ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪಬ್ ದಾಳಿ ಪ್ರಕರಣ: ಐಜಿ ಪ್ರಸಾದ್ ವರ್ಗಾವಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಬ್ ದಾಳಿ ಪ್ರಕರಣ: ಐಜಿ ಪ್ರಸಾದ್ ವರ್ಗಾವಣೆ
ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶದ ಗಮನ ಸೆಳೆದಿರುವ ಮಂಗಳೂರಿನ ಪಬ್ ದಾಳಿ ಪ್ರಕರಣಗಳ ಹಿನ್ನೆಲೆಯಲ್ಲಿ ಪಶ್ಚಿಮ ವಲಯ ಐಜಿ ಎ.ಎಂ. ಪ್ರಸಾದ್ ಅವರನ್ನು ವರ್ಗಾವಣೆ ಮಾಡಿ ಗುರುವಾರ ರಾತ್ರಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಸ್ಥಾನವನ್ನು ಹಿರಿಯ ಐಪಿಎಸ್ ಅಧಿಕಾರಿ ಗೋಪಾಲ ಹೊಸೂರ್ ಅಲಂಕರಿಸಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ರಾಜಭವನಕ್ಕೆ ಕರೆಯಿಸಿಕೊಂಡು ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚಿಸಿ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಸೂಚನೆ ನೀಡಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೆಲ ಸಚಿವರು ಮತ್ತು ಅಧಿಕಾರಿಗಳ ಜತೆ ಬಜೆಟ್ ಪೂರ್ವ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜ್ಯಪಾಲರ ತುರ್ತು ಬುಲಾವ್ ಬಂದ ಕೂಡಲೇ ಸಭೆಯಿಂದ ನಿರ್ಗಮಿಸಿದ ಯಡಿಯೂರಪ್ಪ ಅವರು ರಾಜಭವನಕ್ಕೆ ತೆರಳಿ ಒಂದು ತಾಸುಗಳ ಕಾಲ ಮಾತುಕತೆ ನಡೆಸಿದರು.

ಪ್ರೇಮಿಗಳ ದಿನಾಚರಣೆಯಂದು ಶ್ರೀರಾಮ ಸೇನೆ ಪ್ರತಿಭಟನೆ ನಡೆಸಲು ನಿರ್ಧರಿಸುವ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರೇಮಿಗಳ ದಿನ-ಸ್ಥಳದಲ್ಲೇ ಮದುವೆ: ಶ್ರೀರಾಮಸೇನೆ
ಅಶ್ವಿನಿ ಪ್ರಕರಣ:ಆರೋಪಿ ಸಲೀಂ ನ್ಯಾಯಾಂಗ ಬಂಧನಕ್ಕೆ
ಮೈಸೂರು ವಿವಿಯಲ್ಲಿ ಎನ್‌ಎಸ್‌ಯುಐ ಗೂಂಡಾಗಿರಿ
ಸಂಘಪರಿವಾರ ಗೂಂಡಾಗಿರಿ ?-ಯುವತಿ ನೇಣಿಗೆ ಶರಣು
ಹೊಸ ಪಬ್‌ಗೆ ಅನುಮತಿ ಇಲ್ಲ: ಕಟ್ಟಾ ಸುಬ್ರಹ್ಮಣ್ಯ
ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ