ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಮೇಲೆ ಹಲ್ಲೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಮೇಲೆ ಹಲ್ಲೆ
ಆಸ್ಟ್ರೇಲಿಯದಲ್ಲಿ ಹಿಂಸಾತ್ಮಕ ಜನಾಂಗೀಯ ದಾಳಿಗಳ ಪಟ್ಟಿಗೆ ಒಂದಾದ ಮೇಲೊಂದು ಸೇರ್ಪಡೆಯಾಗುತ್ತಿದ್ದು, ಅದಕ್ಕೆ ಕೊನೆಯೇ ಇಲ್ಲವೆಂಬಂತಾಗಿದೆ. ಮೆಲ್ಬೋರ್ನ್ ಪೂರ್ವ ಉಪನಗರದಲ್ಲಿ ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಜನಾಂಗೀಯ ದ್ವೇಷದ ದಳ್ಳುರಿಗೆ ಗುರಿಯಾಗಿದ್ದಾನೆ.

ಶುಕ್ರವಾರ ರಾತ್ರಿ ಬೊರೊನಿಯದಲ್ಲಿ ಕಾರಿನಲ್ಲಿ ಕುಳಿತುಕೊಳ್ಳಲು ತೆರಳುತ್ತಿದ್ದ 20 ವರ್ಷ ವಯಸ್ಸಿನ ಸನ್ನಿ ಬಜಾಜ್ ಎಂಬ ಭಾರತೀಯನನ್ನು ಜನಾಂಗೀಯ ನಿಂದನೆ ಮಾಡಿದ್ದಲ್ಲದೇ ಇಬ್ಬರು ವ್ಯಕ್ತಿಗಳು ಮುಷ್ಠಿಯಿಂದ ಗುದ್ದಿದರೆಂದು ವರದಿಯಾಗಿದೆ. ಅವರು ನನ್ನ ಬಳಿ ಬಂದು ಹಣಕ್ಕಾಗಿ ಒತ್ತಾಯಿಸಿದರು. ಹಣವಿಲ್ಲವೆಂದು ಹೇಳಿದಾಗ ಹಲ್ಲೆ ಮಾಡಿದರೆಂದು ಡೀಕಿನ್ ವಿವಿಯ ವಿದ್ಯಾರ್ಥಿ ಬಜಾಜ್ ತಿಳಿಸಿದ್ದಾಗಿ 'ದಿ ಏಜ್' ವರದಿ ಮಾಡಿದೆ.

ಅವರು ತಮ್ಮ ಕಾರಿನ ಬಾಗಿಲನ್ನು ಬಡಿದು ತಲೆ ಮತ್ತು ಹೊಟ್ಟೆಯ ಮೇಲೆ ಮುಷ್ಠಿಪ್ರಹಾರ ಮಾಡಿದರು ಮತ್ತು ಜನಾಂಗೀಯ ನಿಂದನೆ ಮಾಡಿದರೆಂದು ದೆಹಲಿ ಮ‌ೂಲದ ವಿದ್ಯಾರ್ಥಿ ದೂರಿದ್ದಾನೆ. ತಮ್ಮ ಕೈಯ ಬೆರಳು ಮುರಿದಿದ್ದು ಮ‌ೂಗಿನಲ್ಲಿ ರಕ್ತ ಸೋರಿತೆಂದು ಅವರು ಹೇಳಿದ್ದಾರೆ.

ದಾಳಿಕೋರರು 20ರ ಪ್ರಾಯದಲ್ಲಿದ್ದು ಒಬ್ಬ ಬಿಳಿಯ ಮತ್ತು ಇನ್ನೊಬ್ಬ ಆಫ್ರಿಕ ಮ‌ೂಲದವನೆಂದು ಬಜಾಜ್ ತಿಳಿಸಿದ್ದಾರೆ. ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಆಸ್ಟ್ರೇಲಿಯದಲ್ಲಿ ಭಾರತೀಯರ ಮೇಲೆ 14ನೇ ದಾಳಿ ಇದಾಗಿದ್ದು, ಆಸ್ಟ್ರೇಲಿಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನೆಹರು ಬಳಿಕ ಯೆಕೆಟೆರಿನ್‌ಬರ್ಗ್‌ಗೆ ಸಿಂಗ್ ಭೇಟಿ
ಮಾತುಕತೆ ಮ‌ೂಲಕ ಪ್ರಶ್ನೆಗೆ ಪರಿಹಾರ: ಬಾಂಗ್ಲಾ
ಪಾಕ್: 35 ತಾಲಿಬಾನ್ ಉಗ್ರರ ಬಲಿ
ಏರ್ ಫ್ರಾನ್ಸ್ ವಿಮಾನ ಆಕಾಶದಲ್ಲೇ ಇಬ್ಭಾಗ
3.1 ಕೋಟಿ ರೂ.ಗೆ ಹುಸೇನ್ ವರ್ಣಚಿತ್ರ ಹರಾಜು
ಪಾಕಿಸ್ತಾನದಲ್ಲಿ ಬಾಂಬ್ ಸ್ಪೋಟಕ್ಕೆ 8 ಬಲಿ