ಪಯಣ ಚಿತ್ರದ ನಂತರ ರಮಣಿತು ಚೌಧರಿ ಎಲ್ಲಿ ಮಾಯವಾಗಿದ್ದರು ಅಂತ ಗೊತ್ತಿಲ್ಲ. ದಿನೇಶ್ ಬಾಬು ನಿರ್ದೇಶನದ ಮಿಸ್ಟರ್ ಪೇಂಟರ್ ಚಿತ್ರದ ಮೂಲಕ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಇವರು ಈಗ ಧನುಷ್ ಎಂಬ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಮಣಿತು ಕೈಯಲ್ಲೀಗ ಎರಡು ಕನ್ನಡ ಚಿತ್ರಗಳಿವೆ.
ಧನುಷ್ ಚಿತ್ರದಲ್ಲಿ ರಮಣಿತು ಚೌಧರಿ ಜೊತೆ ಪ್ರಶಾಂತ್ ನಾಯಕನಾಗಿ ನಟಿಸುತ್ತಿದ್ದಾರೆ. ಜಯಂತ‌್‌ರವರು ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಬಿ. ಸತ್ಯನಾರಾಯಣ ಚಿತ್ರದ ನಿರ್ಮಾಪಕರು. ಇದೊಂದು ಆಕ್ಷನ್ ಚಿತ್ರ ಅಂತೆ. ಚಿತ್ರದಲ್ಲಿ ಮೋಹನ್, ಮುನಿ, ಕಾಶಿ, ಸತ್ಯಜಿತ್ ಮತ್ತಿತರರು ಅಭಿನಯಿಸುತ್ತಿದ್ದಾರೆ.
ಚಿತ್ರದಲ್ಲಿ ಗೌರಿ ವೆಂಕಟೇಶ್ ಕ್ಯಾಮೆರಾ ಕೆಲಸ ಮಾಡಲಿದ್ದಾರೆ. ಧನುಷ್ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿವೆ. ಚಿತ್ರದ ಚಿತ್ರೀಕರಣ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ. ಇದೊಂದು ಸ್ವಮೇಕ್ ಚಿತ್ರ ಅಂತಾರೆ ಚಿತ್ರದ ನಿರ್ಮಾಪಕರಾದ ಸತ್ಯನಾರಾಯಣ.