ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ನೆಹರು ಬಳಿಕ ಯೆಕೆಟೆರಿನ್‌ಬರ್ಗ್‌ಗೆ ಸಿಂಗ್ ಭೇಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೆಹರು ಬಳಿಕ ಯೆಕೆಟೆರಿನ್‌ಬರ್ಗ್‌ಗೆ ಸಿಂಗ್ ಭೇಟಿ
ಜವಾಹರಲಾಲ್ ನೆಹರೂ ಬಳಿಕ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು 276 ವರ್ಷಗಳಷ್ಟು ಹಳೆಯದಾಗ ಉರಾಲ್ ಪರ್ವತಗಳಲ್ಲಿರುವ ರಷ್ಯಾದ ನಗರ ಯೆಕಟೆರಿನ್‌ಬರ್ಗ್ ನಗರಕ್ಕೆ ಮಂಗಳವಾರ ಭೇಟಿ ನೀಡಲಿದ್ದಾರೆ. ವಿಶ್ವವಿಖ್ಯಾತ ತಾಜ್‌ಮಹಲ್ ಅಲಂಕಾರಕ್ಕೆ ಹರಳುಗಳನ್ನು ಇಲ್ಲಿಂದಲ್ಲೇ ತಂದಿತ್ತೆಂದು ಹೇಳಲಾಗಿದೆ.

ಯೆಕಟೆರಿನ್‌ಬರ್ಗ್‌ನಲ್ಲಿ ಪ್ರಧಾನಮಂತ್ರಿ ಬ್ರೆಜಿಲ್-ರಷ್ಯಾ-ಭಾರತ-ಚೀನಾ ಸಮ‌ೂಹ ಮತ್ತು 6 ರಾಷ್ಟ್ರಗಳ ಶಾಂಗಾಯ್ ಸಹಕಾರ ಸಂಘಟನೆಯ ಎರಡು ಶೃಂಗಸಭೆಗಳಲ್ಲಿ ಭಾಗವಹಿಸಲಿದ್ದಾರೆ.ಹಿಂದಿನ ಸೋವಿಯತ್ ರಷ್ಯಾಕ್ಕೆ ಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ತಮ್ಮ ಪುತ್ರಿ ಇಂದಿರಾಗಾಂಧಿ ಜತೆ ಭಾರೀ ಎಂಜಿನಿಯರಿಂಗ್ ಘಟಕ 'ಉರಾಲ್‌ಮಶ್' ಇರುವ ವಿಶ್ವವಿಖ್ಯಾತ ಕೈಗಾರಿಕೆ ನಗರಕ್ಕೆ ಭೇಟಿ ನೀಡಿದ್ದರು.

ನೆಹರೂ ಉರಾಲ್‌ಮಶ್ ಘಟಕದ ಬಗ್ಗೆ ಅತೀವ ಆಸಕ್ತಿ ತೋರಿಸಿಬಳಿಕ ಅಲ್ಲಿಂದ ಭಿಲಾಯ್ ಉಕ್ಕಿನ ಕಾರ್ಖಾನೆ ಮತ್ತಿತರ ಕೈಗಾರಿಕೆಗಳಿಗೆ ಉಪಕರಣವನ್ನು ಪೂರೈಕೆ ಮಾಡಿತ್ತು. ತಮಿಳುನಾಡಿನಲ್ಲಿ ನಿರ್ಮಾಣವಾಗುತ್ತಿರುವ ಕುಂಡನ್‌ಕುಲಂ ಪರಮಾಣು ವಿದ್ಯುತ್ ಸ್ಥಾವರಕ್ಕೆ ಕೂಡ ಉರಾಲ್‌ಮಶ್ ಉಪಕರಣ ಸರಬರಾಜು ಮಾಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾತುಕತೆ ಮ‌ೂಲಕ ಪ್ರಶ್ನೆಗೆ ಪರಿಹಾರ: ಬಾಂಗ್ಲಾ
ಪಾಕ್: 35 ತಾಲಿಬಾನ್ ಉಗ್ರರ ಬಲಿ
ಏರ್ ಫ್ರಾನ್ಸ್ ವಿಮಾನ ಆಕಾಶದಲ್ಲೇ ಇಬ್ಭಾಗ
3.1 ಕೋಟಿ ರೂ.ಗೆ ಹುಸೇನ್ ವರ್ಣಚಿತ್ರ ಹರಾಜು
ಪಾಕಿಸ್ತಾನದಲ್ಲಿ ಬಾಂಬ್ ಸ್ಪೋಟಕ್ಕೆ 8 ಬಲಿ
ಚುನಾವಣೆ ಫಲಿತಾಂಶಕ್ಕೆ ಕಾಯುತ್ತಿದ್ದ ಪ್ರಭಾಕರನ್