ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಅವಳು ಪ್ರೀತಿಗಾಗಿ ಕಾದಿದ್ದಳು
ಸತೀಶ್ ಪಾಗಾದ್
WD
ಅವಳು ಹುಟ್ಟು ಚೆಲುವೆ. ಲಂಡನ್ ನಗರದಲ್ಲಿ ಅವಳು ನಡೆಯುತ್ತಿದ್ದರೆ ರಸಿಕರಿಗೆ ರಸದೌತಣ. ಅಂತಹ ಸುರಸುಂದರಿಯ ಬದುಕು ಹೀಗೆ ಕೊನೆಗೊಳ್ಳುತ್ತದೆ ಎಂದು ಕನಸು ಮನಸಿನಲ್ಲಿ ವೈರಿಯೂ ಕಲ್ಪನೆ ಮಾಡಿರಲಿಕ್ಕಿಲ್ಲ.

ಅವಳು ಡಯಾನಾ ಮೌಂಟಬ್ಯಾಟನ್. ಪ್ರಿನ್ಸ್ ಆಫ್ ವೇಲ್ಸ್ - ಇಂಗ್ಲೆಂಡ್ ರಾಜಕುಮಾರ ಚಾರ್ಲ್ಸ್‌‌ನ ಧರ್ಮಪತ್ನಿ. ಲಾರ್ಡ್ ಮೌಂಟ್ ಬ್ಯಾಟನ್‌ನ ವಂಶದ ಕುಡಿ. ಅವಳದು ಅಂತಹ ಹೇಳಿಕೊಳ್ಳುವಂತಹ ಬದುಕು ಇತ್ತು ಅಲ್ಲಿ. ಅವಳು ಮೊದಲು ಗಂಡನ ಪ್ರೀತಿಗೆ ಸತತ 30 ವರ್ಷಗಳ ಕಾಲ ಕಾದು ಕುಳಿತಳು. ಉಹೂಂ ಜಪ್ಪೆನ್ನಲಿಲ್ಲ ಆಸಾಮಿ. ಗಂಡ ಹೆಂಡಿರು ಅನ್ನಿಸಿಕೊಂಡಿದ್ದಕ್ಕೆ ಇಬ್ಬರು ಮಕ್ಕಳನ್ನು ಮಾಡಿದರು. ಮಕ್ಕಳು ಮಾಡುವಾಗ ಇದ್ದ ಧಾವಂತದ ಪ್ರೀತಿ ಕೊನೆಯವರೆಗೆ ಉಳಿಯಿತಾ? ಉಹೂಂ... ಇಲ್ಲ. ದೂರದ ದಕ್ಷಿಣ ಆಫ್ರಿಕಾದಲ್ಲಿ ಸಾಗಿದ ಅವರ ಮೊದಲ ರಾತ್ರಿಯ ಮಾರನೇ ರಾತ್ರಿ ಹೇಗೆ ಕಳಚಿಕೊಂಡು ಬಿದ್ದಿತ್ತೋ... ಅದೇ ರೀತಿ ಅವರಿಬ್ಬರ ನಡುವಿನ ಧಾವಂತದ ಪ್ರೀತಿ ಸತ್ತು ಬಿದ್ದಿತ್ತು.

ಪ್ರೀತಿಗಾಗಿ ಹಂಬಲಿಸಿ ಜಗತ್ತೆಲ್ಲ ಸುತ್ತಿದಳು ಡಯಾನಾ. ಸತ್ತು ಇಂದಿಗೆ ಬರೋಬ್ಬರಿ ಹತ್ತು ವರ್ಷಗಳು ಕಳೆದು ಹೋಗಿವೆ. ಆದರೂ ಅವಳ ನೆನಪು ಮನಸ್ಸಿನಿಂದ ದೂರವಾಗುತ್ತಿಲ್ಲ. ಯಾಕೆ ಗೊತ್ತಿಲ್ಲ. ಬಹುಶಃ ಪ್ರೀತಿಗಾಗಿ... ಕೇವಲ ಬೊಗಸೆ ತುಂಬಿದ ಪ್ರೀತಿಗಾಗಿ.. 'ರಾಜಕುಮಾರ.. ನೀನು ಬೇಡ, ನಿನ್ನ ಅಂತಸ್ತು ಬೇಡ, ಬರಿ ಪ್ರೀತಿಯೊಂದು ಸಾಕು' ಎಂದು 1992 ರಲ್ಲಿ ಬ್ರಿಟಿಷ್ ಅರಮನೆಯಿಂದ ಹೊರಗೆ ಬಂದುಬಿಟ್ಟಳು.

ಅದು ಒಂದು ಮದುವೆ:
ರಾಜ ಕುವರ ಚಾರ್ಲ್ಸ್‌ನನ್ನು ಮದುವೆಯಾಗುವ ಸಮಯದಲ್ಲಿ ಡಯಾನಾಗೆ ಕೇವಲ 20 ವರ್ಷ. ರಾಜಕುವರ ಚಾರ್ಲ್ಸ್‌ನಿಗೆ 33 ವರ್ಷ. ಒಟ್ಟು 13 ವರ್ಷದ ಅಂತರ. ಯುರೋಪಿಯನ್‌ರ ಪಾಲಿಗೆ 13 ಕೆಟ್ಟ ಸಂಖ್ಯೆ. ಡಯಾನಾ ಪಾಲಿಗೆ ಆಗಿದ್ದು ಅದೇ ಅಲ್ಲವೆ?

ಮದುವೆಯ ನಂತರ ದೂರದ ಆಫ್ರಿಕಾದಲ್ಲಿ ಅವರಿಬ್ಬರ ಮಧುಚಂದ್ರ. ವಿಚಿತ್ರ ನೋಡಿ. ಚಾರ್ಲ್ಸ್‌ನಿಗೆ ಅವಳ ಬಗ್ಗೆ ಖಬರಿಲ್ಲ. ದೂರದ ಇಂಗ್ಲೆಂಡ್‌ನಲ್ಲಿ ತನಗಿಂತ ಹೆಚ್ಚು ವಯಸ್ಸಾದ ಪ್ರೇಯಸಿ ಕ್ಯಾಮಿಲ್ಲಾ ಪಾರ್ಕರ್ ಬಗ್ಗೆ ಒಲವು. ಮರುದಿನ ಅವಳ ಫೋನ್ ಬರ್ತದೆ. ಹ್ಯಾಗಿತ್ತು ಮೊದಲ ರಾತ್ರಿ ಎಂದು ಕೇಳಿದರೆ, ಏನಿಲ್ಲ... ಯಥಾವತ್... ಹುಡುಗಿ ಇನ್ನೂ ಎಳಸು ಎಂದು ಹೇಳ್ತಾನೆ. ಪಕ್ಕದಲ್ಲಿದ್ದ, ಅದೂ 20 ವರ್ಷದ ಹುಡುಗಿಗೆ ಏನಾಗಿರಬೇಡ! ಅವಳಿಗೂ ಪ್ರೀತಿ, ಗಂಡನ ಪ್ರೀತಿ ಅಂತ ಆಸೆ ಇರ್ತದೆ ಅಲ್ವಾ.

ದಶಕದ ವೈವಾಹಿಕ ಜೀವನ
ಏನೂ ಬದಲಾವಣೆ ಇಲ್ಲ. ಗಂಡನ ಪ್ರೀತಿ ಇಲ್ಲದ ಮೇಲೆ ಸಂಸಾರಕ್ಕೆ ಏನು ಬೆಲೆ? ಸುಮ್ಮನೆ ಒಂದು ಹತ್ತು ವರ್ಷಗಳು ಕಳೆದು ಹೋದವು. ಚಾರ್ಲ್ಸ್, ಕ್ಯಾಮಿಲ್ಲಾಳನ್ನು ಬಿಡಲಿಲ್ಲ. ಕೊನೆಗೆ ಡಯಾನಾ ನಿರ್ಧಾರ ಮಾಡಿದಳು, ಮಕ್ಕಳು ವಿಲಿಯಂ, ಹ್ಯಾರಿಯನ್ನು ತೊರೆಯಬೇಕು. ಹೀಗೆ ಇದ್ದರೆ ಸಾವು ಖಚಿತ ಎಂದು 1992ರಲ್ಲಿ ಅರಮನೆಯಿಂದ ಹೊರಗೆ ಬಂದು ಬಿಟ್ಟಳು.

ಬದುಕು:
ವಿಚ್ಛೇದನದ ನಂತರ ಡಯಾನಾ ಪೂರ್ಣ ಬದಲಾಗಿದ್ದಳು. ಬಹುಶಃ ಪುರುಷನ ಸಾಂಗತ್ಯ ತಪ್ಪಿದ ನಂತರವೇ ಹೆಣ್ಣು ಗಟ್ಟಿಗಳಾಗುತ್ತಾಳೆ ಎನ್ನುವುದಕ್ಕೆ ಡಯಾನಾ ಜೀವಂತ ಉದಾಹರಣೆ. ಮೊದಲಿನಿಂದಲೂ ನಿರ್ಗತಿಕರ ಸಹಾಯಕ್ಕೆ ಧಾವಿಸುತ್ತಿದ್ದವಳಿಗೆ ಪೂರ್ಣ ಸ್ವಾತಂತ್ರ್ಯ ದೊರೆತಿದೆ. ರೋಗಿಗಳನ್ನು, ನಿರ್ಗತಿಕರನ್ನು ತನ್ನ ಪ್ರೀತಿಯಲ್ಲಿ ಬರಸೆಳೆದು ಅಪ್ಪಿಕೊಂಡು ಬಿಟ್ಟಳು. ಬೊಗಸೆ ಪ್ರೀತಿಗೆ ತುಡಿಯುತ್ತಿದ್ದ ಜೀವ. ಪ್ರೀತಿ, ಸಹಾಯ ಎಂಬ ಶಬ್ದಗಳ ಹೆಸರನ್ನು ಕೇಳಿದರಾಯಿತು, ಅವನ್ನು ಮೊಗೆ ಮೊಗೆದು ಧಾರೆ ಎರೆದು ಬಿಟ್ಟಳು. ಅದು ಎಂತಾ ಪ್ರೀತಿ... ಉಗಾಂಡಾಕ್ಕೆ ತೆರಳಿ ಅಲ್ಲಿ ಲ್ಯಾಂಡ್ ಮೈನ್ಸ್‌ಗಳಿಂದ ಮಕ್ಕಳ ಮೇಲಾಗುತ್ತಿದ್ದ ದುಷ್ಪರಿಣಾಮದ ವಿರುದ್ಧ ತನ್ನ ದ್ವನಿ ಎತ್ತಿದಳು. ಅಕಸ್ಮಿಕವಾಗಿ ಸಾಯುವ ಕೆಲವೇ ದಿನಗಳ ಮುನ್ನ ಭಾರತಕ್ಕೆ ಬಂದಿದ್ದಳು. ಮದರ್ ತೆರೆಸಾಳನ್ನು ಭೇಟಿಯಾಗಿದ್ದಳು. ಮದರ್ ತೆರೆಸಾ- ಡಯಾನಾ ನನ್ನ ಮಗಳು ಎಂದದ್ದಕ್ಕೆ ನಾನಿನ್ನೂ ಹುಡುಗಿ ಎಂದು ಹೇಳಿದ್ದಳು.

ಜಗತ್ತಿನಲ್ಲಿ ಮೊದಲ ಬಾರಿಗೆ ಏಡ್ಸ್ ರೋಗಿಯೊಂದಿಗೆ ಫೋಟೊ ತೆಗೆಸಿಕೊಳ್ಳುವ ಮೂಲಕ, "ಅದ್ಯಾವ ಕಾರಣದಿಂದಲೋ ವಾಸಿಯಾಗಲಾರದ ರೋಗಕ್ಕೆ ತುತ್ತಾಗಿ, ಕ್ಷಣಕ್ಷಣಕ್ಕೂ ಸಾವಿನ ದವಡೆಗೆ ಹೋಗುವವರತ್ತ ತಿರಸ್ಕಾರದ ನೋಟ ಬೇಡ, ಪ್ರೀತಿ ಇರಲಿ" ಎಂದು ಹೇಳಿದ್ದಳು. ಅಲ್ಲಿಂದ ಬದಲಾಯಿತು ಏಡ್ಸ್ ರೋಗದತ್ತ ಜಗತ್ತಿನ ನೋಟ. ಆಕ್ಚುವಲಿ ಡಯಾನಾ ತನ್ನ ಜೀವನದಲ್ಲಿ ಪೂರ್ಣವಾಗಿ ದೊರೆತ ಐದು ವರ್ಷಗಳಲ್ಲಿ ಮಾಡಬೇಕಾದದ್ದನ್ನೊಂದನ್ನು ಸಾಧಿಸಿ ಬಿಟ್ಟಿದ್ದಳು.
ಮತ್ತಷ್ಟು
12 ದ.ಕೊರಿಯ ಒತ್ತೆಯಾಳುಗಳ ಬಿಡುಗಡೆ
ಮುಶರ್ರಫ್ ವಿರುದ್ಧ ಅರ್ಜಿ ಅಂಗೀಕಾರ
ಸಮವಸ್ತ್ರ ತ್ಯಜಿಸಲಿರುವ ಮುಷರ್ರಫ್:ಭುಟ್ಟೊ
ಗಡಿ ವಿವಾದದ ಪ್ರಾಮಾಣಿಕ ಇತ್ಯರ್ಥಕ್ಕೆ ಚೀನಾ ಸಲಹೆ
ಸ್ಫೋಟಗಳಲ್ಲಿ ಕೈವಾಡ: ಪಾಕ್ ನಿರಾಕರಣೆ
ಭಾರತಕ್ಕೆ ಯುರೇನಿಯಂ ಮಾರಲು ಅವಕಾಶವಿಲ್ಲ