ಮಂಗಳೂರಿನಲ್ಲಿ ಉಗ್ರ ಮಲಬಾರಿ ಪರ ವಕೀಲ ನೌಶಾದ್ ಕಾಸಿಂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದಲ್ಲಿ ವರದಿ ನೀಡುವಂತೆ ಹೈಕೋರ್ಟ್ ಬುಧವಾರ ಸರ್ಕಾರಕ್ಕೆ ಆದೇಶಿಸಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಸಂಸ್ಥೆಗಳು ನಡೆಸುವ ತನಿಖೆ ಬಗ್ಗೆ ವಿಶ್ವಾಸ ಇರುವುದರಿಂದ ಹೊರ ರಾಜ್ಯದ ಅಥವಾ ಬೇರೆ ರಾಜ್ಯದ ಏಜೆನ್ಸಿಗಳಿಂದ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಹೇಳಿದ ನ್ಯಾಯಪೀಠ, ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸರ್ಕಾರಕ್ಕೆ ಸೂಚಿಸಿದೆ.ವಕೀಲ ನೌಶಾದ್ ಖಾಸಿಂ ಅವರನ್ನು ಏಪ್ರಿಲ್ 10ರಂದು ಬರ್ಬರವಾಗಿ ಹತ್ಯೆ ಮಾಡಿದ್ದ ಕುರಿತು ಸಿಕ್ರಂ ಸಂಸ್ಥೆ ಹೈಕೋರ್ಟ್‌ಗೆ ಪತ್ರ ಬರೆದು ಪೊಲೀಸ್ ಅಧಿಕಾರಿಗಳೇ ಹತ್ಯೆಗೆ ಬೆಂಬಲವಾಗಿ ನಿಂತಿದ್ದರಿಂದ ಪ್ರಕರಣದ ಬಗ್ಗೆ ಸಿಬಿಐ ಅಥವಾ ಉನ್ನತ ಮಟ್ಟದ ತನಿಖೆ ನಡೆಸುವಂತೆ ಕೋರಿತ್ತು. ಈ ಪತ್ರವನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿವರ್ತಿಸಿದ ಹೈಕೋರ್ಟ್ ಆ ಆದೇಶ ನೀಡಿದೆ. |