ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಸ್ ಅಪಘಾತ: ಮೂವರು ಸಾವು, ಹಲವರಿಗೆ ಗಾಯ
ಕಾರ್ಕಳ ಸಮೀಪದ ನಾರಾವಿಯಲ್ಲಿ ಗುರುವಾರ ಮುಂಜಾನೆ ಬಸ್ಸೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 3 ಜನ ಸ್ಥಳದಲ್ಲಿಯೇ ಮೃತ ಪಟ್ಟಿದ್ದು, 30 ಜನರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಸಾವಿಗೀಡಾದವರಲ್ಲಿ ಮೂವರು ಮಹಾರಾಷ್ಟ್ರ ಔರಾಂಗಬಾದ್ ನಿವಾಸಿಗಳೆಂದು ಗುರುತಿಸಲಾಗಿದೆ. ಗಾಯಾಳುಗಳಲ್ಲಿ 5 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೀವಕ್ಕೇನು ಅಪಾಯವಿಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಉಳಿದವರನ್ನು ಹತ್ತಿರದ ಕಾರ್ಕಳ ಆಸ್ಪತ್ರೆಗೆ ಸೇರಿಸಲಾಗಿದೆ.

ಪ್ರಯಾಣಿಕರೆಲ್ಲಾ ಮಹಾರಾಷ್ಟ್ರದವರಾಗಿದ್ದು, ತೀರ್ಥಯಾತ್ರೆಯ ಸಲುವಾಗಿ ಪ್ರಯಾಣ ಕೈಗೊಂಡಿದ್ದರು ಎಂದು ತಿಳಿದು ಬಂದಿದೆ. ಬಸ್ ಚಾಲಕನ ಅಜಾಗರೂಕತೆಯೇ ಈ ದುರ್ಘಟನೆಗೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಪೊಲೀಸರು ಆತನನ್ನು ತನಿಖೆಗೆ ಒಳಪಡಿಸಿದ್ದಾರೆ.
ಮತ್ತಷ್ಟು
ಬಂಡಾಯ ಸಾಹಿತಿ ಬಲ್ಲಾಳ ಇನ್ನಿಲ್ಲ
ಚುನಾವಣೆ ವಿಳಂಬಕ್ಕೆ ನೆಪ: ಬಿಜೆಪಿ ವಿರೋಧ
ಚುನಾವಣೆಗೆ ಸಜ್ಜಾಗಲು ವೆಂಕಯ್ಯನಾಯ್ಡು ಕರೆ
ಕಮಲದ ಮಡಿಲಿಗೆ ಇನ್ನೊಂದು ದಳ
ಪ್ರತ್ಯೇಕ ಅಪಘಾತಗಳಲ್ಲಿ 3 ಮಂದಿ ಸಾವು
ಪೇಜಾವರ ಬಗ್ಗೆ ಹೇಳಿಕೆ ನೀಡಿಲ್ಲ: ದತ್ತಾ