ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರು: ಆಟೋ ಪ್ರಯಾಣಕ್ಕೆ ಕನಿಷ್ಠ ದರ 14 ರೂ.
ಬೆಂಗಳೂರಿನಲ್ಲಿ ಓಡಾಡುವವರಿಗೊಂದು ಸೂಚನೆ. ನೀವು ಆಟೋ ರಿಕ್ಷಾದಲ್ಲಿ ಪ್ರಯಾಣಿಸುವವರಾದರೆ ಕನಿಷ್ಠ ದರ 14 ರೂ. ನೀಡಬೇಕು. ಹೆಚ್ಚು ಹಣ ಕೀಳುವ ಆಟೋ ಚಾಲಕರೊಂದಿಗೆ ಮಾತನಾಡಲು ಈ ಮಾಹಿತಿ ನಿಮಗೆ ಪೂರಕ.

ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಿಸುವ ಕುರಿತಾಗಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘಟನೆಗಳು ಜಿಲ್ಲಾಧಿಕಾರಿ ಎಂ.ಎ. ಸಾಧಿಕ್ ನೇತೃತ್ವದಲ್ಲಿನ ನಡೆದ ಅಂತಿಮ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಫೆಬ್ರವರಿ 1ರಿಂದ ಇದು ಜಾರಿಗೆ ಬರಲಿದ್ದು, ಆಟೋ ಪ್ರಯಾಣ ಕನಿಷ್ಠದರ 12ರಿಂದ 14ರೂ. ಹಾಗೂ ಪ್ರತಿ ಕಿ.ಮೀ. ದರವನ್ನು 6 ರಿಂದ 7ರೂ. ವರೆಗೆ ಹೆಚ್ಚಿಸಲಾಗಿದೆ.

ಪ್ರಸ್ತುತ ಆಟೋ ಇಂಧನದ ಬೆಲೆ ಏರಿಕೆಯಾಗಿದ್ದರಿಂದ ಆಟೋದರವನ್ನು ಹೆಚ್ಚಿಸಬೇಕೆಂದು ಕಳೆದ ಕೆಲವು ದಿನಗಳಿಂದ ಆಟೋಚಾಲಕರು ಸರ್ಕಾರವನ್ನು ಆಗ್ರಹಿಸುತ್ತಿದ್ದು, ಜಿಲ್ಲಾಧಿಕಾರಿಯವರು ಈ ಬಗ್ಗೆ ಡಿಸಿಪಿ ನೇತೃತ್ವದ ಸಮಿತಿ ಸಲ್ಲಿಸಿದ್ದ ವರದಿ ಪರಿಗಣಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಮಾರ್ಚ್ 31ರ ಒಳಗೆ ಕಡ್ಡಾಯವಾಗಿ ಪರಿಷ್ಕೃತ ಮೀಟರ್ ಅಳವಡಿಸಬೇಕು. ತಾತ್ಕಾಲಿಕ ಆರ್‌ಟಿಎದಿಂದ ಪರಿಷ್ಕೃತ ದರದ ಪಟ್ಟಿ ಪಡೆದು ಆಟೋದಲ್ಲಿ ಪ್ರಚುರಪಡಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು, ಡಿಜಿಟಲ್ ಮೀಟರ್ ಕಡ್ಡಾಯದ ಕುರಿತಾದ ನಿಯಮ ತಿದ್ದುಪಡಿ ಮಾಡಬೇಕಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಮತ್ತಷ್ಟು
ಬಸ್ ಅಪಘಾತ: ಮೂವರು ಸಾವು, ಹಲವರಿಗೆ ಗಾಯ
ಬಂಡಾಯ ಸಾಹಿತಿ ಬಲ್ಲಾಳ ಇನ್ನಿಲ್ಲ
ಚುನಾವಣೆ ವಿಳಂಬಕ್ಕೆ ನೆಪ: ಬಿಜೆಪಿ ವಿರೋಧ
ಚುನಾವಣೆಗೆ ಸಜ್ಜಾಗಲು ವೆಂಕಯ್ಯನಾಯ್ಡು ಕರೆ
ಕಮಲದ ಮಡಿಲಿಗೆ ಇನ್ನೊಂದು ದಳ
ಪ್ರತ್ಯೇಕ ಅಪಘಾತಗಳಲ್ಲಿ 3 ಮಂದಿ ಸಾವು