|
ಹದಿನೆಂಟು ಸಾವಿರದ ಗಡಿ ದಾಟಿದ ಸೂಚ್ಯಂಕ
|
|
ಮುಂಬೈ , ಮಂಗಳವಾರ, 9 ಅಕ್ಟೋಬರ್ 2007( 15:58 IST )
|
|
|
|
|
|
|
|
ಮಂಗಳವಾರದ ಪ್ರಾರಂಭಿಕ ವಹಿವಾಟಿನಲ್ಲಿ ರಾಜಕೀಯ ಅಸ್ಥಿರತೆಯ ಕಾರಣ ಕೆಲಕಾಲ ಮುಗ್ಗರಿಸಿದ್ದ ಮುಂಬೈ ಶೇರು ವ್ಯವಹಾರ ನಂತರದ ವಹಿವಾಟಿನಲ್ಲಿ ಭಾರಿ ಚೇತರಿಕೆಯೊಂದಿಗೆ 18 ಸಾವಿರದ ಗಡಿಯನ್ನು ದಾಟಿತು.
ಒಟ್ಟು 370 ಏರಿಕೆಗೆ ಭಾರಿ ಪ್ರಮಾಣದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಅಸಕ್ತಿ ಕಾರಣ ಎನ್ನಲಾಗಿದೆ. ಮಂಗಳವಾರದಂದು ಶೇರು ಸೂಚ್ಯಂಕ ಮೊದಲ ಬಾರಿಗೆ 18 ಸಾವಿರದ ಗಡಿಯನ್ನು ತಲುಪಿ ಕೆಳಗೆ ಇಳಿಯಿತು.
ಕಳೆದ 9 ಶೇರು ವಹಿವಾಟಿನ ಅವಧಿಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಶೇರು ಖರೀದಿಯ ಕಾರಣ ಅಂದಾಜು ಸಾವಿರ ಅಂಶಗಳಷ್ಟು ಏರಿಕೆ ಸಾಧಿಸಿದೆ. ರಾಷ್ಟ್ರೀಯ ಶೇರು ಸೂಚ್ಯಂಕ ಕೂಡ ಪ್ರತಿಶತ 2.5 ರಷ್ಟು ಏರಿಕೆ ಕಂಡು ಒಟ್ಟು 115 ಅಂಕಗಳ ಪ್ರಗತಿ ಸಾಧಿಸಿ, ಸಂವೇದಿ ಸೂಚ್ಯಂಕವು 5200 ಅಂಶಗಳಿಗೆ ಬಂದು ತಲುಪಿದೆ.
ದಿನದ ಪ್ರಾರಂಭದಲ್ಲಿ 17,287.19 ಅಂಶಗಳಿಗೆ ಕುಸಿತ ಕಂಡಿತು, ಪ್ರಾರಂಭಿಕ ಹಾನಿಯಿಂದ ನಂತರ ಚೇತರಿಸಿಕೊಂಡ ಬಿಎಸ್ಇ-30, ಸಂವೇದಿ ಸೂಚ್ಯಂಕವು ಅಪರಾಹ್ನದ ವಹಿವಾಟಿನಲ್ಲಿ 17,861 ಕ್ಕೆ ಬಂದು ತಲುಪಿತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಬಂಡವಾಳವನ್ನು ಭಾರತೀಯ ಮಾರುಕಟ್ಟೆಯಲ್ಲಿ ತೋಡಗಿಸಿದ್ದು, ಅಂದಾಜು ಮಾಹಿತಿಯ ಪ್ರಕಾರ 1,459.51 ಕೋಟಿ ರೂಗಳನ್ನು ಹೂಡಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತಕ್ಕೆ ಒಟ್ಟು 14. 5 ಶತಕೋಟಿ ಡಾಲರ್ ಬಂಡವಾಳ ಹರಿದು ಬಂದಿದ್ದು, ಅದರಲ್ಲಿ ಸೆಪ್ಟಂಬರ್ 19 ರಿಂದಿಚೆ 5 ಶತಕೋಟಿ ಡಾಲರ್ ಭಾರತೀಯ ಬಂಡವಾಳ ಮಾರುಕಟ್ಟೆಯನ್ನು ಪ್ರವೇಶಿಸಿದೆ.
|
|
|
|
|
|
|
|