ಗಂಡ ಹೆಂಡತಿ ಚಿತ್ರದಲ್ಲಿ ಹಾಟ್ ಕೇಕ್ ಹುಡುಗಿಯಾಗಿ ಅಭಿನಯಿಸಿದ್ದ ಸಂಜನಾಗೆ ಈಗ ಏನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಶ್ರೀ ನಿರ್ದೇಶನದ ಈ ಸಂಜೆ ಚಿತ್ರದಲ್ಲಿ ನಟಿಸಿ ಖಾಸಗಿ ವಾಹಿನಿಯೊಂದರಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿರುವುದು ಹಳೆ ಸುದ್ದಿ.
ಈಗ ಸಂಜನಾ ಸ್ತೋತ್ರ ಹಿಡಿದುಕೊಂಡು ಕೂತಿದ್ದಾರೆ. ಆಶ್ಚರ್ಯವಾಗಬೇಡಿ. ಸ್ತೋತ್ರ ಚಿತ್ರಕ್ಕೆ ನಾಯಕಿಯಾಗಿ ಸಂಜನಾ ಆಯ್ಕೆಯಾಗಿದ್ದಾರೆ. ಇದನ್ನು ಬ್ಯಾಲಕ್ ಚಿತ್ರದ ಬಾಸ್ ಮಹೇಂದರ್ ನಿರ್ದೇಶನ ಮಾಡುತ್ತಿದ್ದಾರೆ. ಅಂದ ಹಾಗೆ ಚಿತ್ರದಲ್ಲಿ ಎರಡು ನಾಯಕರ ಜೊತೆ ಸಂಜನಾ ಹೆಜ್ಜೆ ಹಾಕಲಿದ್ದಾರೆ.
ಅದೆಲ್ಲ ಹಾಗಿರಲಿ, ಸಂಜನಾಗೆ ಕನ್ನಡದಲ್ಲಿ ಅವಕಾಶ ಕಡಿಮೆಯೇ. ಅದಕ್ಕೆ ತಮಿಳಿಗೆ ಹೋಗಿದ್ದೇನೆ. ಅಲ್ಲಿ ಮೂರು ಸಿನಿಮಾ ಮಾಡ್ತಾ ಇದ್ದೀನಿ ಎಂದು ಹುಬ್ಬು ಹಾರಿಸುತ್ತಾರೆ ಸಂಜನಾ. ಆದರೆ ಈಗ ಸ್ತೋತ್ರವನ್ನು ಕೈಯಲ್ಲಿ ಹಿಡಿದುಕೊಂಡು ಗಾಂಧಿ ನಗರಕ್ಕೆ ಬಂದಿದ್ದಾರೆ ಇದಕ್ಕೆ ಏನನ್ನಬೇಕು?