ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಅಯ್ಯೋ.!! ರಾಖಿಯ ಸ್ವಯಂವರಕ್ಕೆ ನಾಟಕೀಯ ತಿರುವು! (Rakhi Ka Swayamvar | Rakhi Sawant | NDTV Imagine | Marriage)
ಸುದ್ದಿ/ಗಾಸಿಪ್
Feedback Print Bookmark and Share
 
Rakhi Ka Swayamvar
IFM
ರಾಖಿ ಸಾವಂತ್‌ಗೆ ಗ್ರಹಚಾರ ನೆಟ್ಟಗಿಲ್ಲವೋ.. ಅಥವಾ ನೆಟ್ಟಗಿದ್ದ ಗ್ರಹಚಾರವನ್ನೇ ಸೊಟ್ಟಗೆ ಮಾಡಿದಳೋ ಗೊತ್ತಿಲ್ಲ. ಹುಡುಗಾಟದಿಂದಲೇ ಸುದ್ದಿಮಾಡುವ ಈ ಕನ್ಯಾಮಣಿಯ ಇನ್ನೊಂದು ಅವತಾರ ರಾಖಿ ಕಾ ಸ್ವಯಂವರ ಇದೀಗ ಯಾಕೋ ವಿಚಿತ್ರ ನಾಟಕೀಯ ತಿರುವು ಪಡೆಯುತ್ತಿದೆ!

ಎನ್‌ಡಿಟಿವಿ ಚಾನಲ್ ಅಂತೂ ರಾಖಿಯ 'ಶೋ'ನಿಂದ ದಿಗ್ಗನೆ ಹೆಚ್ಚಿದ ಟಿಆರ್‌ಪಿಯಿಂದ ಉಲ್ಲಸಾದಿಂದಿದೆ. ಆದರೆ. ರಾಖಿ ಮಾತ್ರ ಯಾಕೋ ಉತ್ಸಾಹ ಕಳೆದುಕೊಂಡಿದ್ದಾಳೋ... ಗೊತ್ತಿಲ್ಲ.

ಈ ಸಂಶಯ ಈಗ ಯಾಕೆ ಬಂದಿದೆಯೆಂದರೆ, ರಾಖಿ ಸಾವಂತ್‌ ಮದುವೆಯಾಗಲು ಅದೃಷ್ಟ ಹೊಂದಿ ಅಂತಿಮವಾಗಿ ಕಣದಲ್ಲಿದ್ದ 16 ಮಂದಿಯಲ್ಲಿ ಒಬ್ಬರಿಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ ಎಂಬ ಸುದ್ದಿ ರಾಖಿಗೆ ಶಾಕ್ ನೀಡಿದೆ.

ಮೊನ್ನೆ ಇದ್ದಕ್ಕಿದ್ದಂತೆ ರಾಖಿಯ ಸ್ವಯಂವರಕ್ಕೆ ಕಾರ್ಯಕ್ರಮದ ನಿರ್ವಾಹಕ ರಾಮ್ ಕಪೂರ್ ಪತ್ನಿ ಗೌತಮಿ ಕಪೂರ್ ಕೂಡಾ ಎಂಟ್ರಿ ಕೊಟ್ಟಿದ್ದಾರೆ. ಎಂಟ್ರಿ ಕೊಟ್ಟ ಸರ್‌ಪ್ರೈಸ್‌ನೊಂದಿಗೆ ರಾಖಿಗೆ ಶಾಕ್ ಕೂಡಾ ನೀಡಿದ್ದಾರೆ. ರಾಖಿಯನ್ನು ಮದುವೆಯಾಗುವ ಸ್ಪರ್ಧಿಗಳಲ್ಲಿ ಒಬ್ಬನಿಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ ಎಂದು ಹೇಳಿದ್ದು ರಾಖಿಗೆ ಶಾಕ್ ಟ್ರೀಟ್‌ಮೆಂಟ್. ಈ ಶಾಕ್ ಟ್ರೀಟ್‌ಮೆಂಟಿನಿಂದಾಗಿ, ರಾಖಿಯ ಮದುವೆಯಾಗುವ ಆಸೆಯ ನೆಪದಲ್ಲಿ ಸುಲಭವಾಗಿ ದೊರೆಯುವ ಪ್ರಸಿದ್ಧಿಗಾಗಿ ಮುಂದೆ ಬಂದುದೋ ಎಂಬ ಸಂಶಯವೂ ದಟ್ಟವಾಗತೊಡಗಿದೆ. ಇದರಿಂದಾಗಿ ರಾಖಿಯ ಆತ್ಮವಿಶ್ವಾಸದ ಮುಖದ ಹಿಂದೆ ಜ್ವರದ ನಡುಕದ ಮುಖವಾಡವೂ ಇದೆಯೋ.. ಪ್ರಯೋಗವೇ ಪ್ರಯಾಸವಾಗುತ್ತೋ ಎಂಬ ಕುತೂಹಲಕಾರಿ ಅನುಮಾನಗಳು ಸುಳಿಯತೊಡಗಿದೆ.

ಏನೇ ಇರಲಿ, ರಾಖಿ ಮಾತ್ರ ತನ್ನ ಮಾತಿನಂತೆ ಇದ್ದದ್ದರಲ್ಲಿ ತನಗೆ ಸೂಟ್ ಆಗುವ ಗಂಡನ್ನು ಸೀರೆ ಅಂಗಡಿಯಲ್ಲಿ ಚೆಂದದ ಸೀರೆ ಹುಡಕಿದಂತೆ ತಲಾಶ್ ಮಾಡುತ್ತಿದ್ದಾಳೆ. ಆದರೆ, ಪ್ರಸಿದ್ಧಿಗಾಗಿ ನನ್ನನ್ನು ಏಣಿಯಾಗಿ ಆತ ಬಳಸಿಕೊಳ್ಳಬಾರದು ಎಂದು ಕಂಡೀಶನ್ ಹಾಕಿದ್ದ ರಾಖಿ ಕನಸು ನೆರವೇರುತ್ತಾ ಎಂಬುದೇ ಸದ್ಯ ಕುತೂಹಲದ ಕೇಂದ್ರ ಬಿಂದು.

ಒಟ್ಟಾರೆ ಇನ್ನು 10 ದಿನ ಕಾಯ್ದರೆ ರಾಖಿ ಮದುವೆಯಾಗುತ್ತಾಳೆ. ಎನ್‌ಡಿಟಿವಿ ಇಮ್ಯಾಜಿನ್ ಈಗಾಗಲೇ ಕಾರ್ಯಕ್ರಮವ್ನನು ಒಟ್ಟು ನಾಲ್ಕು ವಾರಗಳಿಗಿಂತ ಮುಂದೆ ತೆಗೆದುಕೊಂಡು ಹೋಗುವುದಿಲ್ಲ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಇನ್ನೊಂದು ವಾರದೊಳಗೆ ರಾಖಿ ಮದುವೆಯಾಗಲಿದ್ದಾಳೆ. ಸದ್ಯಕ್ಕೀಗ ರಾಖಿಯ 10 ಆಯ್ಕೆಗಳಲ್ಲಿ ಮೂವರು ರಾಖಿಯ ಮನಗೆದ್ದಿದ್ದಾರೆ. ಇವರಲ್ಲಿ ಮೂರು ಮಂದಿ (ಮನ್‌ಮೋಹನ್ ತಿವಾರಿ, ಎಲೀಶ್ ಪರುಂಜವಾಲಾ, ಅಶ್ವಿನ್ ಚೌಧರಿ) ನಿಜವಾಗಿಯೂ ರಾಖಿಯ ಮನಗೆದ್ದಿದ್ದಾರೆ ಎನ್ನಲಾಗಿದೆ. ನಿಜವಾದ ಪ್ರೀತಿಯನ್ನು ಪತ್ತೆ ಹಚ್ಚಲು ರಾಖಿ ಹಗಲಿರುಳು ಯೋಚಿಸುತ್ತಿದ್ದಾಳೆ. ಆಕೆಯ ಜತೆಗೆ ಹಲವರು ಕೂಡಾ. ಅಂತೂ ಕೊನೆಗೂ ರಾಖಿ ಯಾರಿಗೆ ಹಾರ ಹಾಕುತ್ತಾಳೋ...
Rakhi Sawant
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಖಿ ಸಾವಂತ್, ರಾಖಿ ಕಾ ಸ್ವಯಂವರ, ಎನ್ಡಿಟಿವಿ ಇಮ್ಯಾಜಿನ್, ಮದುವೆ