ಬೈಕ್ ಬಾಂಬ್ ತಯಾರಿ ನಿಪುಣರು ಈ ಶಂಕಿತ ಉಗ್ರರು
|
|
|
ದಾವಣಗೆರೆ:, ಬುಧವಾರ, 30 ಜನವರಿ 2008( 17:03 IST )
|
|
|
|
|
|
|
|
ಬೈಕ್ ಕಳವು ಆರೋಪದ ಮೇಲೆ ದಾವಣಗೆರೆಯಲ್ಲಿ ಬಂಧಿತರಾಗಿದ್ದ ಶಂಕಿತ ಉಗ್ರರು 2003ರಲ್ಲಿ ಗುಜರಾತ್ ಮಾಜಿ ಗೃಹಸಚಿವ ಹರೇನ್ ಪಾಂಡ್ಯ ಕೊಲೆಯಲ್ಲಿ ಭಾಗಿಯಾಗಿದ್ದರೆಂಬ ಮಹತ್ವದ ಅಂಶ ವಿಚಾರಣೆ ವೇಳೆಯಲ್ಲಿ ಬೆಳಕಿಗೆ ಬಂದಿದೆ.
ಶಂಕಿತ ಉಗ್ರರಾದ ಮಹಮದ್ ಗೌಸ್ ಅಲಿಯಾಸ್ ರಿಯಾಜುದ್ದೀನ್ ನಾಸಿರ್ ಮತ್ತು ಆತನ ಸಹಚರ ಅಸಾದುಲ್ಲಾ ಇಸ್ಮಾಯಿಲ್ ಅಬೂಬಕರ್ ಬೈಕ್ ಕಳವು ಮಾಡಿ, ಆ ಮೂಲಕ ಬಾಂಬ್ ಸ್ಪೋಟಿಸುವ ಬಗ್ಗೆ ಸಂಚು ನಡೆಸಿದ್ದರೆಂಬ ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ.
ಮಹಮದ್ ಗೌಸ್ ಎಂಬಾತ 1996ರಲ್ಲಿಯೇ ಹೈದರಾಬಾದಿನಿಂದ ಪಾಸ್‌ಪೋರ್ಟ್ ಪಡೆದುಕೊಂಡಿದ್ದು, ಪಾಕಿಸ್ತಾನದ ಉಗ್ರಗಾಮಿ ಸಂಘಟನೆಯೊಂದರಲ್ಲಿ ತೊಡಗಿಸಿಕೊಂಡು ಬಾಂಬ್ ತಯಾರಿಕೆಯ ಬಗ್ಗೆ ಮೂರು ತಿಂಗಳ ಕಾಲ ತರಬೇತಿ ಪಡೆದಿದ್ದ ಎನ್ನಲಾಗಿದೆ. ಈತ ಮೆಕ್ಕಾಗೆ ಹೋಗಿದ್ದ ಸಂದರ್ಭದಲ್ಲಿ ಪರಿಚಯವಾದ ಅಸಾದುಲ್ಲಾನೊಡನೆ ಜೊತೆಗೂಡಿ ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಎಂಬ ಆಘಾತಕಾರಿ ಅಂಶಗಳು ವಿಚಾರಣೆ ವೇಳೆ ಹೊರಬಿದ್ದಿವೆ.
ಅಲ್ಲದೆ, ಮಹಮದ್ ಗೌಸ್ ಬೈಕಿನಲ್ಲಿರಿಸಬಹುದಾದ ಸ್ಪೋಟಕಗಳ ತಯಾರಿಕೆಯಲ್ಲಿ ತೊಡಗಿದ್ದ. ಈ ಕಾರಣದಿಂದಾಗಿಯೇ ಇನ್ನೊಬ್ಬ ಉಗ್ರನಾದ ಅಸಾದುಲ್ಲಾನ ಜೊತೆಯಲ್ಲಿ ಬೈಕ್ ಕಳ್ಳತನದ ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಪೊಲೀಸರು ಈ ಬಗ್ಗೆ ತೀವ್ರ ತನಿಖೆ ಆರಂಭಿಸಿದ್ದು, ಬುಧವಾರ ಮಂಪರು ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ.
|
|
|
|