ಪ್ರತಿಪಕ್ಷ ನಾಯಕರಿಗೆ ಕಾಡು ಮೃಗಗಳೆಂದು ಎಲ್ಲಿಯೂ ಹೇಳಿಕೆ ನೀಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.ಗಾಂಧಿ ಜಯಂತಿ ಪ್ರಯುಕ್ತ ನಗರದಲ್ಲಿ ಇಂದು(ಗುರುವಾರ) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಯೋತ್ಪಾದಕರನ್ನು, ಮತಾಂತರ ಮಾಡುವವರನ್ನು ಕಾಡುಮೃಗಗಳೆಂದು ಕರೆದಿರುವುದಾಗಿ ಸ್ಪಷ್ಟಪಡಿಸಿದರು.ರಾಜ್ಯದಲ್ಲಿ ಭಯೋತ್ಪಾದನೆ ಹಾಗೂ ಮತಾಂತರದಿಂದಾಗಿ ಅಭಿವೃದ್ಧಿ ಕುಂಠಿತಗೊಂಡಿದೆ. ಈ ಬಗ್ಗೆ ಪ್ರತಿಪಕ್ಷಗಳ ನಾಯಕರುಗಳನ್ನು ಯಾವತ್ತೂ ತುಚ್ಛವಾಗಿ ಟೀಕಿಸಿಲ್ಲ. ಆಡಳಿತ ಪಕ್ಷಕ್ಕೆ ಎಷ್ಟು ಗೌರವವಿದೆಯೋ, ಅಷ್ಟೇ ವಿರೋಧ ಪಕ್ಷದವರಲ್ಲಿಯೂ ಗೌರವ ಹೊಂದಿರುವ ವ್ಯಕ್ತಿ ನಾನಾಗಿದ್ದೇನೆ. ಮಾಧ್ಯಮಗಳ ತಪ್ಪು ಗ್ರಹಿಕೆಯಿಂದ ಇಂತಹ ವಿವಾದಗಳು ಸೃಷ್ಟಿಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.ಗಾಂಧಿ ಸ್ಮಾರಕಕ್ಕೆ ಹಣ ಬಿಡುಗಡೆ ಏತನ್ಮಧ್ಯೆ, ಗಾಂಧೀಜಿ ಸ್ಮಾರಕಕ್ಕೆ 25 ಲಕ್ಷ ರೂ. ಬಿಡುಗಡೆ ಮಾಡಲಾಗುವುದು. ಅಂತೆಯೇ ಗಾಂಧಿ ಆರ್ಟ್ ಗ್ಯಾಲರಿಗೆ 50 ಲಕ್ಷ ರೂ. ಬಿಡುಗಡೆ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ. |
ಸಂಬಂಧಿತ ಮಾಹಿತಿ ಹುಡುಕಿ |
|