ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
 
ಜಗತ್ತಿನ ಅತಿದೊಡ್ಡ ಶ್ರೀಮಂತ ಅಂಬಾನಿ
ಈಗ ಭಾರತ ಪ್ರಕಾಶಿಸುತ್ತಿದೆ... ನಾವೂ ಶ್ರೀಮಂತರು ಎಂಬುದನ್ನು ಭಾರತೀಯ ಉದ್ಯಮಿಗಳು ಜಗತ್ತಿಗೆ ತೋರಿಸುತ್ತಿದ್ದಾರೆ. ಯಾಕೆಂದರೆ, ಜಗತ್ತಿನ ಅತಿ ದೊಡ್ಡ ಶ್ರೀಮಂತ ವ್ಯಕ್ತಿ ಈಗ ಭಾರತೀಯನಾಗಿದ್ದಾನೆ. ಅವರು ಬೇರೆ ಯಾರು ಅಲ್ಲ, ಅವರೇ ರಿಲಯನ್ಸ್ ಕಂಪೆನಿಯ ಮುಖೇಶ್ ಅಂಬಾನಿ.

ಇಲ್ಲಿವರೆಗೆ ಜಗತ್ತಿನ ಅತಿದೊಡ್ಡ ಶ್ರೀಮಂತ ಸ್ಥಾನದಲ್ಲಿ ಕುಳಿತಿದ್ದ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ಬಿಲೆನಿಯರ್ ಮುಖೇಶ್ ಅಂಬಾನಿ ಆ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ. ಬಿಲ್ ಗೇಟ್ಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಎರಡನೇ ಸ್ಥಾನಕ್ಕೆ ಮ್ಯಾಕ್ಸಿಕನ್ ವ್ಯಾಪಾರಿ ದೈತ್ಯ ಕಾರ್ಲಸ್ ಸ್ಲಿಮ್ ಹಲು ಮತ್ತು ಇನ್ವೆಸ್ಟ್‌ಮೆಂಟ್ ಗುರು ವಾರೆನ್ ಬಫೆಟ್ ಜಿಗಿದಿದ್ದಾರೆ.

ಮುಖೇಶ್ ಜಗತ್ತಿನ ಅತಿ ಹೆಚ್ಚು ಶ್ರೀಮಂತ ವ್ಯಕ್ತಿಯಾಗಲು ಷೇರು ಪೇಟೆಯ ಕಾರಣವಾಗಿದೆ. ಮುಖೇಶ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಜ್ ಕಂಪೆನಿಯ ಷೇರುಗಳು ಸೋಮವಾರ ಗೂಳಿಯ ರೀತಿಯಲ್ಲಿ ಮುನ್ನುಗ್ಗಿದ್ದರಿಂದ ಮುಖೇಶ್ ನಂಬರ್ 1 ಸ್ಥಾನ ಪಡೆದುಕೊಂಡಿದ್ದಾರೆ.

ಭಾರತದ ಅತ್ಯಂತ ನಂಬಿಗಸ್ಥ ಕಂಪೆನಿಗಳಾಗಿರುವ ಮುಖೇಶ್ ನೇತೃತ್ವದ ರಿಲಿಯನ್ಸ್ ಇಂಡಸ್ಟ್ರೀಜ್, ರಿಲಯನ್ಸ್ ಪೆಟ್ರೋಲಿಯಮ್, ರಿಲಯನ್ಸ್ ಇಂಡಸ್ಟ್ರೀಯಲ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿಗಳ ಷೇರುಗಳು ಭಾರೀ ಜಿಗಿತವನ್ನು ಕಂಡವು. ಹೀಗಾಗಿ ಮುಖೇಶ್ ಅಂಬಾನಿ ಆಸ್ತಿ ಮೊತ್ತ 63.2 ಬಿಲಿಯನ್ ಡಾಲರ್‌ಗೇರಿತು.(2,49,108 ಕೋಟಿ ರೂಪಾಯಿ)

ರಿಲಯನ್ಸ್ ಇಂಡಿಸ್ಟ್ರೀಜ್ 2,10,000 ಕೋಟಿ(ಶೇ 50.98 ಷೇರು), ರಿಲಯನ್ಸ್ ಇಂಡಸ್ಟ್ರೀಜ್ ಪೆಟ್ರೋಲಿಯಂ ಲಿ. 37,500 ಕೋಟಿ(ಶೇ 37. 5 ಷೇರು), ರಿಲಯನ್ಸ್ ಇಂಡಿಸ್ಟ್ರೀಯಲ್ ಇನ್ಫ್ರಾಸ್ಟ್ರಕ್ಚರ್ ಲಿ 2,100 ಕೋಟಿ (ಶೇ 46.23 ಷೇರು) ಆಸ್ತಿಯನ್ನು ಮುಖೇಶ್ ಅಂಬಾನಿ ಹೊಂದಿದ್ದಾರೆ. ಸೋಮವಾರ ದಾಖಲೆಯ ಸೂಚ್ಯಂಕ ಏರಿಕೆಯಿಂದಾಗಿ ಜಗತ್ತಿನ ಅತಿದೊಡ್ಡ ಶ್ರೀಮಂತ ವ್ಯಕ್ತಿಯೆಂಬ ಕೀರ್ತಿಗೆ ಪಾತ್ರರಾಗಲು ಸಾಧ್ಯವಾಯಿತು.

ಮತ್ತಷ್ಟು
ಖನಿಜ ಸಂಪತ್ತಿನತ್ತ ಎಫ್‌ಡಿಐನವರ ಚಿತ್ತ..!
ನೋಂದಣಿರಹಿತ ಸಂಸ್ಥೆಗಳಿಂದ ಹಣದ ಒಳಹರಿವು: ಚಿದಂಬರಂ
ಆರ್ಥಿಕ ಸಹಕಾರ: ಭಾರತ, ಒಮನ್ ಚರ್ಚೆ
ಮೂಲಸೌಕರ್ಯ ಯೋಜನೆಗಳ ಶೀಘ್ರ ಜಾರಿ ಅಗತ್ಯ-ಪಿಎಂ
ದೀಪಾವಳಿ: ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ
ಜಾಗ್ವಾರ್ ಕಂಪೆನಿ ವಶಕ್ಕೆ ಟಾಟಾ ಸಿದ್ದತೆ