ಸುದೀಪ್ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಏಕೆ ಅಂತ್ತೀರಾ? ತಾವು ನಿರ್ದೇಶನ ಮಾಡುತ್ತಿರುವ ಸರ್ಕಾರ್ ಎಂಬ ಹಿಂದಿ ಚಿತ್ರದ ರಿಮೇಕ್ ಆದ ಸರ್ಕಾರ ಚಿತ್ರಕ್ಕೆ ಅಮಿತಾಬ್ ನಿರ್ವಹಿಸಿದ್ದ ಪಾತ್ರ ಮಾಡಲು ವಿಷ್ಣು ಕಾಲ್‌ಶೀಟ್ ಕೊಟ್ಟಿದ್ದಾರಂತೆ.
ಈ ಹಿಂದೆ ಅಮಿತಾಬ್ ಪಾತ್ರವನ್ನು ತಾವು ಮಾಡಬೇಕೆಂದು ಸುದೀಪ್ ಕೇಳಿಕೊಂಡಾಗ ಭಾರತಿ ವಿಷ್ಣುವರ್ಧನ್ ಖಡಾ ಖಂಡಿತವಾಗಿ ಅವರು ಆ ಪಾತ್ರ ಮಾಡುವುದಿಲ್ಲ. ದಯವಿಟ್ಟು ಕೇಳಬೇಡಿ ಎಂದು ಹೇಳಿದ್ದರು. ಆದರೆ ಈಗ ವಿಷ್ಣು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈಗ ಎಲ್ಲಾ ಸುದೀಪ್ ಅಂದುಕೊಂಡಂತೆ ಆಗಿದೆ.
ಸದ್ಯದಲ್ಲೇ ಸರ್ಕಾರ ಚಿತ್ರದ ಚಿತ್ರೀಕರಣ ಆರಂಭಿಸುವುದಾಗಿ ಸುದೀಪ್ ಹೇಳಿದ್ದಾರೆ. ಇದೇ ವೇಳೆ ಸುದೀಪ್ ನಟಿಸಿರುವ ರಾಮ್‌ಗೋಪಾಲ್ ವರ್ಮಾರ ರಣ್ ಹಿಂದಿ ಚಿತ್ರವೂ ಅಕ್ಟೋಬರ್ ತಿಂಗಳಲ್ಲಿ ಹೊರಬರಲು ಕಾದು ಕುಳಿತಿದೆ. ಸುದೀಪ್ ಚಿತ್ರಗಳ ಸುರಿಮಳೆಗೆ ಪ್ರೇಕ್ಷಕನೂ ಕಾದು ಕುಳಿತಿದ್ದಾನೆ.