ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಸೈಫ್- ಕರೀನಾ ಮದುವೆ ಬಗ್ಗೆ ಗೊತ್ತಿಲ್ಲ- ಪಟೌಡಿ
ಸುದ್ದಿ/ಗಾಸಿಪ್
Feedback Print Bookmark and Share
 
IFM
ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ, 'ಟೈಗರ್' ಎಂದೇ ಖ್ಯಾತಿವೆತ್ತ ಆಸಿಫ್ ಆಲಿ ಪಟೌಡಿ ಈಗ ಸ್ವತಃ ತಮ್ಮ ಮಗ ಸೈಫ್ ಆಲಿ ಖಾನ್ ಹಾಗೂ ಕರೀನಾ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಕರೀನಾ- ಸೈಫ್ ಸಂಬಂಧ ಗಪ್-ಚುಪ್ ಆಗಿ ಉಳಿಯದೆ, ರಾಜಾರೋಷವಾಗಿ ಬಾಲಿವುಡ್ ತುಂಬೆಲ್ಲ ಸುತ್ತುತ್ತಿರುವಾಗ ಸಿಕ್ಕ ಅಪ್ಪ ಪಟೌಡಿಯನ್ನು ಮಾಧ್ಯಮದ ಮಂದಿ ಬಿಡಲಿಲ್ಲ. 'ನಿಮ್ಮ ಮಗ ಯಾವಾಗ ಮದುವೆಯಾಗುತ್ತಾನೆ?' ಎಂದು ಕೇಳಿಯೇ ಬಿಟ್ಟರು.

ಮಗನ ಮದುವೆಯ ಬಗ್ಗೆ ಮಾಧ್ಯಮದವರು ಬರೋಬ್ಬರಿ ಸುದ್ದಿಯೊಂದು ಸಿಗುತ್ತದೆ ಎಂದು ಬಾಯಿ ಬಿಡುತ್ತಿರುವಾಗ ಸಿಕ್ಕಿದ್ದು ಏನೇನೂ ಇಲ್ಲ. 'ಈ ಪ್ರಶ್ನೆ ನನ್ನಲ್ಲಿ ಕೇಳುವುದಕ್ಕಿಂತ ಕರೀನಾ- ಸೈಫ್ ಅವರನ್ನೇ ಕೇಳಿ' ಎಂದು ಬಿಡಬೇಕೇ? 'ಮದುವೆ ಪ್ಲಾನ್ ಏನಾದರೂ ಅವರಿಬ್ಬರದ್ದು ಇದ್ದರೆ, ನೀವು ನನ್ನಿಂದ ಉತ್ತರ ಪಡೆಯುವುದಕ್ಕಿಂತ ಅವರಲ್ಲೇ ಕೇಳಿದರೆ ಉತ್ತಮ. ಯಾಕೆಂದರೆ ಅವರಿಬ್ಬರಿಗೂ ಅವರ ಜೀವನದ ಬಗ್ಗೆ ಏನು ಮಾಡಬೇಕೆಂದು ಗೊತ್ತಿದೆ. ಅವರು ಮೆಚ್ಯೂರ್ಡ್ ಆಗಿದ್ದಾರೆ. ಅವರು ಹೆತ್ತವರ ಮಾತೆಲ್ಲಿ ಕೇಳುತ್ತಾರೆ?' ಎಂದಷ್ಟೇ ಹೇಳಿ ತಮ್ಮ ಹೆಂಡತಿ ಮಾಜಿ ನಟಿ ಶರ್ಮಿಳಾ ಠಾಗೋರ್ ಜತೆಗೆ ಮುನ್ನಡೆದರು.

ಆದರೆ, ಅತ್ತ ಕರೀನಾ- ಸೈಫ್ ತಮ್ಮ ಮದುವೆ ಬಗ್ಗೆ ಚಕಾರವೆತ್ತುತ್ತಿಲ್ಲ. ಬಾಲಿವುಡ್‌ನ ಹಾಟ್ ಜೋಡಿ ಎಂದೇ ಖ್ಯಾತಿವೆತ್ತ ಈ ಇಬ್ಬರು ಈಗಷ್ಟೇ ವಿದೇಶದಲ್ಲಿ ಸುತ್ತಾಡಿ ಹಿಂತಿರುಗಿದ್ದಾರೆ. ಕರೀನಾ ಮುಂಬೈಯಲ್ಲಿ ಬಹುದೊಡ್ಡ ಬಂಗಲೆಯನ್ನೂ ಕಟ್ಟಿಸುತ್ತಿದ್ದಾರೆ. ಅದರ ಮೇಲ್ವಿಚಾರಣೆ ಎಲ್ಲ ಸೈಫ್‌ದೇ ಅಂತೆ. 'ನನಗೆ ಸೈಫ್ ಜತೆ ಇರೋದಕ್ಕೆ ಬಹಳ ಇಷ್ಟ. ನನ್ನ ಹಾಗೂ ಆತನ ನಡತೆಯಲ್ಲಿ ಬಹುತೇಕ ಸಾಮ್ಯತೆಯಿದೆ. ಹಾಗಾಗಿ ನಾವಿಬ್ಬರು ಮ್ಯಾಚ್ ಆಗುತ್ತೇವೆ' ಎಂದೆಲ್ಲ ಕರೀನಾ ಇತ್ತೀಚೆಗೆ ಹೇಳಿದ್ದಳು.

IFM
ಮದುವೆ ಎಂಬ ಪ್ರಶ್ನೆ ಬಂದಾಗ, 'ಸದ್ಯಕ್ಕೆ ಎರಡು ವರ್ಷಗಳ ಕಾಲ ನನ್ನ ಕ್ಯಾಲೆಂಡರ್‌ನಲ್ಲಿ ಮದುವೆಯಾಗುವುದಕ್ಕೂ ಸಮಯವೇ ಇಲ್ಲ. ಅಷ್ಟೂ ಬ್ಯುಸಿಯಾಗಿದ್ದೇನೆ. ನಾನು ಸೈಫ್ ಇಬ್ಬರೂ ಈಗ ನಮ್ಮ ಕೆರಿಯರ್ ಬಗ್ಗೆ ಯೋಚಿಸುತ್ತಿದ್ದೇವೆ' ಎಂದರೂ ತಾನು ಸೈಫ್‌ ಮದುವೆಯಾಗುವ ಮದುವೆಯಾಗುವ ಸುಳಿವನ್ನೂ ಕೊಡುತ್ತಾಳೆ. ಆದರೂ, ಮದುವೆಯ ನಂತರದ ಫ್ಯೂಚರ್ ಪ್ಲಾನ್ ಎಲ್ಲ ಈಗಲೇ ಕರೀನಾ ಮಾಡುತ್ತಿದ್ದಾಳೆ!

ಅದೇನಪ್ಪಾ ಅಂದರೆ, ಟಶನ್‌ನಲ್ಲಿ ಬಿಕಿನಿ ತೊಟ್ಟು ಝೀರೋ ಫಿಗರ್‌ನಲ್ಲಿ ನಳನಳಿಸಿದ ಕರೀನಾ ಆಮೇಲೆ ಯಾಕೋ ತಾನು ಬಿಕಿನಿ ತೊಡಬಾರದು ಅಂತಲೂ ನಿರ್ಧರಿಸಿದ್ದಾರಂತೆ. ಅದರಲ್ಲೂ ಮದುವೆಯಾದ ಮೇಲಂತೂ ಹಾಗೆಲ್ಲ ಕಾಣಿಸಿಕೊಳ್ಳೋದಿಲ್ಲ ಅನ್ನುತ್ತಾಳೆ ಈ ಗ್ಲಾಮರ್ ಬೊಂಬೆ. 'ಐಶ್ವರ್ಯಾ ರೈ ನನಗೆ ಮಾದರಿ' ಎನ್ನುವ ಕರೀನಾ, 'ಐಶ್ ಮದುವೆಯಾದ ನಂತರ ತನ್ನ ಚಿತ್ರಗಳಲ್ಲಿ ಪಾತ್ರಗಳ ಆಯ್ಕೆ ಮಾಡುವುದು ನನಗೆ ತುಂಬ ಇಷ್ಟವಾಗುತ್ತಿದೆ. ಆಕೆಯನ್ನು ನೋಡಿ ನಾನು ಕಲಿತಿದ್ದೇನೆ. ನನ್ನ ದೇಹ ಬಿಕಿನಿಯಲ್ಲಿ ಚೆನ್ನಾಗಿ ಕಾಣುತ್ತದಾದರೂ ನನಗೆ ಅದರ ಅಗತ್ಯ ಈಗಿಲ್ಲ' ಎಂದು ಎಲ್ಲರ ಹುಬ್ಬೇರಿಸುತ್ತಾಳೆ.

'ಎರಡು ವರ್ಷವಂತೂ ಮದುವೆ ಇಲ್ಲವಪ್ಪ' ಎನ್ನುವ ಕರೀನಾ, ಮದುವೆಯ ನಂತರಕ್ಕೆ ಈಗಲೇ ತಯಾರಿ ನಡೆಸುತ್ತಿದ್ದಾಳೆ! 'ಈಗ ಕಟ್ಟಿಸುತ್ತಿರುವ ಮನೆಯ ಬಗ್ಗೆ ನನ್ನ ಮಕ್ಕಳು ಹೆಮ್ಮೆ ಪಡಬೇಕು. ಹಾಗೆ ಮನೆ ಕಟ್ಟಿಸುತ್ತಿದ್ದೇನೆ' ಎಂದು ತನ್ನ ಫ್ಯೂಚರ್ ಪ್ಲಾನ್ ಹೇಳುತ್ತಾಳೆ! ಶಾಹಿದ್‌ಗೆ ಕೈಕೊಟ್ಟ ಕರೀನಾ ಸೈಫ್ ಕೈಹಿಡಿಯುತ್ತಾಳೋ ಎಂಬ ಕುತೂಹಲಕ್ಕೆ ಉತ್ತರ ಸಿಗಲು ಮಾತ್ರ ಇನ್ನೂ ಎರಡು ವರ್ಷ ಬೇಕು. ಆದರೂ, ಎರಡು ವರ್ಷ ಸೈಫ್ ಜತೆಗಿರುತ್ತಾಳಾ.. ಅಥವಾ ಇನ್ನಾವ ಪುಣ್ಯಾತ್ಮ ಆ ಜಾಗಕ್ಕೆ ಭಡ್ತಿ ಪಡೆದಿರುತ್ತಾನಾ.. ಕಾಯಬೇಕಷ್ಟೆ ಬಿಡಿ. ಕಾಲಾಯ ತಸ್ಮೈ ನಮಃ!
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪಟೌಡಿ, ಸೈಫ್ ಆಲಿ ಖಾನ್, ಕರೀನಾ, ಶರ್ಮಿಳಾ ಠಾಗೋರ್