ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಸಂಸದರ ಕ್ಷಮೆ ಕೇಳಿದ ರಾಯಭಾರಿ
ಅಣು ಒಪ್ಪಂದಕ್ಕೆ ಸಂಬಂಧಪಟ್ಟಂತೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಾನು ಉಪಯೋಗಿಸಿದ ವಾಕ್ಯ, ಮಾಧ್ಯಮ ಮಿತ್ರರಿಗೆ ಅನ್ವಯಿಸುತ್ತದೆ ವಿನಃ ಭಾರತೀಯ ಸಂಸದರಿಗಲ್ಲ ಎಂದು ಭಾರತೀಯ ರಾಯಭಾರಿ ರೋನ್ ಸೇನ್ ಹೇಳಿಕೆ ನೀಡಿದ್ದು, ಭಾರತೀಯ ಸಂಸದರ ಮನಸ್ಸಿಗೆ ಬೇಸರವಾಗಿದ್ದಲ್ಲಿ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.

ಮಾಧ್ಯಮಗಳು ಅಣು ಒಪ್ಪಂದಕ್ಕೆ ಸಂಬಂಧ ಪಟ್ಟಂತೆ ತಲೆ ಇಲ್ಲದೇ ಜನಪ್ರತಿನಿಧಿಗಳ ಮತ್ತು ಉನ್ನತ ಅಧಿಕಾರವರ್ಗದ ಹೇಳಿಕೆಗಳತ್ತ ತಿರುಗುತ್ತಿದ್ದು ಅದೇ ಮಾತನ್ನೇ ಸಂದರ್ಶನದಲ್ಲಿ ಹೇಳಿದ್ದೆ. ಈ ಹೇಳಿಕೆಯಲ್ಲಿ ಸಂಸದರ ಅಭಿಪ್ರಾಯ ಮತ್ತು ನಿಲುವುಗಳಿಗೆ ಸಂಬಂಧಿಸಿದ್ದಲ್ಲ ಎಂದು ರೋನ್ ಸೇನ್ ನೀಡಿದ ಸ್ಪಷ್ಟೀಕರಣವನ್ನು ಲೋಕಸಭೆಯಲ್ಲಿ ಇಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಪ್ರಣಬ್ ಮುಖರ್ಜಿ ಓದಿದರು.

ಅಮೆರಿಕದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ರಾಯಭಾರಿ ರೋನ್ ಸೇನ್ ಅವರು, ಅಲ್ಲಿನ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಭಾರತ- ಅಮೆರಿಕದ ನಡುವಿನ ನಾಗರಿಕ ಅಣು ಒಪ್ಪಂದದ ವಿಚಾರದಲ್ಲಿ ಕೆಲವರು ತಲೆ ಇಲ್ಲದೆ ಸುಮ್ಮನೆ ಬಿಕ್ಕಟ್ಟು ಹುಟ್ಟು ಹಾಕುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಪ್ರತಿಕ್ರಿಯೆ ನೀಡಿದ್ದರು.

ರೋನ್ ಸೇನ್ ಹೇಳಿಕೆಗೆ ಭಾರತೀಯ ಸಂಸತ್ತಿನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಎಡಪಕ್ಷಗಳು, ಭಾರತವನ್ನು ಪ್ರತಿನಿಧಿಸಬೇಕಾದ ವ್ಯಕ್ತಿ, ಜಾರ್ಜ್ ಬುಷ್‌ರನ್ನು ಪ್ರತಿನಿಧಿಸುತ್ತಿದ್ದಾರೆ. ಭಾರತ ಮತ್ತು ಅಮೆರಿಕ ನಡುವೆ ನಾಗರಿಕ ಅಣು ಒಪ್ಪಂದದ ಕುರಿತು ಬಿಕ್ಕಟ್ಟು ಉಂಟಾಗಿರುವ ಸಮಯದಲ್ಲಿ ಇಂತಹ ವಿವಾದಾತ್ಮಕ ಹೇಳಿಕೆ ನೀಡಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿ. ರೋನ್‌ ಸೇನ್‌ರನ್ನು ತಕ್ಷಣ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಸರಕಾರಕ್ಕೆ ಒತ್ತಾಯ ಮಾಡಿದ್ದವು.

ತಾನು ನೀಡಿರುವ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಲೇ, ರೋನ್ ಸೇನ್ ಸ್ಪಷ್ಟೀಕರಣ ನೀಡಿದ್ದಾರೆ. ಅವರು ನೀಡಿರುವ ಸ್ಪಷ್ಟೀಕರಣದಲ್ಲಿ, ವ್ಯಕ್ತಪಡಿಸಿರುವ ಹೇಳಿಕೆಗಳು ವೈಯಕ್ತಿಕವಾಗಿದ್ದು ಸರಕಾರದ ನಿಲುವು ಅಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು
ಪರ್ವತಗಳ ಹಿಂದೆ ಅಡಗಿದ ಮುಸ್ಲಿಂ ಧುರೀಣರು
ಹನೀಫ್ ವೀಸಾ ರದ್ದು ಆದೇಶ ವಜಾ
ಇಂಡೊ-ಜಪಾನ್ ದ್ವಿಪಕ್ಷೀಯ ಸಂಬಂಧ ವೃದ್ದಿಗೆ ಆದ್ಯತೆ
ಭಾರತೀಯ ಮಹಿಳಾ ಪೊಲೀಸರಿಗೆ ವಿಶ್ವಸಂಸ್ಥೆ ಪ್ರಶಂಸೆ
ವಿಮಾನಕ್ಕೆ ಅಗ್ನಿಸ್ಪರ್ಷ: ತಪ್ಪಿದ ಅನಾಹುತ
ರಾಜಕೀಯ ನಿರ್ಬಂಧ ಹಿಂತೆಗೆತ, ಆಯೋಗ ಇಂಗಿತ