ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಬೆತ್ತಲೆ ಪ್ರಕರಣ: ಜಾನ್ ಅಬ್ರಹಾಂ ಮೇಲೆ ಕ್ರಿಮಿನಲ್ ಕೇಸು! (Nude | John Abraham | Bollywood | Sexy man)
ಸುದ್ದಿ/ಗಾಸಿಪ್
Feedback Print Bookmark and Share
 
John Abraham
IFM
ವೇದಿಕೆಯಲ್ಲಿ ನಟ ಅಕ್ಷಯ್ ಕುಮಾರ್ ಪ್ಯಾಂಟಿನ ಗುಂಡಿಯನ್ನು ಪತ್ನಿ ಟ್ನಿಂಕಲ್ ಖನ್ನಾ ಬಿಚ್ಚಿದ್ದನ್ನು ಅಶ್ಲೀಲದ ಪರಮಾವಧಿ ಎಂದು ಕೋರ್ಟ್ ಮೆಟ್ಟಿಲೇರಿದ ಕಥೆ ಇನ್ನೂ ಹಸಿಯಾಗಿರುವಾಗಲೇ ಬಾಲಿವುಡ್ ಸೆಕ್ಸೀ ನಟ ಜಾನ್ ಅಬ್ರಹಾಂ ಇದೀಗ ಇಂಥದ್ದೇ ಇನ್ನೊಂದು ವಿವಾದದಲ್ಲಿ ಸಿಲುಕಿದ್ದಾರೆ. ಪತ್ರಿಕೆಯೊಂದಕ್ಕೆ ಬೆತ್ತಲೆ ಪೋಸ್ ಕೊಟ್ಟ ಕಾರಣದಿಂದ ಈಗ ಜಾನ್ ಮೇಲೆ ಕ್ರಿಮಿನಲ್ ಕೇಸು ದಾಖಲಾಗಿದೆ.

ನವದೆಹಲಿ ಸ್ಥಳೀಯ ಕೋರ್ಟ್‌‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆಶಿಷ್ ಅಗರ್‌ವಾಲ್ ಅವರು ದೆಹಲಿಯ ಮೋತಿನಗರ ಪೋಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್‌ಗೆ ಜಾನ್ ಪ್ರಕರಣದ ಬಗ್ಗೆ ವಿಸ್ತೃತ ವರದಿಯನ್ನು ಎರಡು ವಾರದಲ್ಲಿ ನೀಡುವಂತೆ ಆದೇಶ ನೀಡಿದ್ದಾರೆ.

ಐಪಿಸಿ ಸೆಕ್ಷನ್ 292 ಹಾಗೂ 294ರಡಿ ಅಶ್ಲೀಲ ವಿಚಾರ/ವಸ್ತುಗಳನ್ನು ಹರಡಿದ ಆಪಾದನೆಯಲ್ಲಿ ಜಾನ್ ಮೇಲೆ ದೂರು ದಾಖಲಾಗಿದೆ. ಎನ್‌ಜಿಒ ಆಗಿರುವ ಸಿ.ಎಂ.ದುವಾ ಎಂಬವರು ಜಾನ್ ಅಬ್ರಹಾಂ ಹಾಗೂ ಪ್ರಕಟಿಸಿದ ಪತ್ರಿಕೆಯ ಸಂಪಾದಕರ ವಿರುದ್ಧ ದೂರು ನೀಡಿದ್ದರು.

ದೂರಿನಲ್ಲಿ ಅಶ್ಲೀಲ ಹಾಗೂ ಕಾಮಪ್ರಚೋದಕ ಚಿತ್ರಗಳನ್ನು ಪ್ರಕಟಿಸುವ ಮೂಲಕ ಓದುಗರನ್ನು ಮುಜುಗರಕ್ಕೆ ತಳ್ಳಲಾಗಿದೆ. ಅಷ್ಟೇ ಅಲ್ಲ ಇದು ಯುವ ಮನಸ್ಸುಗಳಿಗೆ ಘಾಸಿಗೊಳಿಸುತ್ತದೆ ಎಂದು ಅವರು ಜಾನ್ ವಿರುದ್ಧ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ತಾನು ಈ ಪತ್ರಿಕೆಯ ಚಿತ್ರಗಳು ವಿದ್ಯಾರ್ಥಿಗಳ ಸ್ಟಡಿ ಡೆಸ್ಕ್‌ನ ಮೇಲೆ ಬಿದ್ದುಕೊಂಡಿರುವುದನ್ನ ಕಣ್ಣಾರೆ ಕಂಡಿದ್ದೇನೆ. ಹಾಗಾಗಿ ಇಂತಹ ಚಿತ್ರಗಳ ಮೂಲಕ ಯುವ ಮನಸ್ಸುಗಳನ್ನು ಹಾಳು ಮಾಡಲಾಗುತ್ತಿದೆ ಎಂದೂ ಅವರು ದೂರಿನಲ್ಲಿ ವಿವರಣೆ ನೀಡಿದ್ದಾರೆ.

ಜೂ.11ರಂದು ಪ್ರಕಟವಾದ ದೆಹಲಿ ಮೂಲದ ಪತ್ರಿಕೆಯೊಂದರ ಪುರವಣಿಯಲ್ಲಿ ಜಾನ್ ಅವರ ಬೆತ್ತಲೆ ಪೋಸ್ ಕೊಟ್ಟ ಚಿತ್ರ ಪ್ರಕಟವಾಗಿತ್ತು. ದೂರು ನೀಡಿದ್ದರೂ, ಪೊಲೀಸರು ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲವಾದ್ದರಿಂದ ತಾನು ನೇರವಾಗಿ ಕೋರ್ಟ್ ಮೆಟ್ಟಿಲೇರಿರುವುದಾಗಿ ದುವಾ ಹೇಳಿದ್ದಾರೆ. ಆದರೆ ಈ ಕುರಿತು ಜಾನ್ ಅಬ್ರಹಾಂ ಏನೂ ಪ್ರತಿಕ್ರಿಯಿಸಿಲ್ಲ.

ನಿಜವಾಗಿಯೂ ಇಂಥ ಫೋಟೋಗಳು ಪತ್ರಿಕೆಗಳಲ್ಲಿ ಪ್ರಕಟವಾಗುವುದರಿಂದ ಯುವ ಮನಸ್ಸುಗಳ ಮೇಲೆ ಪರಿಣಾಮ ಬೀರುತ್ತಾ..? ನೀವೇನಂತೀರಾ?
John Abraham
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬೆತ್ತಲೆ ಚಿತ್ರ, ಜಾನ್ ಅಬ್ರಹಾಂ, ಬಾಲಿವುಡ್