ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಜೊತೆಗಾರನಿಗೆ ಮತ್ತೆ ತಲೆದೋರಿದ ವಿಘ್ನ (Jothegara | Prem | Ramya | Kannada film)
ಸುದ್ದಿ/ಗಾಸಿಪ್
Feedback Print Bookmark and Share
 
MOKSHENDRA
ಜೊತೆಗಾರ ಚಿತ್ರಕ್ಕೆ ಅದೇನು ಗ್ರಹಚಾರ ವಕ್ಕರಿಸಿದೆಯೋ ಗೊತ್ತಿಲ್ಲ. ಜೊತೆಗಾರ ಬಿಡುಗಡೆಯಾಗಿದ್ದರೆ ಈಗಾಗಲೇ ಒಂದು ತಿಂಗಳು ಕಳೆಯಬೇಕಿತ್ತು. ಇದು ಹಳೆ ವಿಷಯ ಬಿಡಿ. ಇದೆ ತಿಂಗಳ 5 ರಂದು ಬಿಡುಗಡೆಯಾಗಬೇಕಿದ್ದ ಜೊತೆಗಾರ ಮತ್ತೆ ಮುಂದೆ ಹೋಗಿದೆ. ಇದಕ್ಕೆ ಏನು ಕಾರಣ ಅನ್ನೋದು ಮಾತ್ರ ತಿಳಿಯುತ್ತಿಲ್ಲ.

ಜೊತೆಗಾರ ಚಿತ್ರದ ನಿರ್ಮಾಪಕರಾದ ಅಶ್ವಿನಿ ರಾಮ್ ಪ್ರಸಾದ್ ಪತ್ರಿಕಾಗೋಷ್ಠಿ ನಡೆಸಿ ಆದಷ್ಟು ಬೇಗ ಚಿತ್ರ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ. ತಮ್ಮ ತಮ್ಮಲಿನ ಭಿನಾಭಿಪ್ರಾಯವೇ ಬಿಡುಗಡೆಗೆ ತಡವಾಗುತ್ತಿದೆಯಾ ಎಂಬ ಸಂಶಯ ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ಮೂಡುವುದು ಸಹಜ.

ಬಾರಿ ಕುತೂಹಲ ಮೂಡಿಸಿರುವ ಜೊತೆಗಾರ ಚಿತ್ರ ನೋಡಲು ಪ್ರೇಕ್ಷಕ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಚಿತ್ರ ಬಿಡುಗಡೆ ಮುಂದಕ್ಕೆ ಹೋದರೂ ಯಾರೂ ತುಟಿಪಿಟಿಕ್ಕೆಂದಿಲ್ಲ. ಕಾರಣವೂ ಬಹಿರಂಗಗೊಂಡಿಲ್ಲ. ಮುಂದೆ ಏನೇನು ಕಾದಿದೆಯೋ...
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೊತೆಗಾರ, ಪ್ರೇಮ್, ರಮ್ಯ, ಕನ್ನಡ ಸಿನಿಮಾ