ಜೆಡಿಎಸ್ ಬಿಟ್ಟು ಹೋಗಲ್ಲ: ಚನ್ನಿಗಪ್ಪ
|
|
|
|
ಬೆಂಗಳೂರು, ಬುಧವಾರ, 6 ಆಗಸ್ಟ್ 2008( 11:48 IST )
|
|
|
|
|
|
|
|
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಪಕ್ಷ ಬಿಡುವ ಬಗ್ಗೆ ಮಾತನಾಡಿದ್ದ ಮಾಜಿ ಸಚಿವ ಚನ್ನಿಗಪ್ಪ ದಿಢೀರನೆ ತಮ್ಮ ಮಾತಿನ ವರಸೆಯನ್ನು ಬದಲಾಯಿಸಿದ್ದು, ಪಕ್ಷ ತೊರೆಯದಿರಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.
ನನ್ನ ಜೀವನ ಪರ್ಯಂತ ದೇವೇಗೌಡರ ಕುಟುಂಬದ ಅನುಯಾಯಿಯಾಗಿ ಬಾಳುತ್ತೇನೆ ಎಂದು ಚನ್ನಿಗಪ್ಪ ಘೋಷಿಸುವ ಮೂಲಕ ಇದುವರೆಗೆ ತೆರೆಮರೆಯಲ್ಲಿ ನಡೆದ ಪ್ರಹಸನಕ್ಕೆ ನಾಂದಿ ಹಾಡಿದ್ದಾರೆ.
ತಮ್ಮ ಪುತ್ರನೊಂದಿಗೆ ಬಿಜೆಪಿ ಸೇರಲು ತೀರ್ಮಾನಿಸಿದ್ದ ಚನ್ನಿಗಪ್ಪ ಅವರ ಜೊತೆ ಮಂಗಳವಾರ ತಡರಾತ್ರಿವರೆಗೆ ಮಾತುಕತೆ ನಡೆಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಾಸಕರಾದ ಎಚ್.ಸಿ. ಬಾಲಕೃಷ್ಣ, ಪುಟ್ಟಣ್ಣ, ಮಾಜಿ ಸಚಿವ ಚೆಲುವರಾಯಸ್ವಾಮಿ ಸೇರಿದಂತೆ ಹಲವು ನಾಯಕರು ಪಕ್ಷಕ್ಕೆ ವಾಪಸ್ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಮಾತುಕತೆಯ ಬಳಿಕ ಮಾತನಾಡಿದ ಚನ್ನಿಗಪ್ಪ, ದೇವೇಗೌಡರಿಂದ ಕುಮಾರಸ್ವಾಮಿ ಮತ್ತು ಜೆಡಿಎಸ್‌ಗೆ ಅನ್ಯಾಯವಾಗಿರಬಹುದು. ಆದರೆ, ಅವರಿಂದ ನನಗಾಗಲೀ ನನ್ನ ಕುಟುಂಬಕ್ಕಾಗಲಿ ಯಾವುದೇ ಅನ್ಯಾಯವಾಗಿಲ್ಲ. ನಾನು ದೇವೇಗೌಡರ ಕುಟುಂಬದ ಅನುಯಾಯಿ ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
|
|
|
|