ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗಣೇಶ್‌ಗೆ ಜೊತೆಯಾದ ನಾಯಕಿಯರು (Kannada film | Ganesh | Anjana sukhani | Golden star)
ಸುದ್ದಿ/ಗಾಸಿಪ್
Feedback Print Bookmark and Share
 
IFM
ಗಣೇಶ್ ನಿರ್ಮಿಸಲು ಹೊರಟಿರುವ ಮಳೆಯಲಿ ಜೊತೆಯಲಿ ಚಿತ್ರಕ್ಕೆ ಕೊನೆಗೂ ನಾಯಕಿ ಸಿಕ್ಕಿದ್ದಾಳೆ. ಚಿತ್ರಕ್ಕೆ ಇಬ್ಬರು ನಾಯಕಿಯರು ಆಯ್ಕೆಯಾಗಿದ್ದಾರೆ. ಒಬ್ಬಾಕೆ ಅಂಜನಾ ಸುಖಾನಿ, ಇನ್ನೊಬ್ಬಳು ಯುವಿಕಾ ಚೌಧರಿ.

ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರಕ್ಕೆ ಕಳೆದ ಕೆಲವು ದಿನಗಳಿಂದ ನಾಯಕಿಯ ಹುಡುಕಾಟ ನಡೆದಿತ್ತು. ಕೊನೆಗೂ ಇವರಿಬ್ಬರ ಆಯ್ಕೆ ಮಾಡಲಾಗಿದೆ. ಇಬ್ಬರೂ ಉತ್ತರ ಭಾರತದವರು ಮತ್ತು ಮಾಡಲಿಂಗ್‌ನಿಂದ ಚಿತ್ರರಂಗಕ್ಕೆ ವಲಸೆ ಬಂದಿದ್ದಾರೆ. ರಾಜಸ್ಥಾನದ ಅಂಜನಾ ಸುಖಾನಿ 2002ರಲ್ಲಿ ಹಿಂದಿಯ ನ ತುಮ್ ಜಾನೋ ನ ಹಮ್ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಸಲಾಂ ಎ ಇಶ್ಕ್, ಗೋಲ್‌ಮಾಲ್ ರಿಟರ್ನ್ಸ್, ಜೈ ವೀರು ಸೇರಿದಂತೆ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿದ ಅನುಭವವಿದೆ.

ಯುವಿಕಾ ಚೌದರಿ ಕೂಡ ಹಿಂದಿ ಚಿತ್ರರಂಗದಿಂದ ಬಂದಿದ್ದಾರೆ. ಓಂ ಶಾಂತಿ ಓಂನಲ್ಲಿ ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದ ಈಕೆ ಸಮ್ಮರ್ 2007ರ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗ ಇವರಿಬ್ಬರನ್ನು ಗಣೇಶ್ ತಮ್ಮ ನಿರ್ಮಾಣದ ನೂತನ ಚಿತ್ರಕ್ಕೆ ಕರೆಸಿಕೊಂಡಿದ್ದಾರೆ. ಅಂದ ಹಾಗೆ ಚಿತ್ರೀಕರಣ ಗಣೇಶ್ ಹುಟ್ಟುಹಬ್ಬವಾದ ಜುಲೈ 2ರಂದು ಆರಂಭವಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗಣೇಶ್, ಗೋಲ್ಡನ್ ಸ್ಟಾರ್, ಅಂಜನಾ ಸುಖಾನಿ, ಯುವಿಕಾ ಚೌಧರಿ, ಕನ್ನಡ ಸಿನಿಮಾ