ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಹೌದು;ಮಸೀದಿಗಳಲ್ಲಿ ಬೇಹುಗಾರಿಕೆ ನಡೆಸ್ತೇವೆ: ಎಫ್‌ಬಿಐ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೌದು;ಮಸೀದಿಗಳಲ್ಲಿ ಬೇಹುಗಾರಿಕೆ ನಡೆಸ್ತೇವೆ: ಎಫ್‌ಬಿಐ
ಮಸೀದಿಗಳಲ್ಲಿ ಏನು ನಡೆಯುತ್ತಿದೆ...
ಅಮೆರಿಕದ ಮಸೀದಿಗಳಲ್ಲಿ ಬೇಹುಗಾರಿಕೆ ನಡೆಸುತ್ತಿರುವ ಮಹತ್ವದ ನಿರ್ಧಾರವನ್ನು ಎಫ್‌ಬಿಐ ನಿರ್ದೇಶಕ ರೋಬರ್ಟ್ ಮುಲ್ಲೆರ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಮಸೀದಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಸ್ಲಿಂ ಸಂಘಟನೆ, ಮುಲ್ಲಾಗಳು ಉಗ್ರಗಾಮಿ ಸಂಘಟನೆಗಳೊಂದಿಗೆ ಕೈಜೋಡಿಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಸಮರ್ಥನೆ ನೀಡಿದೆ.

ದಕ್ಷಿಣ ಕ್ಯಾಲಿಫೋರ್ನಿಯಾದ ಮಸೀದಿಗಳಲ್ಲಿ ಏನು ಚಟುವಟಿಕೆ ನಡೆಯುತ್ತಿದೆ? ಯಾರೊಂದಿಗೆ ಸಂಪರ್ಕ ಇದೆ? ಅಲ್ಲಿ ಬಂದು-ಹೋಗುವವರ ಬಗ್ಗೆ ನಿಗಾ ಇತ್ಯಾದಿ ವಿಷಯಗಳ ಜಾಡು ಹಿಡಿಯುವ ನಿಟ್ಟಿನಲ್ಲಿ ಎಫ್‌ಬಿಐ ಬೇಹುಗಾರಿಕೆಯನ್ನು ನಿಯೋಜಿಸಿದೆ. ನಾವು ಸ್ಥಳಗಳ ಬಗ್ಗೆ ಪರಿಶೀಲನೆ ನಡೆಸುವುದಿಲ್ಲ, ಕೇವಲ ವೈಯಕ್ತಿಕ ನೆಲೆಯಲ್ಲಿ ಮಸೀದಿಗಳಲ್ಲಿನ ಮುಲ್ಲಾಗಳು, ಸಂಘಟನೆ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಮುಲ್ಲೆರ್ ತಿಳಿಸಿದ್ದಾರೆ.

ಅಮೆರಿಕದ ಮಸೀದಿ, ಇಸ್ಲಾಂ ಸಂಘಟನೆ ಹಾಗೂ ಮುಲ್ಲಾಗಳ ಮೇಲೆ ಎಫ್‌ಬಿಐ ಬೇಹುಗಾರಿಕೆಯನ್ನು ಇಟ್ಟು ನಿಗಾ ವಹಿಸುತ್ತಿರುವ ಬಗ್ಗೆ ಮಿಚಿಗನ್ ಮುಸ್ಲಿಂ ಸಂಘಟನೆಯೊಂದು ಕಾನೂನು ಇಲಾಖೆಗೆ ದೂರಿರುವ ಬೆನ್ನಲ್ಲೇ ಮುಲ್ಲೆರ್ ಈ ಹೇಳಿಕೆ ಹೊರಬಿದ್ದಿದೆ.

ಮಸೀದಿಗಳಲ್ಲಿ ಅಥವಾ ಅಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗೆ ಸಂಬಂಧಿಸಿದಂತೆ ಯಾವುದಾದರು ಸಾಕ್ಷಿ ಅಥವಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ಮಾಹಿತಿ ದೊರೆತಲ್ಲಿ ನಾವು ಅವರನ್ನು ತನಿಖೆಗೆ ಒಳಪಡಿಸುತ್ತೇವೆ ಎಂದು ಸ್ಪಷ್ಟಪಡಿಸಿರುವ ಅವರು, ನಾವು ಆ ಕಾರ್ಯವನ್ನು ಮುಂದುವರಿಸುವುದಾಗಿ ಖಚಿತಪಡಿಸಿದ್ದಾರೆ.

ನಾವು ಮುಸ್ಲಿಂ ವಿರೋಧಿಗಳಲ್ಲ, ಅಮೆರಿಕದಲ್ಲಿರುವ ಮುಸ್ಲಿಂ ಬಾಂಧವರು ತುಂಬಾ ಒಳ್ಳೆಯವರು ಆದರೆ ಮುಂದೆ ನಡೆಯುವ ಅನಾಹುತದ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಇಂತಹ ತನಿಖೆಗೆ ಮುಂದಾಗಿರುವುದಾಗಿ ವಿವರಿಸಿದ್ದಾರೆ.

ಭಾರತದ ಹಲವು ರಾಜ್ಯಗಳಲ್ಲಿನ ಮಸೀದಿಗಳಲ್ಲಿ ಭಯೋತ್ಪಾದನೆ ಚಟುವಟಿಕೆಗೆ ಕುಮ್ಮುಕ್ಕು ನೀಡಲಾಗುತ್ತಿದೆ ಹಾಗೂ ಅಲ್ಲಿನ ಮುಲ್ಲಾಗಳ ಬೆಂಬಲ ಕೂಡ ಇದೆ ಎಂಬ ಕುರಿತು ಆಯೋಗದ ಕೆಲವು ವರದಿಗಳು ತಿಳಿಸಿವೆ. ಆದರೂ ಆಡಳಿತಯಂತ್ರ ವೋಟ್ ಬ್ಯಾಂಕ್ ರಾಜಕಾರಣದಿಂದಾಗಿ ಭಯೋತ್ಪಾದನೆ ಚಟುವಟಿಗಳಿಗೆ ತಡೆಯೊಡ್ಡಲು ಕಠಿಣ ಕ್ರಮ ಕೈಗೊಳ್ಳಲು ವಿಫಲವಾಗಿವೆ ಎಂಬ ಆರೋಪವನ್ನು ಪ್ರತಿಪಕ್ಷಗಳು ಮಾಡುತ್ತ ಬಂದಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ : ಆತ್ಮಾಹುತಿ ದಾಳಿಗೆ 14 ಬಲಿ
ಭಾರತ-ಕ್ಯೂಬಾ ತಂತ್ರಜ್ಞಾನ ಒಪ್ಪಂದಕ್ಕೆ ಸಹಿ
ಮಸೀದಿಯಲ್ಲಿ ಗೋಲಿಬಾರಿಗೆ 11ಬಲಿ
ತಾಲಿಬಾನ್ ವರಿಷ್ಠ ಫಜುಲ್ಲಾ ಕಾರಸ್ಥಾನ ಧ್ವಂಸ
ಕೆಲವು ಭಾರತೀಯರ ಮೇಲೆ ಜನಾಂಗೀಯ ಹಲ್ಲೆ ನಡೆದಿದೆ: ಆಸ್ಟ್ರೇಲಿಯಾ
'ಭಾರತ ಕೊನೆಗೂ ನೆರವಿಗೆ ಬರಲಿಲ್ಲ': ಲಂಕಾ ತಮಿಳರು