಲ್ಲದೆ, ಬಂಡಾಯ ಹಾಗೂ ಮಂಜರಿ ಇವರ ಪ್ರಮುಖ ಕೃತಿಗಳು. ಏಳು ಕಾದಂಬರಿ, ಏಳು ಕಥಾ ಸಂಗ್ರಹ, ಎರಡು ರಾಜಕೀಯ ಚಿಂತನೆ ಹೀಗೆ ಹತ್ತು ಹಲವು ಸಾಹಿತ್ಯ ಪ್ರಕಾರಗಳಲ್ಲಿ ಗುರುತಿಸಿಕೊಂಡಿದ್ದ ಬಲ್ಲಾಳರು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ವಿಶೇಷ ಛಾಪು ಮೂಡಿಸಿ ಕನ್ನಡದ ಸಂಸ್ಕ್ಕತಿಯನ್ನು ಬೆಳೆಸಿದ್ದರು. ಉಡುಪಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಕೊನೆ ಗಳಿಗೆಯಲ್ಲಿ ಅವಕಾಶದಿಂದ ವಂಚಿತರಾಗಿದ್ದರು.

ಬಲ್ಲಾಳರ ಕೃತಿಯಲ್ಲಿ ಮಹಿಳೆಯರಿಗೂ ಸಮಾನವಾದ ಸ್ಥಾನಮಾನವನ್ನು ನೀಡಿ, ಗೌರವಿಸುತ್ತಿದ್ದರು. ಸ್ತ್ತ್ರೀ ಅಂದರೆ ಏನು ಎಂಬುದನ್ನು ಪಾತ್ರಗಳ ಮೂಲಕ ಬಿಂಬಿಸುತ್ತಿದ್ದರು. ಕಾದಂಬರಿಕಾರರಾಗಿ, ಪತ್ರಿಕಾ ಸಂಪಾದಕರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿದ್ದ ಬಲ್ಲಾಳರು ತಮ್ಮ ಜೀವನದ ಹೆಚ್ಚಿನ ಕಾಲವನ್ನು ಮುಂಬಯಿಯಲ್ಲಿಯೇ ಕಳೆದಿದ್ದರು.
ಮತ್ತಷ್ಟು
ಚುನಾವಣೆ ವಿಳಂಬಕ್ಕೆ ನೆಪ: ಬಿಜೆಪಿ ವಿರೋಧ
ಚುನಾವಣೆಗೆ ಸಜ್ಜಾಗಲು ವೆಂಕಯ್ಯನಾಯ್ಡು ಕರೆ
ಕಮಲದ ಮಡಿಲಿಗೆ ಇನ್ನೊಂದು ದಳ
ಪ್ರತ್ಯೇಕ ಅಪಘಾತಗಳಲ್ಲಿ 3 ಮಂದಿ ಸಾವು
ಪೇಜಾವರ ಬಗ್ಗೆ ಹೇಳಿಕೆ ನೀಡಿಲ್ಲ: ದತ್ತಾ
ಬೈಕ್ ಬಾಂಬ್ ತಯಾರಿ ನಿಪುಣರು ಈ ಶಂಕಿತ ಉಗ್ರರು