ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಜಸ್ಟ್ ಮಾತಾದ' ಜಬ್ ವಿ ಮೆಟ್ (Sudeep | JAB VE MET | kannada cinema | Gandhinagar,)
ಸುದ್ದಿ/ಗಾಸಿಪ್
Feedback Print Bookmark and Share
 
NRB
ಇತ್ತೀಚೆಗೆ ಹಿಂದಿಯ ಹಿಟ್ ಚಿತ್ರ 'ಜಬ್ ವಿ ಮೆಟ್' ಕನ್ನಡದಲ್ಲಿ ಬರಲಿದೆ ಎಂಬುದು ಹಳೆ ಸುದ್ದಿ. ಆದರೆ ಶಂಕರ ಲಿಂಗೇಗೌಡರು ನಿರ್ಮಿಸಲಿರುವ ಜಸ್ಟ್ ಮಾತ್ ಮಾತಲ್ಲಿ ಚಿತ್ರ ಜಬ್ ವಿ ಮೆಟ್ ಚಿತ್ರದ ರಿಮೇಕ್ ಎಂಬ ಗಾಳಿ ಸುದ್ದಿ ಗಾಂಧಿ ನಗರದಲ್ಲಿ ಹರಡಿದೆ.

ಆದರೆ ನಿರ್ಮಾಪಕರು ಇದನ್ನು ಅಲ್ಲಗೆಳೆದಿದ್ದಾರೆ. ಗಾಂಧಿನಗರದಲ್ಲಿ ಏನೇ ಸುದ್ದಿಯಿರಬಹುದು. ಆದರೆ ಇದು ಖಂಡಿತಾ ರಿಮೇಕ್ ಅಲ್ಲ. ಶೇ.50ರಷ್ಟು ಚಿತ್ರೀಕರಣವನ್ನು ಲಂಡನ್‌ನಲ್ಲಿ ಚಿತ್ರಿಸುತ್ತಿದ್ದೇವೆ. ನಮ್ಮ ಚಿತ್ರಕ್ಕೂ ಜಬ್ ವಿ ಮೆಟ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಲಿಂಗೇಗೌಡರು.

NRB
ಸುದೀಪ್ ಮತ್ತು ರಮ್ಯ ಜೋಡಿಯ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಮುಂದಿನ ಚಿತ್ರೀಕರಣಕ್ಕೆ ಚಿತ್ರತಂಡ ಸಕಲೇಶಪುರಕ್ಕೆ ಪ್ರಯಾಣ ಬೆಳೆಸಲಿದೆಯಂತೆ. ರೈಲಿನಲ್ಲಿ ನಡೆಯುವ ಸನ್ನಿವೇಶಗಳ ಚಿತ್ರೀಕರಣ ನಡೆಸಬೇಕಿದ್ದ ಕಾರಣ ಇದನ್ನು ಜಬ್ ವಿ ಮೆಟ್‌‌ಗೆ ಹೋಲಿಸಬೇಕಾಗಿಲ್ಲ ಎನ್ನುತ್ತಾರೆ ನಿರ್ಮಾಪಕರು. ಒಟ್ಟಿನಲ್ಲಿ ಚಿತ್ರದ ಬಗೆಗಿನ ಈ ಗುಲ್ಲು ನಿಜವೋ ಸುಳ್ಳೊ ಎಂಬುದನ್ನು ಕಾದು ನೋಡಬೇಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಬ್ ವಿ ಮೆಟ್, ಕನ್ನಡ ಸಿನಿಮಾ, ಗಾಂಧಿನಗರ, ಸುದೀಪ್