ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಮೇಶ್‌ರ 3 ಗುಟ್ಟು, ಒಂದು ಸುಳ್ಳು, ಒಂದು ಸತ್ಯ! (Ramesh Aravind | Dinesh Babu | Comedy kannada film)
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ರಮೇಶ್ ಅರವಿಂದ್ ಮೂರು ಗುಟ್ಟು ಹೇಳಲು ಸಜ್ಜಾಗಿದ್ದಾರೆ. ಆದರೆ ಜಾಗ್ರತೆ. ಇದರಲ್ಲಿ ಒಂದು ಸುಳ್ಳಾದರೆ, ಇನ್ನೊಂದು ಸತ್ಯ. ಹಾಗಾದರೆ ಮತ್ತೊಂದು... ಅದು ಸಸ್ಪೆನ್ಸ್!

ದಿನೇಶ್ ಬಾಬು ನಿರ್ದೇಶನದ ರಮೇಶ್ ಅರವಿಂದ್ ಅಭಿನಯದ ಚಿತ್ರಕ್ಕೆ 'ಮೂರು ಗುಟ್ಟು ಒಂದು ಸುಳ್ಳು ಒಂದು ಸತ್ಯ' ಹೆಸರಿಡಲಾಗಿದೆ. ಚಿತ್ರಕ್ಕೆ ಚಾಲನೆ ಕೂಡ ದೊರೆತಿದೆ. ಇದೊಂದು ರಿಮೇಕ್ ಚಿತ್ರವೆಂದು ಗಾಂಧಿನಗರದಲ್ಲಿ ಕೇಳಿಬರುತ್ತಿರುವ ಸುದ್ದಿಗೆ ರಮೇಶ್, ಇದು ಪಕ್ಕಾ ಸ್ವಮೇಕ್ ಚಿತ್ರ. ಯಾವುದೇ ಚಿತ್ರದ ರಿಮೇಕ್ ಅಲ್ಲ ಎಂದು ಹೇಳಿದ್ದಾರೆ.

ಚಿತ್ರದಲ್ಲಿ ರಮೇಶ್ ಸ್ನೇಹಿತನಾಗಿ ಕೋಮಲ್ ನಟಿಸುತ್ತಿದ್ದಾರೆ. ಕೋಮಲ್ ರಮೇಶ್ ಜೋಡಿ ಸೇರಿದ ಮೇಲೆ ಕೇಳಬೇಕಾ? ಇದೊಂದು ಕಾಮಿಡಿ ಒರಿಯಂಟೆಡ್ ಸಿನಿಮಾ ಅಂತಾನೆ ಹೇಳಬಹುದು. ಪ್ರಶಾಂತ್ ಮತ್ತು ರಾಜೀವ್ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ ಕಿರುತೆರೆಯ ಕಲಾವಿದರಾದ ನಂದಿನಿ, ಶ್ರುತಿ ನಾಯ್ಡು, ಸುಧಾ ಬೆಳವಾಡಿ, ಶ್ರೀನಿವಾಸಮೂರ್ತಿ, ನ್ಯಾನ್ಸಿ ಹಾಗೂ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಚಿತ್ರ 20 ದಿನಗಳಲ್ಲೇ ಪೂರ್ಣಗೊಳ್ಳಲಿದೆಯಂತೆ.

ರಮೇಶ್ ಅರವಿಂದ್ ಅಭಿನಯದ ಇನ್ನೊಂದು ಚಿತ್ರಕ್ಕೂ ಚಾಲನೆ ದೊರೆಯಲಿದೆ. ಇದು ಮಲಯಾಳಂನ ಬಾರಿ ಯಶಸ್ಸು ಕಂಡ ಚಂದ್ರಮುಖಿ ಚಿತ್ರದ ರಿಮೇಕ್. ಕನ್ನಡದಲ್ಲೂ ಚಂದ್ರಮುಖಿ ಅಂತಾನೆ ಚಿತ್ರದ ಹೆಸರಿಡಲಾಗಿದೆ. ಚಿತ್ರದ ನಿರ್ದೇಶನವನ್ನು ರಾಮಮೂರ್ತಿ ಮಾಡುತ್ತಿದ್ದಾರೆ. ಈ ಹಿಂದೆ ಮಚ್ಚಾ ಚಿತ್ರದಲ್ಲಿ ಅಭಿನಯಿಸಿದ ಸರಿತಾ ಜೈನ್ ರಮೇಶ್ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಜೈಜಗದೀಶ್, ಶಿವಧ್ವಜ್, ಚಿದಾನಂದ, ಅರವಿಂದ್ ತಾರಾಬಳಗವಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಮೇಶ್ ಅರವಿಂದ್, ಮೂರು ಗುಟ್ಟು, ಒಂದು ಸುಳ್ಳು, ಒಂದು ಸತ್ಯ, ದಿನೇಶ್ ಬಾಬು